ವಿಶ್ವದ ನಾಲ್ಕನೇ ಅತಿ ದೊಡ್ಡ ರೈಲು ಜಾಲ ಭಾರತೀಯ ರೈಲ್ವೆ. ಭಾರತದ ಎಲ್ಲಾ ರೈಲು ನಿಲ್ದಾಣಗಳಲ್ಲೂ ಪ್ಲಾಟ್‌ಫಾರಂ ಇರುತ್ತೆ. ಪ್ರಯಾಣಿಕರು ರೈಲೇರಲು ಪ್ಲಾಟ್‌ಫಾರಂ ಬಳಸುತ್ತಾರೆ. ಆದ್ರೆ 1ನೇ ಪ್ಲಾಟ್‌ಫಾರಂ ಇಲ್ಲದ ವಿಚಿತ್ರ ರೈಲು ನಿಲ್ದಾಣ ಭಾರತದಲ್ಲಿದೆ.
24
ಬರೌನಿ ರೈಲು ನಿಲ್ದಾಣ
ಈ ರೈಲು ನಿಲ್ದಾಣ ಬಿಹಾರದಲ್ಲಿದೆ. ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ 1860ರಲ್ಲಿ ಖಗಡಾ ರೈಲು ನಿಲ್ದಾಣ ಆರಂಭವಾಗಿತ್ತು. ಒಂದು ಪ್ಲಾಟ್‌ಫಾರಂ ಇದ್ದ ಈ ನಿಲ್ದಾಣ 1883 ರಲ್ಲಿ ಮುಚ್ಚಿಹೋಯ್ತು. ನಂತರ 3 ಕಿ.ಮೀ. ದೂರದಲ್ಲಿ ಬರೌನಿ ರೈಲು ನಿಲ್ದಾಣ ನಿರ್ಮಾಣವಾಯಿತು.
ಬಿಹಾರದ ಬ್ಯುಸಿ ರೈಲು ನಿಲ್ದಾಣಗಳಲ್ಲಿ ಬರೌನಿ ಒಂದು. ದಿನಾ 1 ಲಕ್ಷ ಜನ ಇಲ್ಲಿಂದ ಪ್ರಯಾಣ ಮಾಡ್ತಾರೆ. ಈ ನಿಲ್ದಾಣದಲ್ಲಿ 1ನೇ ಪ್ಲಾಟ್‌ಫಾರಂ ಇಲ್ಲ. ಯಾಕಂದ್ರೆ ಖಗಡಾ ನಿಲ್ದಾಣಕ್ಕೆ 1ನೇ ಪ್ಲಾಟ್‌ಫಾರಂ ಇದ್ದಿದ್ದರಿಂದ, ಬರೌನಿಗೆ 1ನೇ ಪ್ಲಾಟ್‌ಫಾರಂ ಕೊಟ್ಟಿಲ್ಲ.
44
ಹೀಗಾಗಿ 2ನೇ ಪ್ಲಾಟ್‌ಫಾರಂನಿಂದ ಬರೌನಿ ನಿಲ್ದಾಣ ಕಾರ್ಯನಿರ್ವಹಿಸುತ್ತಿದೆ. 1ನೇ ಪ್ಲಾಟ್‌ಫಾರಂ ಇಲ್ಲದ ಏಕೈಕ ರೈಲು ನಿಲ್ದಾಣ ಎಂಬ ಹೆಗ್ಗಳಿಕೆ ಬರೌನಿಗೆ ಸಂದಿದೆ. ಒಟ್ಟು 9 ಪ್ಲಾಟ್‌ಫಾರಂಗಳು ಇಲ್ಲಿವೆ. ಬಿಹಾರದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಬರೌನಿ ಕೂಡ ಒಂದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.