ಯಶ್ ಟಾಕ್ಸಿಕ್ ಚಿತ್ರಕ್ಕೆ ಕಿಯಾರಾ ಅಡ್ವಾನಿ ಪಡೆದ ಸಂಭಾವನೆ ಇಷ್ಟೊಂದಾ?

Published : Mar 21, 2025, 05:17 PM ISTUpdated : Mar 21, 2025, 05:23 PM IST

ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಟಾಕ್ಸಿಕ್ ಮೇಲೆ ಇದೀಗ ಭಾರತೀಯ ಚಿತ್ರರಂಗ ಕಾದು ಕುಳಿತಿದೆ.  ಈ ಚಿತ್ರದ ಕುರಿತು ಮತ್ತೊಂದು ಅಪ್‌ಡೇಟ್ ಹೊರಬಿದ್ದಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಕಿಯಾರಾ ಅಡ್ವಾನಿ ಪಡೆದ ಸಂಭಾವನೆ ಎಷ್ಟು ಗೊತ್ತಾ?

PREV
15
ಯಶ್ ಟಾಕ್ಸಿಕ್ ಚಿತ್ರಕ್ಕೆ ಕಿಯಾರಾ ಅಡ್ವಾನಿ ಪಡೆದ ಸಂಭಾವನೆ ಇಷ್ಟೊಂದಾ?

ಕೆಜಿಎಫ್ 2 ಸಿನಿಮಾ ಬಳಿಕ ರಾಕಿಂಗ್ ಸ್ಟಾರ್ ಯಶ್ ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೀಗ ಯಶ್ ಅಭಿಯನದ ಟಾಕ್ಸಿಕ್ ಚಿತ್ರ ಶೂಟಿಂಗ್ ನಡೆಸುತ್ತಿದೆ. ಈ ಚಿತ್ರದ ನಿರೀಕ್ಷೆಗಳು ಹೆಚ್ಚಾಗಿದೆ. ಇತ್ತೀಚೆಗೆ ಟಾಕ್ಸಿಕ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಭಾರಿ ಸದ್ದು ಮಾಡಿತ್ತು. ಯಸ್ ಸ್ಟೈಲ್, ರೆಟ್ರೋ ಕಾರು ಸೇರಿದಂತೆ ಎಲ್ಲವೂ ಅಭಿಮಾನಿಗಳ ಕುತೂಹಲ ಹೆಚ್ಚಿಸಿತ್ತು.

25
kiara advani

ಯಶ್ ಅಭಿನಯದ ಕೆಜಿಎಫ್ ಚಿತ್ರದ ಶೂಟಿಂಗ್ ಹಾಗೂ ಇತರ ಕೆಲಸಗಳು ಭರದಿಂದ ಸಾಗಿದೆ. ಇದೀಗ ಟಾಕ್ಸಿಕ್ ಚಿತ್ರದ ಮಹತ್ವದ ಅಪ್‌ಡೇಟ್ ಹೊರಬಿದ್ದಿದೆ. ಟಾಕ್ಸಿಕ್ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರದಲ್ಲಿ ಕಾಣಸಿಕೊಂಡಿದ್ದಾರೆ. ಕಿಯಾರಾ ಭಾಗದ ಶೂಟಿಂಗ್‌ಗೆ ಬಹುತೇಕ ಪೂರ್ಣಗೊಂಡಿದೆ. 

35

ಕಿಯಾರ ಅಡ್ವಾನಿ ಟಾಕ್ಸಿಕ್ ಚಿತ್ರಕ್ಕಾಗಿ ಬರೋಬ್ಬರಿ 15 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಇದೇ ಮೊದಲ ಬಾರಿಗೆ ಕಿಯಾರ ಅಡ್ವಾಣಿ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದರೆ. ಡೆಬ್ಯೂ ಫಿಲ್ಮ್‌ನಲ್ಲಿ ಕಿಯಾರಾ ಅಡ್ವಾಣಿ ದಾಖಲೆ ಮೊತ್ತ ಸಂಭಾವನೆಯಾಗಿ ಪಡೆದಿದ್ದಾರೆ.

45

ಕಿಯಾರಾ ಅಡ್ವಾಣಿ ಬಾಲಿವುಡ್‌ನಲ್ಲೂ ಇಷ್ಟೊಂದು ಸಂಭಾವನೆ ಪಡೆದಿಲ್ಲ. ದುಬಾರಿ ಸಂಭಾವನೆ ಪಡೆಯು ಮೂಲಕ ಕಿಯಾರಾ ಅಡ್ವಾಣಿ ದಿಗ್ಗಜ ನಟಿಯರ ಸಾಲಿಗೆ ಸೇರಿದ್ದಾರೆ. ಒಂದೇ ಸಿನಿಮಾಗೆ ಗರಿಷ್ಠ ಸಂಭಾವನೆ ಪಡೆದ ನಟಿಯರಾದ ದೀಪಿಕಾ ಪಡುಕೋಣೆ, ಪ್ರಿಯಾಂಕ ಚೋಪ್ರಾ ಸೇರಿದಂತೆ ಬಾಲಿವುಡ್ ನಟಿಯರ ಸಾಲಿಗೆ ಕಿಯಾರ ಅಡ್ವಾಣಿ ಸೇರಿಕೊಂಡಿದ್ದಾರೆ.

55

ಕಿಯಾರಾ ಅಡ್ವಾಣಿ ಪ್ರೆಗ್ಮೆಂಟ್ ಆಗಿದ್ದಾರೆ. ಹೀಗಾಗಿ ಇತರ ಯಾವುದೇ ಚಿತ್ರಗಳನ್ನು ಕಿಯಾರ ಅಡ್ವಾಣಿ ಇತರ ಯಾವುದೇ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಆದರೆ ಯಶ್ ಅಭಿನಯದ ಟಾಕ್ಸಿಕ್ ಚಿತ್ರವನ್ನು ಬಿಟ್ಟಿಲ್ಲ. ಕನ್ನಡ ಸಿನಿಮಾ, ಯಶ್ ಅಭಿನಯ, ಅತೀ ದೊಡ್ಡ ಬ್ಯಾನರ್ ಚಿತ್ರವಾಗಿರುವ ಕಾರಣ ಕಿಯಾರ ಕೂಡ ಶೂಟಿಂಗ್‌ನಿಂದ ಹಿಂದೆ ಸರಿಯಲು ನಿರಾಕರಿಸಿದ್ದಾರೆ.

Read more Photos on
click me!

Recommended Stories