ಪುನೀತ್‌ ಮಾಡಿದ ಸಹಾಯದಿಂದ ಜೀವನ ರೂಪಿಸಿಕೊಂಡ ಟ್ಯಾಕ್ಸಿ ಡ್ರೈವರ್‌ ಕಥೆ ಅಪ್ಪು ಟ್ಯಾಕ್ಸಿ

ಪುನೀತ್‌ ರಾಜ್‌ಕುಮಾರ್‌ ನೆನಪಿನಲ್ಲಿ ಜಗ್ಗು ಶಿರಸಿ ನಿರ್ದೇಶಿಸಿರುವ ಹೊಸ ಸಿನಿಮಾ ‘ಅಪ್ಪು ಟ್ಯಾಕ್ಸಿ’. ಈ ಸಿನಿಮಾ 2026 ಮಾರ್ಚ್ 17ರ ಪುನೀತ್‌ ರಾಜ್‌ಕುಮಾರ್‌ ಜನ್ಮದಿನದಂದು ಬಿಡುಗಡೆಯಾಗಲಿದೆ. 

appu taxi to pay tribute to puneeth rajkumar gvd

ಪುನೀತ್‌ ರಾಜ್‌ಕುಮಾರ್‌ ನೆನಪಿನಲ್ಲಿ ಜಗ್ಗು ಶಿರಸಿ ನಿರ್ದೇಶಿಸಿರುವ ಹೊಸ ಸಿನಿಮಾ ‘ಅಪ್ಪು ಟ್ಯಾಕ್ಸಿ’. ದಿಲೀಪ್ ಕುಮಾರ್.ಎಚ್.ಆರ್ ಕಾರ್ಯಕಾರಿ ನಿರ್ಮಾಪಕ. ಹಾಲಿವುಡ್‌ನಲ್ಲಿ ಅನಿಮೇಟೆಡ್‌ ಗ್ರಾಫಿಕ್ಸ್ ಕ್ರಿಯೇಟರ್ ಆಗಿ ಗುರುತಿಸಿಕೊಂಡಿರುವ ಶಾಮ್ ರೇ ಈ ಚಿತ್ರಕ್ಕೆ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ.

appu taxi to pay tribute to puneeth rajkumar gvd

ಪುನೀತ್‌ ಮಾಡಿದ ಸಹಾಯದಿಂದ ತನ್ನ ಜೀವನ ರೂಪಿಸಿಕೊಂಡ ಟ್ಯಾಕ್ಸಿ ಡ್ರೈವರ್‌ ಒಬ್ಬರ ನೈಜ ಬದುಕನ್ನಾಧರಿಸಿದ ಕಥೆ ಈ ಚಿತ್ರದ್ದು.
 


‘ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಿರ್ಮಾಣ ಆಗಲಿದೆ. ಹಾಲಿವುಡ್‌ ಮಟ್ಟದ ತಾಂತ್ರಿಕತೆ ಇರುವ ಚಿತ್ರದಲ್ಲಿ ಭಾರತೀಯ ಸಿನಿಮಾರಂಗದ ಹಲವು ಕಲಾವಿದರು ನಟಿಸಲಿದ್ದಾರೆ’ ಎಂದು ದಿಲೀಪ್ ಕುಮಾರ್.ಎಚ್.ಆರ್ ತಿಳಿಸಿದ್ದಾರೆ. 

ಈ ಸಿನಿಮಾ 2026 ಮಾರ್ಚ್ 17ರ ಪುನೀತ್‌ ರಾಜ್‌ಕುಮಾರ್‌ ಜನ್ಮದಿನದಂದು ಬಿಡುಗಡೆಯಾಗಲಿದೆ. ನಿಜ ಜೀವನದ ಘಟನೆಗಳನ್ನು ಆಧರಿಸಿದ 'ಅಪ್ಪು ಟ್ಯಾಕ್ಸಿ' ಚಿತ್ರವು, ಪುನೀತ್ ಸ್ವತಃ ಪ್ರತಿನಿಧಿಸಿದ ಮೌಲ್ಯಗಳು ಮತ್ತು ಆದರ್ಶಗಳ ಮೂಲಕ, ಮನುಷ್ಯನ ಜೀವನವನ್ನು ಪರಿವರ್ತಿಸಲು ಸಹಾಯ ಮಾಡುವ ಟ್ಯಾಕ್ಸಿ ಚಾಲಕನ ಪ್ರಯಾಣದ ಕುರಿತು ಹೇಳುತ್ತದೆ. 

ಈ ಚಿತ್ರವು ನಟ ತನ್ನ ಕಾರ್ಯಗಳು ಮತ್ತು ಮಾತುಗಳ ಮೂಲಕ ಅನೇಕರ ಜೀವನದ ಮೇಲೆ ಹೇಗೆ ಪರಿಣಾಮ ಬೀರಿದರು ಎಂಬುದನ್ನು ಎತ್ತಿ ತೋರಿಸುತ್ತದೆ.

Latest Videos

vuukle one pixel image
click me!