ರಕ್ಷಾಬಂಧನ ಆಚರಿಸಿದ ಐರಾ- ಯಥರ್ವ್: ಫೋಟೋ ವೈರಲ್!

First Published | Aug 12, 2022, 11:53 AM IST

ಅದ್ಧೂರಿಯಾಗಿ ರಕ್ಷಾಬಂಧನ ಆಚರಿಸಿದ ಐರಾ-ಯಥರ್ವ್, ಯಶ್-ನಂದಿನಿ ಮತ್ತು ರಾಧಿಕಾ-ಗೌರವ್....

ಸ್ಯಾಂಡಲ್‌ವುಡ್‌ ರಾಕಿಂಗ್ ಕಪಲ್ ಯಶ್ ಮತ್ತು ರಾಧಿಕಾ ಪಂಡಿತ್ ಮಕ್ಕಳು ಐರಾ ಮತ್ತು ಯಥರ್ವ್‌ ರಕ್ಷಾಬಂಧನ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.

ಐರಾ ಯಥರ್ವ್‌ಗೆ ರಾಖಿ ಕಟ್ಟುತ್ತಿರುವ ಪ್ರತಿಯೊಂದು ಕ್ಷಣವನ್ನು ಕ್ಲಿಕ್ ಮಾಡಲಾಗಿದೆ. ಇನ್‌ಸ್ಟಾಗ್ರಾಂನಲ್ಲಿ ರಾಧಿಕಾ ಹಂಚಿಕೊಂಡಿದ್ದಾರೆ.

Tap to resize

'ಅಣ್ಣ ತಂಗಿ ಸಂಬಂಧ ಬಿಡಿಸಲಾಗದ ಸಂಬಂಧ. ಇವರು ಒಟ್ಟಿಗೆ ನಗುತ್ತಾರೆ, ಒಟ್ಟಿಗೆ ಅಳುತ್ತಾರೆ, ಜಗಳ ಮಾಡಿಕೊಂಡು ಒಟ್ಟಿಗೆ ಆಟವಾಗುತ್ತಾರೆ' ಎಂದು ರಾಧಿಕಾ ಬರೆದುಕೊಂಡಿದ್ದಾರೆ.

'ಏನೇ ಇರಲಿ ಒಬ್ಬರನ್ನೊಬ್ಬರು ಬಿಟ್ಟು ಕೊಡುವುದಿಲ್ಲ ಅದೇ ನನಗೆ ಖುಷಿ. ಎಲ್ಲಾ ಸಹೋದರ ಸಹೋದರಿಯರಿಗೆ ರಕ್ಷಾ ಬಂಧನ ಶುಭಾಶಯಗಳು' ಎಂದಿದ್ದಾರೆ ರಾಧಿಕಾ.

ಸೀಮೆಂಟ್ ಬಣ್ಣದ ಧೋತಿಯಲ್ಲಿ ಯಥರ್ವ್, ಮರೂನ್‌ ಬಣ್ಣದ ಮಾಡ್ರನ್ ಸೆಲ್ವಾರ್‌ನಲ್ಲಿ ಐರಾ ಮಿಂಚಿದ್ದಾಳೆ. ಇಬ್ಬರೂ ತುಂಟಾಟ ಮಾಡಿಕೊಂಡು ರಕ್ಷಾ ಬಂಧನ ಆಚರಿಸಿದ್ದಾರೆ.

ರಾಕಿಂಗ್‌ ಸ್ಟಾರ್‌ ಯಶ್‌ ಸಹೋದರಿಯಿಂದ ರಾಖಿ ಕಟ್ಟಿಸಿಕೊಳ್ಳುವ ಮೂಲಕ ರಕ್ಷಾಬಂಧನ ಹಬ್ಬ ಆಚರಿಸಿಕೊಂಡರು. ‘ಒಡಹುಟ್ಟಿದವರು ವಿಧಿ ಬರಹದಿಂದ ಒಂದೇ ಮನೆಯಲ್ಲಿ ಹುಟ್ಟುತ್ತಾರೆ. 

ಪ್ರೀತಿ ಮತ್ತು ಪ್ರೋತ್ಸಾಹ ಜೀವನದುದ್ದಕ್ಕೂ ಈ ಸಂಬಂಧವನ್ನು ಪೊರೆಯುತ್ತದೆ. ರಕ್ಷಾಬಂಧನ ಆಚರಿಸುತ್ತಿರುವ ಪ್ರತಿಯೊಬ್ಬರಿಗೂ ಶುಭಾಶಯಗಳು’ ಎಂದು ಯಶ್‌ ರಕ್ಷಾಬಂಧನದ ಶುಭಕಾಮನೆ ತಿಳಿಸಿದ್ದಾರೆ.

Latest Videos

click me!