ಇಂದು ರಕ್ಷಾ ಬಂಧನ, ದೇಶದಾದ್ಯಂತ ರಕ್ಷ ಬಂಧನವನ್ನು ಆಚರಿಸುತ್ತಿದ್ದಾರೆ. ಶ್ರಾವಣ ಮಾಸದಲ್ಲಿ ಬರುವ ಈ ಹಬ್ಬ ಸಹೋದರ-ಸಹೋದರಿಯರಿಗೆ ಸಂಭ್ರಮ. ರಕ್ಷಬಂಧನದ ದಿನ ಸಹೋದರಿಯರು ಸಹೋದರರಿಗೆ ರಾಖಿ ಕಟ್ಟುತ್ತಾರೆ. ವಿಶೇಷವಾದ ಉಡುಗೊರೆ ನೀಡುತ್ತಾರೆ. ಸೆಲೆಬ್ರಿಟಿಗಳು ಸಹ ರಕ್ಷಬಂಧನ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ.
ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಮತ್ತು ಸಹೋದರಿ ನಂದಿನಿ ರಾಖಿ ಹಬ್ಬವನ್ನು ಆಚರಿಸಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ನಂದಿನಿ ಪ್ರೀತಿಯ ಸಹೋದರ ಯಶ್‌ಗೆ ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ. ಅಂದಹಾಗೆ ರಾಕಿಂಗ್ ಸ್ಟಾರ್ ಸಹೋದರಿ ಪ್ರತಿ ವರ್ಷ ರಕ್ಷಬಂಧನ ಹಬ್ಬವನ್ನು ಆಚರಿಸುತ್ತಾರೆ. ಯಶ್‌ಗೆ ರಾಖಿ ಕಟ್ಟಿ ಸಂಭ್ರಮಿಸುತ್ತಾರೆ. ಈ ವರ್ಷ ಕೂಡ ಸಹೋದರನಿಗೆ ರಾಖಿ ಕಟ್ಟಿದ್ದಾರೆ.
ಕೆಜಿಎಫ್ ಸ್ಟಾರ್ ಯಶ್‌ಗೆ ಸಹೋದರಿ ನಂದಿನಿ ರಾಖಿ ಕಟ್ಟುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರೀತಿಯ ಸಹೋದರ ಯಶ್‌ಗೆ ಆರತಿ ಬೆಳಗಿ ತಿಲಕ ಇಟ್ಟು ರಾಖಿ ಕಟ್ಟಿದ್ದಾರೆ. ರಾಕಿಂಗ್ ಸಹೋದರಿಯ ರಾಖಿ ಹಬ್ಬದ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ಅಂದಹಾಗೆ ಸಹೋದರಿ ರಾಖಿ ಕಟ್ಟಿದ ಸುಂದರ ಫೋಟೋಗಳನ್ನು ರಾಕಿಂಗ್ ಸ್ಟಾರ್ ಯಶ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಫೋಟೋಗನ್ನು ಶೇರ್ ಮಾಡಿ ಎಲ್ಲರಿಗೂ ರಕ್ಷಾಬಂಧನದ ಶುಭಾಶಯ ತಿಳಿಸಿದ್ದಾರೆ.
'ಒಡಹುಟ್ಟಿದವರು - ವಿಧಿಯಿಂದ ಒಟ್ಟಿಗೆ ಈ ಭೂಮಿಗೆ ಬರುತ್ತಾರೆ. ಆದರೆ ಲೈಫ್ ಟೈಮ್ ಪ್ರೀತಿ ಮತ್ತು ಬೆಂಬಲದಿಂದ ಬಂಧಿತರಾಗಿದ್ದಾರೆ. ಎಲ್ಲರಿಗೂ ರಕ್ಷಾ ಬಂಧನದ ಶುಭಾಶಯಗಳು' ಎಂದು ಹೇಳಿದ್ದಾರೆ. ಅಭಿಮಾನಿಗಳು ಸಹ ರಾಕಿಂಗ್ ಸ್ಟಾರ್ ಗೆ ವಿಶ್ ಮಾಡುತ್ತಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್-2 ಸಿನಿಮಾ ಬಳಿಕ ಇನ್ನು ಯಾವುದೇ ಸಿನಿಮಾ ಅನೌನ್ಸ್ ಮಾಡಿಲ್ಲ. ರಾಕಿಭಾಯ್ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇತ್ತೀಚಿಗಷ್ಟೆ ಯಶ್ ಮತ್ತು ಪತ್ನಿ ರಾಧಿಕಾ ವಿದೇಶಿ ಪ್ರವಾಸ ಮುಗಿಸಿ ವಾಪಾಸ್ ಆಗಿದ್ದಾರೆ. ವಿದೇಶದಿಂದ ವಾಪಾಸ್ ಆದ ಬಳಿಕ ಯಶ್ ಹೊಸ ಸಿನಿಮಾ ಅನೌನ್ಸ್ ಮಾಡುತ್ತಾರೆ ಎಂದು ಅಭಿಮಾನಿಗಳುಕಾಯುತ್ತಿದ್ದರು. ಆದರೆ ಇನ್ನು ಸಿನಿಮಾ ಘೋಷಣೆ ಮಾಡಿಲ್ಲ.