ಧನಂಜಯ್‌ ನಿಜಕ್ಕೂ ನಟ ರಾಕ್ಷಸ: ರಚಿತಾರಾಮ್‌

First Published | Aug 10, 2022, 10:16 AM IST

ಡಾಲಿಗೆ ಮೊದಲ ಬಾರಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ಡಿಂಪಲ್ ಹುಡುಗಿ. ಟೀಸರ್ ಮತ್ತು ಟ್ರೈಲರ್ ಅಬ್ಬರ ಜೋರು.......
 

ಧನಂಜಯ್ ಮತ್ತು ರಚಿತಾ ರಾಮ್ ಅಭಿನಯಿಸಿರುವ ಮಾನ್ಸೂನ್ ರಾಗ ಸಿನಿಮಾ ಆಗಸ್ಟ್‌ 19 ಬಿಡುಗಡೆಯಾಗುತ್ತಿದೆ. ಮೊದಲ ಬಾರಿ ಡಿಫರೆಂಟ್ ಪಾತ್ರದಲ್ಲಿ ಕಾಣಿಸಿಕೊಂಡ ರಚ್ಚು...

‘ಮಾನ್ಸೂನ್‌ ರಾಗದಲ್ಲಿ ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ನಟಿಸಿದ್ದೇನೆ. ಪಾತ್ರಕ್ಕಾಗಿ ವಿಶೇಷ ತಯಾರಿ ಏನೂ ಮಾಡಿಲ್ಲ. ನಿರ್ದೇಶಕರು ಹೇಳಿದಂತೆ ನಟಿಸಿದ್ದೇನೆ'

Tap to resize

'ಧನಂಜಯ್‌ ಜೊತೆ ನಟನೆ ಸವಾಲಾಗಿತ್ತು. ಅವರು ನಿಜಕ್ಕೂ ನಟ ರಾಕ್ಷಸ’ ಎಂದು ರಚಿತಾರಾಮ್‌ ಹೇಳಿದ್ದಾರೆ. ಈ ಸಿನಿಮಾನ ಮಾನ್ಸೂನ್ ಸಮಯಲ್ಲಿ ಚಿತ್ರೀಕರಣ ಮಾಡಿರುವುದಂತೆ.

ಮಾನ್ಸೂನ್‌ ರಾಗ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಈ ಮಾತು ಹೇಳಿದರು. ರವೀಂದ್ರನಾಥ್‌ ನಿರ್ದೇಶನದ, ವಿಖ್ಯಾತ್‌ ನಿರ್ಮಾಣದ, ಯಶಾ ಶಿವಕುಮಾರ್‌, ಅಚ್ಯುತ್‌ ಕುಮಾರ್‌, ಸುಹಾಸಿನಿ ನಟನೆಯ ಈ ಸಿನಿಮಾ ಆ.19ರಂದು ರಿಲೀಸ್‌ ಆಗಲಿದೆ. 

ಈಗಾಗಲೇ ಟ್ರೇಲರ್‌ ಬಿಡುಗಡೆಯಾಗಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ. ಅನೂಪ್‌ ಸೀಳಿನ್‌ ಸಂಗೀತಕ್ಕೆ ಶಿಳ್ಳೆ ಬೀಳುತ್ತಿವೆ. ಧನಂಜಯ್‌ ಡಾನ್‌ ಪಾತ್ರದಲ್ಲಿ ನಟಿಸಿದ್ದಾರೆ. 

ಡಾನ್‌ ಮತ್ತು ಲೈಂಗಿಕ ಕಾರ್ಯಕರ್ತೆ ಪ್ರೇಮದಲ್ಲಿ ಬೀಳುವ ವಿನೂತನ ಕಥಾನಕ ಹೊಂದಿರುವ ಸಿನಿಮಾ ಇದು. ಸಿನಿಮಾ ಕಥೆ ಕೇಳಿದಾಗ ರಚಿತಾ ರಾಮ್ ಯಾವ ರಿಯಾಕ್ಷನ್‌ನೂ ಕೊಟ್ಟಿಲ್ಲವಂತೆ.

Latest Videos

click me!