Dr Vishnuvardhan; ಸಾಹಸ ಸಿಂಹನ ಹೊಸ ಮನೆಯಲ್ಲಿ ಯಶ್ ದಂಪತಿ-ಸುದೀಪ್; ಫೋಟೋ ವೈರಲ್

Published : Dec 06, 2022, 05:40 PM IST

ವಿಷ್ಣುವರ್ಧನ್ ಅವರ ಹೊಸ ಮನೆಗೆ ಸುದೀಪ್ ಮತ್ತು ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ಭೇಟಿ ನೀಡಿದ್ದಾರೆ. ಫೋಟೋಗಳು ಸಾಮಾಜಿಕ ಜಾಲತಾದಲ್ಲಿ ವೈರಲ್ ಆಗಿದೆ.

PREV
17
Dr Vishnuvardhan; ಸಾಹಸ ಸಿಂಹನ ಹೊಸ ಮನೆಯಲ್ಲಿ ಯಶ್ ದಂಪತಿ-ಸುದೀಪ್; ಫೋಟೋ ವೈರಲ್

ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಹೊಸ ಮನೆ ಗೃಹಪ್ರವೇಶ ಇತ್ತೀಚಿಗಷ್ಟೆ ಅದ್ಧೂರಿಯಾಗಿ ನೆರವೇರಿತು. ಜಯನಗರದಲ್ಲಿದ್ದ ವಿಷ್ಣುವರ್ಧನ್ ಅವರ ಹಳೆ ಮನೆಗೆ ಹೊಸ ರೂಪ ನೀಡಲಾಗಿದ್ದು ಇದೀಗ ವಿಷ್ಣುದಾದಾ ಮನೆ ಸುಂದರವಾಗಿ ಕಂಗೊಳಿಸುತ್ತಿದೆ.  

27

ವಿಷ್ಣುವರ್ಧನ್ ಅವರ ಮನೆಯನ್ನು ಮತ್ತಷ್ಟು ಸುಂದರಗೊಳಿಸಿದ್ದಾರೆ ಪತ್ನಿ ಭಾರತಿ ವಿಷ್ಣುವರ್ಧನ್. ವಿಷ್ಣು ಕನಸಿನ ಮನೆಗೆ 'ವಲ್ಮೀಕ' ಎಂದು ಹೆಸರಿಡಲಾಗಿದೆ. ಅಂದಹಾಗೆ ಅದ್ದೂರಿಯಾಗಿ ನಡೆದ ಗೃಹಪ್ರವೇಶ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಮತ್ತು ರಾಜಕೀಯ ಗಣ್ಯರು ಭಾಗಿಯಾಗಿದ್ದರು. 

37

ವಿಶೇಷ ಎಂದರೆ ವಿಷ್ಣುವರ್ಧನ್ ಅವರ ಹೊಸ ಮನೆಗೆ ಸುದೀಪ್ ಮತ್ತು ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ಭೇಟಿ ನೀಡಿದ್ದಾರೆ. ರಾಕಿಂಗ್ ಯಸ್ ಮತ್ತು ರಾಧಿಕಾ ಪಂಡಿತ್ ದಂಪತಿ ಅದಿತಿ ಪ್ರಭುದೇವ ಮದುವೆಗೆ ಭೇಟಿ ನೀಡಿ ಬಳಿಕ ವಿಷ್ಣುವರ್ಧನ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. 

47

ವಿಷ್ಣುವರ್ಧನ್ ಇಡೀ ಕುಟುಂಬದ ಜೊತೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿರುವ ಯಶ್ ಮತ್ತು ರಾಧಿಕಾ ದಂಪತಿಯ ಫೋಟೋ ವೈರಲ್ ಆಗಿದೆ. ಭಾರತಿ ವಿಷ್ಣುವರ್ಧನ್ ಅಕ್ಕ-ಪಕ್ಕದಲ್ಲಿ ಯಶ್ ಮತ್ತು ರಾಧಿಕಾ ನಿಂತಿದ್ದಾರೆ. ಜೊತೆಗೆ ಅನಿರುಧ್ ದಂಪತಿ ಮತ್ತು ಮಕ್ಕಳು ಕೂಡ ಫೋಟೋದಲ್ಲಿದ್ದಾರೆ. 

57

ಮತ್ತೊಂದು ಫೋಟೋದಲ್ಲಿ ಕಿಚ್ಚ ಸುದೀಪ್ ಪೋಸ್ ನೀಡಿದ್ದಾರೆ. ಅಂದಹಾಗೆ ಕಿಚ್ಚ ಸುದೀಪ್ ಗೃಹ ಪ್ರವೇಶ ಮುಗಿದ ಬಳಿಕ ಬೇಟಿ ನೀಡಿದ್ದರು ಎನ್ನುವುದು ಫೋಟೋ ನೋಡಿದರೆ ಗೊತ್ತಾಗುತ್ತಿದೆ. ನಟ ಸುದೀಪ್ ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ್ ದಂಪತಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಫೋಟೋದಲ್ಲಿ ವಿಷ್ಣುದಾದಾನ ಫೋಟೋ ರಾರಾಜಿಸುತ್ತಿದೆ. 

67

ಅಂದಹಾಗೆ ಸುದೀಪ್ ಮತ್ತು ಯಶ್ ದಂಪತಿ ಭೇಟಿ ನೀಡಿರುವ ಫೋಟೋವನ್ನು ನಟ ಅನಿರುದ್ಧ ಅವರೇ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಅಂದಹಾಗೆ ಅನಿರುದ್ಧ ಶೇರ್ ಮಾಡಿರುವ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ. 

77

ಅಂದಹಾಗೆ ವಿಷ್ಣುವರ್ಧನ್ ಮನೆಗೆ ವಲ್ಮೀಕ ಎಂದು ಹೆಸರಿಡಲು ಕಾರಣವಿದೆ. ವಲ್ಮೀಕ  ಅಂದ್ರೆ ಹುತ್ತದಲ್ಲಿ ಇರುವ ನಾಗರಹಾವು. ವಿಷ್ಣುಗೆ ಬ್ರೇಕ್ ಕೊಟ್ಟ ಸಿನಿಮಾ ನಾಗರಹಾವು ಹಾಗಾಗಿ ಈ ಹೆಸರು ಆಯ್ಕೆ ಮಾಡಲಾಗಿದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories