ಹಾರರ್‌ ಥ್ರಿಲರ್‌ ಚಿತ್ರದಲ್ಲಿ ಗ್ಯಾಂಗ್‌ಸ್ಟರ್ ಆದ ಪ್ರಜ್ವಲ್ ದೇವರಾಜ್; 'ಮಾಫಿಯಾ' ಮೊದಲೇ ಮತ್ತೊಂದು ಪ್ರಾಜೆಕ್ಟ್‌

First Published Dec 5, 2022, 2:04 PM IST

ಸ್ಯಾಂಡಲ್‌ವುಡ್‌ ಚಾಕೊಲೇಟ್ ಬಾಯ್ ಕೈಯಲ್ಲಿ ಸಾಲು ಸಾಳು ಸಿನಿಮಾಗಳು. ಖಡಕ್ ಅಧಿಕಾರ ಆದ್ಮೇಲೆ ಗ್ಯಾಂಗ್‌ಸ್ಟರ್...

 ಕನ್ನಡ ಚಿತ್ರರಂಗದಲ್ಲಿ ಹ್ಯಾಂಡ್ಸಂ ಪ್ರಜ್ವಲ್ ದೇವರಾಜ್‌ ಸೈಲೆಂಟ್ ಆಗಿ ಮತ್ತೊಂದು ಚಿತ್ರಕ್ಕೆ ಸಹಿ ಮಾಡಿದ್ದಾರೆ ಎನ್ನಲಾಗಿದೆ. ಅದುವೇ ಗ್ಯಾಂಗ್‌ಸ್ಟರ್ ಆಗಿ...

 ಹೌದು! ನಿರ್ದೇಶಕ ಲೋಹಿತ್‌ ಜೊತೆ ಹಾರರ್‌ ಥ್ರಿಲರ್‌ ಚಿತ್ರಕ್ಕೆ ಪ್ರಜ್ವಲ್ ದೇವರಾಜ ನಾಯಕನಾಗಿದ್ದಾರೆ. ಇದುವರೆಗೂ ವೃತ್ತಿ ಜೀವನದಲ್ಲಿ ಕಾಣಿಸಿಕೊಳ್ಳದ ಪಾತ್ರದಲ್ಲಿ ಮಿಂಚಲಿದ್ದಾರೆ.

'ಪ್ರಜ್ವಲ್ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂಪೂರ್ಣ ಫಿಸಿಕ್ ಟ್ರಾನ್ಸ್‌ಫಾರ್ಮೇಷನ್‌ ಮತ್ತು ಹೊಸ ಹೇರ್‌ಲುಕ್‌ನಲ್ಲಿ ಪ್ರಜ್ವಲ್‌ ಎಂಟ್ರಿ ಕೊಡಲಿದ್ದಾರೆ' ಎಂದು ನಿರ್ದೇಶಕ ಲೋಹಿತ್ ಹೇಳಿದ್ದಾರೆ.

ಲೋಹಿತ್ ಮತ್ತು ಪ್ರಜ್ವಲ್ ದೇವರಾಜ್‌ ಅಭಿನಯಿಸುತ್ತಿರುವ ಎರಡನೇ ಸಿನಿಮಾ ಇದಾಗಲಿದೆ. ಮಾಫಿಯಾ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ.

'ಪ್ರಜ್ವಲ್ ದೇವರಾಜ್‌ ಜೊತೆ ಮತ್ತೊಮ್ಮೆ ಒಟ್ಟಿಗೆ ಕೆಲಸ ಮಾಡಲು ನಾನು ಖುಷಿಯಾಗಿರುವೆ ನಮ್ಮ ಕಾಂಬಿನೇಷನ್‌ ವರ್ಕ್‌ ಆಗುತ್ತದೆ. ಇಬ್ಬರೂ ಕೆಲಸ ಅರ್ಥ ಮಾಡಿಕೊಂಡಿರುವ ಕಾರಣ ಸುಲಭವಾಗುತ್ತದೆ' ಮಾತನಾಡಿದ್ದಾರೆ.

ಮಾಫಿಯಾ ಚಿತ್ರದಲ್ಲಿ ಪ್ರಜ್ವಲ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಸಿನಿಮಾ ಚಿತ್ರೀಕಣ ಸಂಪೂರ್ಣವಾಗಿದೆ ಕೇವಲ ಹಾಡು ಉಳಿಸಿದೆ. 2023ರಲ್ಲಿ ರಿಲೀಸ್ ಆಗುತ್ತದೆ' ಎಂದಿದ್ದಾರೆ.

ಪ್ರಜ್ವಲ್ ದೇವರಾಜ್‌ ಸದ್ಯಕ್ಕೆ ಬ್ಯುಸಿಯಾಗಿರುವ ನಟ. ಮಾಫಿಯಾ ಮತ್ತು ಹೊಸ ಹಾರರ್‌ ಸಿನಿಮಾ ಮಾತ್ರವಲ್ಲ ಗಾನಾ ಮತ್ತು ವೀರಂ ಸಿನಿಮಾ ಚಿತ್ರೀಕರಣ ಏಕಕಾಲದಲ್ಲಿ ನಡೆಯುತ್ತಿದೆ. 

click me!