ಭಾರತದಾದ್ಯಂತ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಕಾಂತಾರ ಚಾಪ್ಟರ್ 1 ಸಿನಿಮಾದ ಕಾಸ್ಟ್ಯೂಮ್ ಡಿಸೈನರ್ ಆಗಿರುವ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ, ಸಿನಿಮಾದ ಮರೆಯಲಾರದ ಕೆಲವು ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಇದೊಂದು ಅದ್ಭುತ ಅನುಭವ ಎಂದಿದ್ದಾರೆ.
ಕನ್ನಡ ನಟ, ನಿರ್ದೇಶಕ ರಿಷಬ್ ಶೆಟ್ಟಿ ಕಥೆ ಬರೆದು, ನಟಿಸಿ, ನಿರ್ದೇಶಿಸಿರುವ ಕಾಂತಾರ ಚಾಪ್ಟರ್ 1 ಸಿನಿಮಾ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಪ್ರತಿಯೊಬ್ಬ ನಟರ ನಟನೆ, ಸಿನಿಮಾಟೋಗ್ರಫಿ, ವಿಶುವಲ್ ಎಫೆಕ್ಟ್ ಎಲ್ಲವನ್ನೂ ಜನ ಇಷ್ಟಪಟ್ಟಿದ್ದಾರೆ. ಜೊತೆಗೆ ಕಾಸ್ಟ್ಯೂಮ್ ಡಿಸೈನ್ ಕೂಡ ತುಂಬಾನೆ ಅದ್ಭುತವಾಗಿದೆ.
27
ಪ್ರಗತಿ ಶೆಟ್ಟಿ
ರಿಷಬ್ ಶೆಟ್ಟಿ ಪತ್ನಿಯಾದ ಪ್ರಗತಿ ಶೆಟ್ಟಿಯವರು ಕಾಸ್ಟ್ಯೂಮ್ ಡಿಸೈನರ್ ಆಗಿದ್ದು, ಕಾಂತಾರ ಚಾಪ್ಟರ್ 1 ಸಿನಿಮಾದ ಕಾಸ್ಟ್ಯೂಮ್ ಡಿಸೈನ್ ಕೂಡ ಇವರೇ ಮಾಡಿದ್ದಾರೆ. ಪ್ರತಿಯೊಂದು ಪಾತ್ರಗಳಿಗೂ ಅದ್ಭುತವಾಗಿ ವಸ್ತ್ರ ವಿನ್ಯಾಸ ಮಾಡಿದ್ದು, ಪಾತ್ರವನ್ನು ಮತ್ತಷ್ಟು ಹೈಲೈಟ್ ಮಾಡಲು ಇದು ಸಹಕಾರಿಯಾಗಿದೆ.
37
ಕಾಂತಾರ ಸಿನಿಮಾಕ್ಕೂ ಇವರೇ ಡಿಸೈನರ್
ಇದಕ್ಕೂ ಮುನ್ನ ಕಾಂತಾರ ಸಿನಿಮಾಕ್ಕೂ ಕೂಡ ಪ್ರಗತಿ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದರು. ಒಟ್ಟಲ್ಲಿ ಹೇಳಬೇಕೆಂದ ಪ್ರಗತಿ ಶೆಟ್ಟಿ ಕಳೆದ ಐದು ವರ್ಷಗಳಿಂದ ತಮ್ಮ ಪತಿ ರಿಷಬ್ ಶೆಟ್ಟಿ ನಿರ್ದೇಶನದ ಸಿನಿಮಾದಲ್ಲಿ ಅವರ ಜೊತೆಗೆ ಇದ್ದು, ಸಂಪೂರ್ಣವಾಗಿ ಪಾತ್ರಗಳಿಗೆ ಅದ್ಭುತ ಲುಕ್ ನೀಡಿದ್ದಾರೆ.
ಪ್ರಗತಿ ಶೆಟ್ಟಿ ತಮ್ಮ ಹೌಸ್ ಆಫ್ ಪ್ರಗತಿ ಎನ್ನುವ ಡಿಸೈನರ್ ಪೇಜ್ ತೆರೆದು ಅಲ್ಲಿಂದ ಸಿನಿಮಾದಲ್ಲಿ ನಟ-ನಟಿಯರಿಗೆ ವಸ್ತ್ರ ವಿನ್ಯಾಸ ಮಾಡಿರುವ ಒಂದಷ್ಟು ಫೋಟೊಗಳನ್ನು ಶೇರ್ ಮಾಡಿದ್ದು, ಜೊತೆಗೆ ತಮ್ಮ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ.
57
ಈ ಕುರಿತು ಪ್ರಗತಿ ಹೇಳಿದ್ದೇನು?
ಕಾಂತಾರ ಅಧ್ಯಾಯ 1 ರ ಭಾಗವಾಗಿರುವುದು ನಿಜಕ್ಕೂ ಮರೆಯಲಾಗದ ಪ್ರಯಾಣ. ತುಂಬಾ ಬೇರೂರಿರುವ, ಕಚ್ಚಾ ಮತ್ತು ದೈವಿಕವಾಗಿರುವ ಒಂದು ಕಥೆಗೆ ವೇಷಭೂಷಣಗಳನ್ನು ವಿನ್ಯಾಸಗೊಳಿಸುವುದು, ಅದು ಒಂದು ಭಾವನೆಯಾಗಿತ್ತು. ಈ ಭವ್ಯವಾದ ಸಿನಿಮಾದ ಒಂದು ಸಣ್ಣ ಭಾಗವನ್ನು ಹೆಣೆದಿದ್ದಕ್ಕಾಗಿ ಕೃತಜ್ಞಳಾಗಿದ್ದೇನೆ ಎಂದು ಪ್ರಗತಿ ಬರೆದುಕೊಂಡಿದ್ದಾರೆ.
67
ಸಿನಿಮಾದಲ್ಲಿ ನಟಿಸಿದ್ದ ಪ್ರಗತಿ
ಪ್ರಗತಿ ಶೆಟ್ಟಿ ಸಿನಿಮಾದಲ್ಲಿ ವಸ್ತ್ರ ನಿನ್ಯಾಸಕಿಯಾಗಿ ಮಾತ್ರವಲ್ಲ ಕಾಂತಾರ ಸಿನಿಮಾದ ಒಂದು ದೃಶ್ಯದಲ್ಲಿ ಪ್ರಗತಿ ಹಾಗೂ ಇಬ್ಬರು ಮಕ್ಕಳು ಕೂಡ ನಟಿಸಿದ್ದರು. ರಥವನ್ನು ಬಳಸಿ ಗಲಾಟೆ ಮಾಡುವ ಸಮಯದಲ್ಲಿ ಅಡ್ಡ ಬರುವ ಮಹಿಳೆ ಮತ್ತು ಮಗುವಿನ ಪಾತ್ರದಲ್ಲಿ ಪ್ರಗತಿ ಮತ್ತು ಮಗ ರಣ್ವೀರ್ ನಟಿಸಿದ್ದರು.
77
ಸಿನಿಮಾ ಪ್ರಮೋಷನ್ ನಲ್ಲಿ ಗಂಡನಿಗೆ ಸಾತ್
ಸದ್ಯ ದೇಶದ ವಿವಿಧ ಭಾಗಗಳಲ್ಲಿ ನಡೆಯುವ ಸಿನಿಮಾ ಪ್ರಮೋಷನ್ ನಲ್ಲಿ ಗಂಡನಿಗೆ ಸಾತ್ ನೀಡುವ ಮೂಲಕ ವೇದಿಕೆ ಹತ್ತುತ್ತಿದ್ದಾರೆ. ಆ ಮೂಲಕ ಗಂಡನ ಪ್ರತಿ ಹೆಜ್ಜೆಗೂ ತಾವು ಸಾತ್ ನೀಡುವುದಾಗಿ ತೋರಿಸಿಕೊಟ್ಟಿದ್ದಾರೆ.