ರಶ್ಮಿಕಾ ಮಂದಣ್ಣನನ್ನು ನ್ಯಾಷನಲ್ ಕ್ರಶ್ ಎನ್ನುತ್ತಿದ್ದ ಕಾಲ ಮುಗಿದು ಹೋಯ್ತು. ಯಾಕಂದ್ರೆ ಈಗ ಹೊಸ ಕ್ರಶ್ ಹುಟ್ಟಿಕೊಂಡಿದ್ದಾರೆ. ಜನರಂತೂ ಸೋಶಿಯಲ್ ಮೀಡಿಯಾ ಪೂರ್ತಿ ನಟಿಯ ಹೆಸರಲ್ಲಿ ಹಬ್ಬ ಮಾಡ್ತಿದ್ದಾರೆ. ಅಷ್ಟಕ್ಕೂ ತನ್ನ ನಟನೆ, ಸೌಂದರ್ಯದಿಂದ ಜನರನ್ನು ಈ ಮಟ್ಟಿಗೆ ಸೆಳೆದ ಆ ನಟಿ ಯಾರು?
ಯಾವುದೇ ನಟಿಯು ತಮ್ಮ ನಟನೆ ಮತ್ತು ಸೌಂದರ್ಯದಿಂದ ಗಮನ ಸೆಳೆಯದರೆ ಸಾಕು, ಅವರು ಅಭಿಮಾನಿಗಳ ಹೃದಯದಲ್ಲಿ ಜಾಗ ಮಾಡಿ ಕುಳಿತುಕೊಂಡು ಬಿಡುತ್ತಾರೆ. ಜೊತೆ ನ್ಯಾಷನಲ್ ಕ್ರಶ್ (National crush) ಆಗಿ ಬಿಡುತ್ತಾರೆ. ಇಷ್ಟು ದಿನ ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಶ್ ಆಗಿದ್ದರು, ಇದೀಗ ನ್ಯಾಷನಲ್ ಕ್ರಶ್ ಅಪ್ ಡೇಟ್ ಆಗಿದ್ದು, ಹೊಸ ನಟಿಯನ್ನು ದೇಶವೇ ಹೊಗಳುತ್ತಿದೆ.
27
ಜನಮನ ಗೆದ್ದ ಆ ಕ್ರಶ್ ಯಾರು?
ಅಷ್ಟಕ್ಕೂ ಸೋಶಿಯಲ್ ಮೀಡಿಯಾ ತುಂಬಾ ಮೋಡಿ ಮಾಡುತ್ತಿರುವ ಆ ನಟಿ ಬೇರೆ ಯಾರೂ ಅಲ್ಲ ಸದ್ಯ ಕಾಂತಾರಾ ಚಾಪ್ಟರ್ 1ರಲ್ಲಿ ರಾಣಿ ಕನಕವತಿಯಾಗಿ ಅದ್ಭುತ ನಟನೆ ಹಾಗೂ ಮನಮೋಹಕ ಸೌಂದರ್ಯದಿಂದ ಆಫ್ ಸ್ಕ್ರೀನ್ ಹಾಗೂ ಆನ್ ಸ್ಕ್ರೀನ್ ಎರಡರಲ್ಲೂ ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವ ನಟಿ ರುಕ್ಮಿಣಿ ವಸಂತ್ (Rukmini Vasanth).
37
ರುಕ್ಮಿಣಿ ವಸಂತ್
ರುಕ್ಮಿಣಿ ವಸಂತ್ ಕನ್ನಡಿಗರಿಗೆ ಹೊಸಬರಲ್ಲ, ಆದರೆ ಇಡೀ ದೇಶಕ್ಕೆ ಆಕೆ ಹೊಸಬರು. ಕಾಂತಾರ ಸಿನಿಮಾ ಬಿಡುಗಡೆಯಾದ ಮೇಲೆ ದೇಶದ ಮೂಲೆ ಮೂಲೆಯಿಂದ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಪೇಜಸ್ ಗಳಲ್ಲಿ ರುಕ್ಮಿಣಿಯದ್ದೆ ಸದ್ದು, ನ್ಯೂ ನ್ಯಾಷನಲ್ ಕ್ರಶ್ ಅಪ್ ಡೇಟೆಡ್ ಎನ್ನುತ್ತಿದ್ದಾರೆ ಜನ.
ರುಕ್ಮಿಣಿ ವಸಂತ್ ಸಪ್ತಸಾಗರದಾಚೆ ಎಲ್ಲೋ ಸೈಡ್ ಎ ಮತ್ತು ಬಿ ಸಿನಿಮಾ ಮೂಲಕವೇ ಕನ್ನಡಿಗರ ಮನ ಗೆಲ್ಲುವ ಮೂಲಕ ಕ್ರಶ್ ಆಗಿದ್ದರು. ನಂತರ ಭೈರತಿ ರಣಗಲ್, ಬಘೀರ ಸಿನಿಮಾಗಳಲ್ಲೂ ನಟಿಯ ಅಂದ ಚೆಂದಕ್ಕೆ ಮನ ಸೋತಿದ್ದರು ಕನ್ನಡಿಗರು.
57
ಸಿಂಪ್ಲಿಸಿಟಿಯಿಂದ ಮನಗೆದ್ದ ನಟಿ
ರುಕ್ಮಿಣಿ ವಸಂತ್ ಉತ್ತಮ ನಟಿ, ಸುಂದರಿ ಮಾತ್ರವಲ್ಲ, ಆಕೆಯ ಸಿಂಪ್ಲಿಸಿಟಿ, ಆಡಿಯನ್ಸ್, ಅಭಿಮಾನಿಗಳ ಜೊತೆ ಆಕೆ ಬೆರೆಯುವ ರೀತಿ, ಆಕೆಯ ನಗು ಕೂಡ ಜನರ ಮನ ಗೆದ್ದಿದೆ. ಸೋಶಿಯಲ್ ಮೀಡಿಯಾ ಪೋಸ್ಟ್ ಗಳಿಗೂ ಉತ್ತರಿಸುತ್ತಾರೆ. ಎದುರು ಸಿಕ್ಕ ಅಭಿಮಾನಿಗಳ ಜೊತೆ ಮುದ್ದಾಗಿ ಮಾತನಾಡಿಸುವ ಮೂಲಕ ರುಕ್ಕಮ್ಮ ಎಲ್ಲರ ಫೇವರಿಟ್ ಆಗಿದ್ದಾರೆ.
67
ರುಕ್ಮಿಣಿ ವಸಂತ್ ನಟಿಸಿದ ಸಿನಿಮಾಗಳು
ರುಕ್ಮಿಣಿ ವಸಂತ್ ಕನ್ನಡ ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ಬೀರ್ ಬಲ್ ಸಿನಿಮಾ ಮೂಲಕ ಎಂಟ್ರಿ ಕೊಟ್ಟ ನಟಿ, ಬಳಿಕ ಬಾನ ದಾರಿಯಲ್ಲಿ, ಸಪ್ತಸಾಗರದಾಚೆ ಎಲ್ಲೋ, ಭೈರತಿ ರಣಗಲ್, ಬಘೀರ, ಕಾಂತಾರ, ತಮಿಳಿನ ಏಸ್, ತೆಲುಗಿನ ಮದರಾಸಿ ಸಿನಿಮಾಗಳಲ್ಲಿ ನಟಿಸಿದ್ದರು. ಇನ್ನು ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದಲ್ಲಿ ಹಾಗೂ ತೆಲುಗಿನ ಡ್ರಾಗನ್ ಸಿನಿಮಾದಲ್ಲೂ ರುಕ್ಮಿಣಿ ನಟಿಸುತ್ತಿದ್ದಾರೆ.
77
ಯಾರು ಈ ರುಕ್ಮಿಣಿ
ರುಕ್ಮಿಣಿ ವಸಂತ್ ನಮ್ಮ ರಾಜ್ಯದ ಹೆಮ್ಮೆಯ ಸೈನಿಕನ ಪುತ್ರಿ. ರುಕ್ಮಿಣಿ ತಂದೆ, ಕರ್ನಲ್ ವಸಂತ್ ವೇಣುಗೋಪಾಲ್, ಭಾರತದ ಅತ್ಯುನ್ನತ ಮಿಲಿಟರಿ ಪ್ರಶಸ್ತಿಯಾದ ಅಶೋಕ ಚಕ್ರವನ್ನು ಪಡೆದ ಕರ್ನಾಟಕದ ಮೊದಲ ವ್ಯಕ್ತಿ. 2007 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ಭಾರತ-ಪಾಕಿಸ್ತಾನ ಗಡಿಯನ್ನು ದಾಟದಂತೆ ಪಾಕ್ ಒಳನುಸುಳುಕೋರರನ್ನು ತಡೆಯುವಾಗ ಹುತಾತ್ಮರಾಗಿದ್ದರು.