ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾ ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿದೆ. ಈ ಸಮಯದಲ್ಲಿ ರಿಷಬ್ ನಿರ್ದೇಶನದ ಆ ಐದು ಸಿನಿಮಾಗಳನ್ನು ಮರೆಯೋಕೆ ಸಾಧ್ಯಾನ? ಇಲ್ಲಿವೆ ಆ ಸಿನಿಮಾಗಳ ಲಿಸ್ಟ್. ನೋಡಿಲ್ಲ ಅಂದ್ರೆ ಇವತ್ತೆ ನೋಡಿ. ಎಲ್ಲವೂ ಸೂಪರ್ ಹಿಟ್ ಸಿನಿಮಾಗಳು.
ನಟ, ನಿರ್ದೇಶಕ, ಕಥೆಗಾರನಾಗಿ ರಿಷಬ್ ಶೆಟ್ಟಿಯನ್ನು ಜನರು ಅಪ್ಪಿಕೊಂಡಿದ್ದಾರೆ, ಒಪ್ಪಿಕೊಂಡಿದ್ದಾರೆ. ಈಗಂತೂ ಕಾಂತಾರ ಚಾಪ್ಟರ್ 1 ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿದೆ. ಈ ಬ್ಲಾಕ್ ಬಸ್ಟರ್ ಸಿನಿಮಾ ಸದ್ದು ಮಾಡುತ್ತಿರುವ ನಡುವೆ ನೀವು ನೋಡಲೇಬೇಕಾದ ರಿಷಬ್ ಶೆಟ್ಟಿ ನಿರ್ದೇಶನದ ಸಿನಿಮಾಗಳನ್ನೊಮ್ಮೆ ನೋಡಿ.
26
ರಿಕ್ಕಿ
ರಿಕ್ಕಿ ಸಿನಿಮಾ ರಕ್ಷಿತ್ ಶೆಟ್ಟಿ ಮತ್ತು ಹರಿಪ್ರಿಯಾ ನಟಿಸಿರುವ ಸಿನಿಮಾ. ಇದು ರಿಷಭ್ ಶೆಟ್ಟಿ ಬರೆದು, ನಿರ್ದೇಶನ ಮಾಡಿರುವ ಮೊದಲ ಸಿನಿಮಾವಾಗಿದೆ. ಇದೊಂದು ಕ್ರೈ ಥ್ರಿಲ್ಲರ್ ಸಿನಿಮಾ. ಇದು ಸಾಮಾನ್ಯ ಹುಡುಗಿಯೊಬ್ಬಳು ನಕ್ಸಲೈಟ್ ಆಗಿ ಬದಲಾಗುವ ಕಥೆಯನ್ನು ಹೊಂದಿದೆ. ಹುಡುಗ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಏನು ಮಾಡ್ತಾನೆ ಅನ್ನೋದನ್ನು ತಿಳಿಸಿದ ಸುಂದರವಾದ ಕಥೆಯಾಗಿದೆ.
36
ಕಿರಿಕ್ ಪಾರ್ಟಿ
ಕಿರಿಕ್ ಪಾರ್ಟಿ ಸಿನಿಮಾ ಕಾಮಿಡಿ, ಲವ್ ಸ್ಟೋರಿ, ಆಕ್ಷನ್ ಎಲ್ಲವನ್ನೂ ಒಳಗೊಂಡ ಕಾಲೇಜು ಜೀವನದ ಸುಂದರವಾದ ಕಥೆಯಾಗಿದೆ. ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದರು. ಇದು ಸೂಪರ್ ಹಿಟ್ ಸಿನಿಮಾ ಆಗಿದೆ. ಭರ್ಜರಿ ಎಂಟರ್ಟೈನ್ ಮೆಂಟ್ ನೀಡುತ್ತೆ.
ಹಲವು ಪ್ರಶಸ್ತಿಗಳನ್ನು ಬಾಚಿಕೊಂಡ ಸುಂದರವಾಗಿ ಹೆಣೆದ ಕಥೆಯನ್ನು ಹೊಂದಿರುವ ಸಿನಿಮಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು. ಇದು ಗಡಿನಾಡಿನಲ್ಲಿ ಕನ್ನಡ ಶಾಲೆಗಳ ಸಮಸ್ಯೆಯನ್ನು ತಿಳಿಸುತ್ತದೆ. ಚಿಗುರು ಮೀಸೆಯ ಲವ್ ಸ್ಟೋರಿ, ಕನ್ನಡದ ಉಳಿಕೆಗಾಗಿ ಹೋರಾಟ, ಕಾಮಿಡಿ, ಎಲ್ಲವನ್ನೂ ಒಳಗೊಂಡ ಸುಂದರ ಕಥೆ.
56
ಕಾಂತಾರ
ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ ನಟಿಸಿದ್ದು, ಇದು ಕನ್ನಡದ ಸಿನಿಮಾವನ್ನು ದೇಶವೇ ಗುರುತಿಸುವಂತೆ ಮಾಡಿತ್ತು. ರಾಷ್ಟ್ರಪ್ರಶಸ್ತಿ ಗಳಿಸಿದ ಈ ಸಿನಿಮಾದಲ್ಲಿ ತುಳುನಾಡಿನ ದೈವಗಳ ಕುರಿತಾದ ಹಾಗೂ ಕಾಡು ಜನರನ್ನು ದೊಡ್ಡ ಮನೆತನದವರು ಯಾವ ರೀತಿ ನಡೆಸಿಕೊಳ್ಳುತ್ತಿದ್ದರು ಅನ್ನೋದನ್ನು ತಿಳಿಸಿತ್ತು,
66
ಕಾಂತಾರ ಚಾಪ್ಟರ್ 1
ಕಾಂತಾರ ಚಾಪ್ಟರ್ 1 ಬಿಡುಗಡೆಯಾಗಿ ಐದು ದಿನ ಕಳೆದಿದ್ದು, ಸಿನಿಮಾಗೆ ರಾಜ್ಯದಲ್ಲಿ ಮಾತ್ರವಲ್ಲ ದೇಶ ವಿದೇಶಗಳಲ್ಲೂ ಸಹ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾಟೋಗ್ರಫಿ, ವಿಎಫ್ ಎಕ್ಸ್, ಪ್ರತಿಯೊಬ್ಬರ ನಟನೆ ಎಲ್ಲವೂ ಅದ್ಭುತವಾಗಿ ಮೂಡಿ ಬಂದಿದೆ. ಮಿಸ್ ಮಾಡದೇ ನೋಡಬೇಕಾದ ಸಿನಿಮಾಗಳಲ್ಲಿ ಇದೂ ಕೂಡ ಒಂದು.