ಡೆವಿಲ್ ಸಿನಿಮಾ ಶೂಟಿಂಗ್ ವೇಳೆ ದರ್ಶನ್ ಕೈಗೆ ಪೆಟ್ಟಾಗಿದ್ದು, ಇತ್ತೀಚೆಗಷ್ಟೇ ಆಪರೇಶನ್ ಮಾಡಿಸಿಕೊಂಡಿದ್ದರು. ಅದಾದ ಬಳಿಕವು ಅವರಿಗೆ ಕೈನೋವು ಕಾಣಿಸಿಕೊಂಡಿತ್ತು, ನಂತರ ಅವರು ಮತಪ್ರಚಾರ ಕಾರ್ಯಗಳಲ್ಲೂ ತೊಡಗಿಕೊಂಡಿದ್ದರು. ಹಾಗಾಗಿ ದರ್ಶನ್ ಅಭಿಮಾನಿಗಳು ದರ್ಶನ್ ಅವರಿಗೆ ಆರಾಮ ಇಲ್ಲದಿದ್ದಾಗ ನೀವು ಎಂಜಾಯ್ ಮಾಡ್ತಿದ್ದೀರಾ ಎಂದು ವಿಜಯಲಕ್ಷ್ಮೀಯವರನ್ನು ಪ್ರಶ್ನಿಸಿದ್ದಾರೆ.