ಇಂಗ್ಲೆಂಡ್ ಪ್ರವಾಸ ಎಂಜಾಯ್ ಮಾಡ್ತಿದ್ದಾರೆ ಸಿಹಿ ಕಹಿ ಚಂದ್ರು ಫ್ಯಾಮಿಲಿ

First Published | Apr 21, 2024, 5:03 PM IST

ಸಿಹಿಕಹಿ ಚಂದ್ರು, ಸಿಹಿಕಹಿ ಗೀತಾ ಮತ್ತು ಹಿತಾ ಚಂದ್ರಶೇಖರ್ ನಟನೆಯಿಂದ ಬ್ರೇಕ್ ತೆಗೆದು, ವಿದೇಶ ಪ್ರವಾಸ ಮಾಡುತ್ತಾ, ಎಂಜಾಯ್ ಮಾಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ್ದಾರೆ. 
 

ಸಿನಿಮಾ, ಸೀರಿಯಲ್, ಜಾಹಿರಾತುಗಳಲ್ಲಿ ಬ್ಯುಸಿಯಾಗಿರುವ ಸಿಹಿ ಕಹಿ ಫ್ಯಾಮಿಲಿ (Sihi Kahi Family) ಇದೀಗ ಎಲ್ಲದರಿಂದ ಕೊಂಚ ಬ್ರೇಕ್ ತೆಗೆದುಕೊಂಡು ಇಂಗ್ಲೆಂಡ್ ಪ್ರವಾಸ ಮಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. 

ಸ್ಯಾಂಡಲ್ ವುಡ್ ನ ಹಿರಿಯ ನಟ ಸಿಹಿ ಕಹಿ ಚಂದ್ರು (Sihi Kahi Chandru), ತಮ್ಮ ಪತ್ನಿ ಸಿಹಿ ಕಹಿ ಗೀರಾ, ಮತ್ತು ಮಗಳು  ಹಿತಾ ಚಂದ್ರಶೇಖರ್ ಜೊತೆ ಇಂಗ್ಲೆಂಡ್, ಲಂಡನ್ ಮೊದಲಾದ ಕಡೆಗೆ ತೆರಳಿ ಸಖತ್ ಎಂಜಾಯ್ ಮಾಡ್ತಿದ್ದಾರೆ. ಈ ಫೋಟೋಗಳನ್ನು ಹಿತಾ ಚಂದ್ರಶೇಖರ್ (Hitha Chandrashekhar)ತಮ್ಮ ಸೊಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 

Tap to resize

ಅಮ್ಮ, ಅಪ್ಪನ ಜೊತೆ ಹಿತಾ ಇಂಗ್ಲೆಂಡ್ ನ ವಿವಿಧ ನಗರಗಳಿಗೆ ಭೇಟಿ ನೀಡಿ ಅಲ್ಲಿನ ಸೌಂದರ್ಯವನ್ನು, ಆಹಾರವನ್ನು ಎಂಜಾಯ್ ಮಾಡಿದ್ದಾರೆ. ಜೊತೆಗೆ ಲಂಡನ್ ಗೂ ತೆರಳಿದ್ದು, ಬಾಲಿವುಡ್ ನ ವಿವಿಧ ಹಾಡುಗಳಿಗೆ ನೃತ್ಯ ಮಾಡುತ್ತಾ ಕುಣಿದಿದ್ದಾರೆ. 

ಚಂದ್ರು, ಗೀತಾ ಮತ್ತು ಹಿತಾ ಲಂಡನ್ (London) ನಲ್ಲಿ ಲಂಡನ್ ದ ಟುಮ್ಕಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅಲ್ಲದೇ ಹಿತಾ ಹಮ್ ದಿಲ್ ದೇ ಚುಕೇಸನಮ್ ಸಿನಿಮಾ ಶೂಟಿಂಗ್ ನಡೆದ ಜಾಗದಲ್ಲೇಲ್ಲಾ ಸುತ್ತಾಡಿ, ನಂದಿನಿ ನಂದಿನಿ ಎನ್ನುತ್ತಾ ಸಲ್ಮಾನ್ ಖಾನ್ ಡೈಲಾಗ್ ಹೇಳುತ್ತಾ ಓಡಾಡಿದ್ದಾರೆ. ಈ ಎಲ್ಲಾ ವಿಡಿಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಅಲ್ಲದೇ ಚಾಕಲೇಟ್ ಪ್ರಿಯೆ ಹಿತಾ ಲಂಡನ್ ನಲ್ಲಿರುವ ಜನಪ್ರಿಯ ಚಾಕಲೇಟ್ ಕಂಪನಿ ಕ್ಯಾಡ್ಬರಿ ವರ್ಲ್ಡ್ ಗೆ ಭೇಟಿ ನೀಡಿ, ಅಲ್ಲಿ ಚಾಕಲೇಟ್ ಮಾಡೋದು ಹೇಗೆ, ಅದು ಹೇಗೆ ಆರಂಭವಾಯಿತು ಎನ್ನುವ ಬಗ್ಗೆ ಮಾಹಿತಿ ತಿಳಿಯುವ ಮೂಲಕ, ವಿವಿಧ ಚಾಕಲೇಟ್ ಫ್ಲೇವರ್ ಎಂಜಾಯ್ ಮಾಡಿದ್ದಾರೆ. 

1/4ಕೆಜಿ ಪ್ರೀತಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಹಿತಾ ಚಂದ್ರಶೇಖರ್, ಯೋಗಿ ದುನಿಯಾ, ಪ್ರೀಮಿಯರ್ ಪದ್ಮಿನಿ, ತುರ್ತು ನಿಗಮ, ಯುವ ಸಿನಿಮಾದಲ್ಲಿ ನಟಿಸಿದ್ದರು, ಅಲ್ಲದೇ ಸೈಲೆನ್ಸ್ … ಕ್ಯಾನ್ ಯು ಹಿಯರ್ ಎನ್ನುವ ಬಾಲಿವುಡ್ ಸಿನಿಮಾದಲ್ಲೂ ನಟಿಸಿದ್ದರು. 
 

ಇನ್ನು ಸಿಹಿಕಹಿ ಚಂದ್ರು ಅವರು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ (Amruthadhare) ಸೀರಿಯಲ್ ನಲ್ಲಿ ಭೂಮಿಕಾ ತಂದೆಯಾಗಿ ನಟಿಸುತ್ತಿದ್ದಾರೆ. ಜೊತೆಗೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಅಡುಗೆ ಕಾರ್ಯಕ್ರಮವನ್ನು ಸಹ ಚಂದ್ರು ನಡೆಸಿಕೊಡುತ್ತಿದ್ದಾರೆ. 
 

Latest Videos

click me!