ಬ್ಯಾಕ್ ಲೆಸ್ ಬ್ಲೌಸ್ ತೊಟ್ಟು ಬೇಸಿಗೆಯಲ್ಲಿ ಮತ್ತಷ್ಟು ಟೆಂಪ್ರೇಚರ್ ಹೆಚ್ಚಿಸಿದ ಆಶಿಕಾ ರಂಗನಾಥ್

Published : Apr 22, 2024, 03:30 PM IST

ಸದ್ಯ ಮೆಡಿಕಲ್ ಥ್ರಿಲ್ಲರ್ ಸಿನಿಮಾದಲ್ಲಿ ಮಿಂಚುತ್ತಿರುವ ಕನ್ನಡದ ಚುಟು ಚುಟು ಬೆಡಗಿ, ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ ಬ್ಯಾಕ್ ಲೆಸ್ ಬ್ಲೌಸ್ ಜೊತೆಗೆ, ಬ್ಲ್ಯಾಕ್ ಸೀರೆಯುಟ್ಟು ಸಖತ್ತಾಗಿ ಕಾಣಿಸ್ತಿದ್ದಾರೆ.   

PREV
16
ಬ್ಯಾಕ್ ಲೆಸ್ ಬ್ಲೌಸ್ ತೊಟ್ಟು ಬೇಸಿಗೆಯಲ್ಲಿ ಮತ್ತಷ್ಟು ಟೆಂಪ್ರೇಚರ್ ಹೆಚ್ಚಿಸಿದ ಆಶಿಕಾ ರಂಗನಾಥ್

ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಸದ್ದು ಮಾಡುತ್ತಿರುವ ನಮ್ಮ ಕನ್ನಡದ ಹುಡುಗಿ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ (Ashika Ranganath) ತಮ್ಮ ಹೊಸ ಕನ್ನಡ ಸಿನಿಮಾ O2 ಬಿಡುಗಡೆಯ ಸಂಭ್ರಮದಲ್ಲಿದ್ದಾರೆ, ಚಿತ್ರಕ್ಕೆ ಎಲ್ಲೆಡೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. 
 

26

ಇದರ ನಡುವೆ ಸಿನಿಮಾ ಪ್ರಚಾರದ ಪ್ರೋಟೋಗಳನ್ನು ಆಶಿಕಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ (Social media) ಶೇರ್ ಮಾಡಿದ್ದು, ಕಪ್ಪು ಸೀರೆಯುಟ್ಟು ಹಲವು ಫೋಟೋಗಳನ್ನು ಹಂಚಿಕೊಂಡು ಸಿನಿಮಾ ಮೆಚ್ಚಿಕೊಂಡಿರೋದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. 
 

36

ಪಿಂಕ್ ಬಣ್ಣದ ಬ್ಯಾಕ್ ಲೆಸ್ ಬ್ಲೌಸ್ ಧರಿಸಿರುವ ಆಶಿಕಾ, ಕಪ್ಪು ಬಣ್ಣದ ಕಾಟನ್ ಸೀರೆಯುಟ್ಟಿದ್ದು, ದೊಡ್ಡದಾದ ಜುಮುಕಿ ಧರಿಸಿ, ತುಂಬಾ ಮುದ್ದಾಗಿ ಕಾಣಿಸುತ್ತಿದ್ದಾರೆ. ಕ್ಯಾಪ್ಶನ್‌ನಲ್ಲಿ ನಟಿ O2 ಸಿನಿಮಾ (O2 film) ಪ್ರೊಮೋಷನ್ ಎಂದು ಬರೆದುಕೊಂಡಿದ್ದಾರೆ.
 

46

ಕಪ್ಪು ಸೀರೆಯಲ್ಲಿ ಮಿಂಚುತ್ತಿರುವ ಆಶಿಕಾ ನೋಡಿ ಅಭಿಮಾನಿಗಳು ಖುಷ್ ಆಗಿದ್ದು, ಮೊದಲೇ ಬೇಸಿಗೆಯ ಬಿಸಿ, ಅದರ ಜೊತೆ ಮತ್ತೆ ಹೀಗೆಲ್ಲಾ ಫೋಟೋ ಹಾಕಿ ಟೆಂಪ್ರೇಚರ್ ಮತ್ತಷ್ಟು ಜಾಸ್ತಿ ಮಾಡ್ತಿರಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. 
 

56

ಆಶಿಕಾ ಮುಖ್ಯಪಾತ್ರದಲ್ಲಿ ನಟಿಸಿರುವ O2 ಸಿನಿಮಾ ಎಪ್ರಿಲ್ 19 ರಂದು ಬಿಡುಗಡೆಯಾಗಿದ್ದು, ಸಿನಿಮಾವನ್ನು ರಾಘವ್ ನಾಯಕ್ ಮತ್ತು ಪ್ರಶಾಂತ್ ರಾಜ್ ಜೊತೆಯಾಗಿ ನಿರ್ದೇಶನ ಮಾಡಿದ್ದಾರೆ. ಜೊತೆಗೆ ಸಿನಿಮಾವನ್ನು ಪಿ ಆರ್ ಕೆ ಪ್ರೊಡಕ್ಷನ್ ನಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar) ನಿರ್ಮಾಣ ಮಾಡಿದ್ದಾರೆ. 
 

66

ಈ ಮೆಡಿಕಲ್ ಥ್ರಿಲ್ಲರ್ (medical thriller) ಸಿನಿಮಾ ಸಖತ್ ಆಗಿ ಸದ್ದು ಮಾಡುತ್ತಿದ್ದು, ಹೆಚ್ಚಿನ ಜನರು ಆಶಿಕಾ ಅಮೋಘ ಅಭಿನಯವನ್ನು ಹಾಡಿ ಹೊಗಳಿದ್ದಾರೆ. ಜೊತೆಗೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸಿನಿಮಾ.  ಆಶಿಕಾ ಮತ್ತು ಪ್ರಕಾಶ್ ನಾಯಕ್ ಅವರದ್ದು ಅದ್ಬುತವಾದ ನಟನೆ. ಸಿನಿಮಾ ವಿಷಯ ತುಂಬಾ ಇಷ್ಟಾ ಆಯ್ತು. ಕಥೆ ಥ್ರಿಲ್ ನೀಡಿತು ಎಂದು ಹೆಚ್ಚಿನ ಜನ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ.  
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories