ದರ್ಶನ್​ ಬಗ್ಗೆ ಗುಡ್​ನ್ಯೂಸ್​ ಕೊಟ್ಟ ವಿಜಯಲಕ್ಷ್ಮಿ: ಕುಣಿದಾಡಿದ ಅಭಿಮಾನಿಗಳು- ಬಿಡುಗಡೆ ಯಾವಾಗ?

Published : Feb 22, 2026, 06:39 PM IST

'ಹಯಗ್ರೀವ' ಸಿನಿಮಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಜೈಲಿನಲ್ಲಿರುವ ತಮ್ಮ ಪತಿಯ ಬಗ್ಗೆ ಮಹತ್ವದ ಅಪ್‌ಡೇಟ್ ನೀಡಿದ್ದಾರೆ. ಅಭಿಮಾನಿಗಳ ಬೆಂಬಲದಿಂದ ದರ್ಶನ್ ಮಾನಸಿಕವಾಗಿ ತುಂಬಾ ಸ್ಟ್ರಾಂಗ್ ಆಗಿದ್ದಾರೆ ಎಂದು ತಿಳಿಸಿ, ಅಭಿಮಾನಿಗಳ ಆತಂಕವನ್ನು ದೂರ ಮಾಡಿದ್ದಾರೆ.

PREV
16
ಬಿಡುಗಡೆಗಾಗಿ ಕಾಯ್ತಿರೋ ಫ್ಯಾನ್ಸ್​

ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್​ ಅವರು ಯಾವಾಗ ಬಿಡುಗಡೆಯಾಗುತ್ತಾರೆ, ಯಾವಾಗ ತಾವು ಅವರನ್ನು ನೋಡಬಹುದು ಎಂಬ ಕುತೂಹಲದಲ್ಲಿ ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ತಮ್ಮ ನೆಚ್ಚಿನ ನಾಯಕನ ಆಗಮನದ ನಿರೀಕ್ಷೆಯಲ್ಲಿ ಅಸಂಖ್ಯ ಫ್ಯಾನ್ಸ್​ ಹಗಲಿರುಳು ಕಾಯುತ್ತಿದ್ದಾರೆ. ಜೈಲಿನಲ್ಲಿ ಅವರು ಹೇಗೆ ಕಾಲ ಕಳೆಯುತ್ತಿದ್ದಾರೆ ಎನ್ನುವ ಚಿಂತೆ ಹಲವರಲ್ಲಿ ಇದೆ.

26
ದರ್ಶನ್​ ಕುರಿತು ಬಿಗ್​ ಅಪ್​ಡೇಟ್​

ಇದೀಗ ಅವರ ಪತ್ನಿ ವಿಜಯಲಕ್ಷ್ಮಿ ಅವರು ದರ್ಶನ್​ ಬಗ್ಗೆ ಬಿಗ್​ ಅಪ್​ಡೇಟ್​ ಕೊಟ್ಟಿದ್ದು, ಇದು ಅವರ ಅಭಿಮಾನಿಗಳನ್ನು ಖುಷಿಪಡಿಸಿದೆ. ಮಂಡ್ಯದಲ್ಲಿ ‘ಹಯಗ್ರೀವ’ ಟ್ರೇಲರ್ ಲಾಂಚ್ ಈವೆಂಟ್ ನಡೆಯಿತು. ಇದಕ್ಕೆ ವಿಜಯಲಕ್ಷ್ಮೀ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಆ ಸಂದರ್ಭದಲ್ಲಿ ದರ್ಶನ್​ ಕುರಿತು ಅವರು ಅಪ್​ಡೇಟ್​ ನೀಡಿದ್ದಾರೆ.

36
ತುಂಬಾ ಸ್ಟ್ರಾಂಗ್​ ಆಗಿದ್ದಾರೆ

ನಿಮ್ಮ ಡಿ ಬಾಸ್ ಸ್ಟ್ರಾಂಗ್ ಆಗಿದ್ದಾರೆ. ಮಾನಸಿಕವಾಗಿ ತುಂಬಾ ಗಟ್ಟಿಯಾಗಿದ್ದಾರೆ. ಅದಕ್ಕೆ ಕಾರಣ ನೀವೇ. ನಿಮ್ಮಂಥ ಅಭಿಮಾನಿಗಳು ಇರುವುದರಿಂದ ಅವರು ಮಾನಸಿಕವಾಗಿ ತುಂಬಾ ಸ್ಟ್ರಾಂಗ್ ಆಗಿದ್ದಾರೆ ಎಂದು ವಿಜಯಲಕ್ಷ್ಮಿ ಅವರು ಹೇಳುತ್ತಲೇ ಅಭಿಮಾನಿಗಳು ಜೋರಾಗಿ ಚಪ್ಪಾಳೆ ತಟ್ಟಿದ್ದಾರೆ.

46
ಕೋರ್ಟ್​ಗೆ ಹೋಗಿದ್ದ ದರ್ಶನ್​

ದರ್ಶನ್ ಅವರಿಗೆ ಜೈಲಿನಲ್ಲಿ ಸರಿಯಾದ ವ್ಯವಸ್ಥೆ ಇರಲಿಲ್ಲ ಎನ್ನುವ ಕಾರಣಕ್ಕೆ ಇದಾಗಲೇ ಅವರು ಕೋರ್ಟ್​ಗೆ ಅರ್ಜಿಯನ್ನೂ ಸಲ್ಲಿಸಿದ್ದರು. ತಮಗೆ ಸರಿಯಾದ ಸೌಲಭ್ಯ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಆದ್ದರಿಂದ ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಚಿಂತೆಯಾಗಿತ್ತು. ಇದೀಗ ವಿಜಯಲಕ್ಷ್ಮಿ ಅವರ ಮಾತಿನಿಂದ ಫ್ಯಾನ್ಸ್​ಗೆ ತುಂಬಾ ಖುಷಿಯಾಗಿದೆ.

56
ಮಾನಸಿಕವಾಗಿ ಕುಗ್ಗಿಲ್ಲ

ಇದಕ್ಕೂ ಮುನ್ನ ದರ್ಶನ್​ ಅವರು ಜೈಲಿನಲ್ಲಿ ಮಾನಸಿಕವಾಗಿ ಕುಗ್ಗಿದ್ದಾರೆ ಎನ್ನುವ ಸುದ್ದಿಯ ಬಗ್ಗೆಯೂ ವಿಜಯಲಕ್ಷ್ಮಿ ಅವರು ಸ್ಪಷ್ಟನೆ ಕೊಟ್ಟು ಇವೆಲ್ಲಾ ಸುಳ್ಳು ಎಂದಿದ್ದರು. ಈಗ ಪುನಃ ಅವರು ಅಭಿಮಾನಿಗಳಿಗೆ ಅಪ್​ಡೇಟ್​ ನೀಡಿ ನಿಮ್ಮಿಂದಲೇ ದರ್ಶನ್​ ಅವರು ತುಂಬಾ ಸ್ಟ್ರಾಂಗ್​ ಆಗಿ ಇರುವುದಾಗಿ ತಿಳಿಸಿದ್ದಾರೆ. ಅವರು ಯಾವಾಗ ಬಿಡುಗಡೆಯಾಗುತ್ತಿದ್ದಾರೆ ಎನ್ನುವ ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದಾರೆ.

66
ಸಿನಿಮಾದ ಕುರಿತು

ಇದೇ ವೇಳೆ, ವಿಜಯಲಕ್ಷ್ಮಿ ಅವರು, ಹಯಗ್ರೀವ ಸಿನಿಮಾದಲ್ಲಿ ನಟಿಸಿರುವ ಧನ್ವೀರ್, ಸಂಜನಾ ಅವರಿಗೆ ಶುಭ ಕೋರಿದ್ದಾರೆ. ಧನ್ವೀರ್ ನಮ್ಮ‌ ಕುಟುಂಬದ ಸದಸ್ಯ. ನಮಗೆ ಪ್ರೀತಿ ತೋರಿಸಿದ ಹಾಗೇ ಧನ್ವೀರ್‌ಗೂ ಪ್ರೀತಿ ತೋರಿಸಿ. ಪೈರಸಿ ಸಪೋರ್ಟ್ ಮಾಡಬೇಡಿ, ಸಿನಿಮಾ ಥಿಯೇಟರಲ್ಲಿ ನೋಡಿ ಎಂಜಾಯ್ ಮಾಡಿ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories