ಆರೋಗ್ಯಕ್ಕೆ ಬೇಕು ತಂಗಳನ್ನ: ನಟರಾದ ಸಪ್ತಮಿ ಗೌಡ- ನೀನಾಸಂ ಸತೀಶ್​ ಹೇಳಿದ ಮಾತು ಕೇಳಿ

Published : Feb 22, 2026, 06:16 PM IST

ಆಧುನಿಕ ಆಹಾರ ಪದ್ಧತಿಯಿಂದ ಹೆಚ್ಚುತ್ತಿರುವ ರೋಗಗಳ ನಡುವೆ, ನಮ್ಮ ಹಿರಿಯರ ಆಹಾರವಾದ ತಂಗಳನ್ನದ ಮಹತ್ವವನ್ನು ನಟರಾದ ಸತೀಶ್ ನಿನಾಸಂ ಮತ್ತು ಸಪ್ತಮಿಗೌಡ ವಿವರಿಸಿದ್ದಾರೆ. ಶುಗರ್ ನಿಯಂತ್ರಣ ಸೇರಿದಂತೆ ಹಲವು ಆರೋಗ್ಯ ಪ್ರಯೋಜನ ಹೊಂದಿರುವ ತಂಗಳನ್ನದ ಬಗ್ಗೆ ವೈದ್ಯರೂ ಶಿಫಾರಸು ಮಾಡುತ್ತಾರೆ ಎಂದಿದ್ದಾರೆ.

PREV
16
ಆಧುನಿಕತೆ ಹೆಸರಲ್ಲಿ ಬದಲು

ಆಧುನಿಕತೆಯ ಹೆಸರಿನಲ್ಲಿ ಆಹಾರ ಕ್ರಮಗಳಲ್ಲಿಯೂ ಸಾಕಷ್ಟು ಬದಲಾವಣೆ ಆಗಿಬಿಟ್ಟಿದೆ. ಫಾಸ್ಟ್​ ಫುಡ್​, ಮನೆಯಲ್ಲಿಯೇ ಕುಳಿತು ಆರ್ಡರ್​ ಅದೂ ಇದೂ ಅಂತೆಲ್ಲಾ ಹೆಚ್ಚಾಗುತ್ತಿದ್ದಂತೆಯೇ ಇಲ್ಲಸಲ್ಲದ ಮಾರಣಾಂತಿಕ ರೋಗಗಳೂ ಆವರಿಸಿಕೊಳ್ಳಲು ಶುರು ಮಾಡಿದೆ.

26
ಬುದ್ಧಿವಂತ ಹಿರಿಯರು

ಆದರೆ ನಮ್ಮ ಹಿರಿಯರು ಅಷ್ಟೇ ಅಲ್ಲ, ಈಗಲೂ ಎಷ್ಟೋ ಗ್ರಾಮೀಣ ಪ್ರದೇಶಗಳಲ್ಲಿ ಹಿಂದಿನ ದಿನದ ಅನ್ನವನ್ನು ಅರ್ಥಾತ್​ ತಂಗಳನ್ನವನ್ನೇ ತಿಂದು ಹೋಗುವುದು ಉಂಟು. ಕೆಲವರಿಗೆ ಬಿಸಿಬಿಸಿ ಅನ್ನ ತಿನ್ನಲು ಸಾಧ್ಯವಾಗದೇ ಇರುವುದು ಕಾರಣವಾದರೆ, ಅನುಕೂಲಸ್ಥರು ಕೂಡ ತಂಗಳನ್ನದ ಮಹತ್ವ ಗೊತ್ತಿದ್ದೇ ಅದನ್ನು ತಿನ್ನುವುದು ಉಂಟು. ಆದರೆ ಇಂದು ಯಾರಾದರೂ ತಂಗಳನ್ನ ತಿನ್ನುತ್ತಾರೆ ಎಂದರೆ ಅವರನ್ನು ಮುಖವೆಲ್ಲ ತಿವುಚಿ ನೋಡುವ ಮಾಡರ್ನ್​ ಜನರೂ ಇಲ್ಲದಿಲ್ಲ.

36
ನಟರಿಂದ ಆರೋಗ್ಯದ ಟಿಪ್ಸ್​

ಆದರೆ, ತಂಗಳನ್ನದ ಮಹತ್ವದ ಬಗ್ಗೆ ಸ್ಟಾರ್​ ನಟರಾದ ಸತೀಶ್ ನಿನಾಸಂ(Sathish Ninasam) ಮತ್ತು ಸಪ್ತಮಿಗೌಡ (Sapthami Gowda) ತಿಳಿಸಿಕೊಟ್ಟಿದ್ದಾರೆ. ಕನ್ನಡ ಪಿಚ್ಚರ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಅವರು, ಇತ್ತೀಚಿನ ದಿನಗಳಲ್ಲಿ ಜನರಿಗೆ ನಮ್ಮ ಹಿರಿಯರು ಮಾಡ್ತಿರೋದೇ ಸರಿ ಎನ್ನಿಸುವುದು ಉಂಟು. ಅದೇ ಕಾರಣಕ್ಕೆ ಮತ್ತೆ ತಂಗಳನ್ನದ ಮೊರೆ ಹೋಗುತ್ತಿದ್ದಾರೆ ಎಂದಿದ್ದಾರೆ.

46
ತಂಗಳನ್ನದ ಮಹತ್ವ

ತಂಗಳನ್ನ ತಿನ್ನಿ ಎಂದು ವೈದ್ಯರೇ ಹೇಳುತ್ತಾರೆ. ಶುಗರ್​ ಲೆವೆಲ್​ ಕಡಿಮೆ ಮಾಡುವುದು ಸೇರಿದಂತೆ ಹಲವು ಸಮಸ್ಯೆಗಳಿಗೆ ಹಿಂದಿನ ದಿನದ ಅನ್ನ, ಮುದ್ದೆ ತಿಂದರೆ ಒಳ್ಳೆಯದು. ಅದರಲ್ಲಿಯೂ ಹಿಂದಿನ ದಿನದ ಅನ್ನಕ್ಕೆ ಮಾರನೆಯ ದಿನ ಮೊಸರು ಕಲಿಸಿ ತಿನ್ನುವುದರಿಂದ ಇದು ಆರೋಗ್ಯಕ್ಕೂ ಒಳ್ಳೆಯದು ಎಂದು ನಟರು ಹೇಳಿದ್ದಾರೆ.

56
ಹಿರಿಯರು ಬುದ್ಧಿವಂತರು

ನಮ್ಮ ಹಿಂದಿನವರು ಎಲ್ಲವನ್ನೂ ತಿಳಿದೇ ಇವುಗಳನ್ನು ಮಾಡುತ್ತಿದ್ದರು. ಆಗ ಮಾಡ್ತಿರೋದೆಲ್ಲವೂ ಆರೋಗ್ಯಪೂರ್ಣವೇ ಆಗಿತ್ತು. ಆದರೆ ನಮ್ಮ ಹಿರಿಯರಿಗೆ ಏನು ಗೊತ್ತು ಎಂದು ಇವತ್ತಿನ ದಿನ, ಆಧುನಿಕತೆಯ ಹೆಸರಿನಲ್ಲಿ ಏನೇನೋಮಾಡುತ್ತಿದ್ದೇವೆ. ಆದರೆ ಸ್ವಲ್ಪ ಜನರಿಗೆ ಜಾಗ್ರತಿ ಮೂಡಿದ್ದು, ಮತ್ತೆ ಹಿಂದಿನ ದಿನಗಳಿಗೆ ನಾವು ಹೋಗಲೇಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಸತೀಶ್​ ಹೇಳಿದ್ದಾರೆ.

66
ದಿ ರೈಸ್ ಆಫ್ ಅಶೋಕ

ಅಂದಹಾಗೆ, ಸತೀಶ್ ನಿನಾಸಂ ಮತ್ತು ಸಪ್ತಮಿಗೌಡ ಅಭಿನಯದ ದಿ ರೈಸ್ ಆಫ್ ಅಶೋಕ (The Rise Of Ashoka Trailer) ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ. ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಬಹುನಿರೀಕ್ಷಿತ ಈ ಚಿತ್ರವು ಫೆಬ್ರವರಿ 27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದ ಟ್ರೇಲರ್ ಅನ್ನು ಹಿರಿಯ ನಟ ರವಿಚಂದ್ರನ್, ದುನಿಯಾ ವಿಜಯ್, ಪ್ರಜ್ವಲ್ ದೇವರಾಜ್, ಡಾಲಿ ಧನಂಜಯ್, ಯೋಗೆಶ್,ದಿಗಂತ್, ಡಾರ್ಲಿಂಗ್ ಕೃಷ್ಣಾ ಸೇರಿದಂತೆ ಅನೇಕ ಖ್ಯಾತನಾಮರು ಬಿಡುಗಡೆ ಮಾಡಿದರು. ಮನು ಶೆಡ್ಲಾರ್ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ವೃದ್ದಿ ಕ್ರಿಯೇಷನ್ಸ್ ಜೊತೆಗೆ ಸತೀಶ್ ನೀನಾಸಂ ಅವರು ನಿರ್ಮಾಣ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories