ಮಗನ ಹೈಟ್ ನೋಡುತ್ತಲೇ ನಟ ವಿಜಯ ರಾಘವೇಂದ್ರ ಅಭಿಮಾನಿಗಳ ತಲೆಗೆ ಹೀಗೆ ಹುಳು ಬಿಡೋದಾ? ಅವರ ಉತ್ತರಕ್ಕೆ ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ ಫ್ಯಾನ್ಸ್. ಅಷ್ಟಕ್ಕೂ ಆಗಿದ್ದೇನು?
ನಟ ವಿಜಯರಾಘವೇಂದ್ರ ಅವರು ತಮ್ಮ ಮಗ ಶೌರ್ಯನಿಗೆ ಅಪ್ಪ-ಅಮ್ಮ ಎರಡೂ ಆಗಿದ್ದಾರೆ. ಸ್ಪಂದನಾ ಅವರು 2023ರಲ್ಲಿ ನಿಧನರಾದ ಬಳಿಕ, ಮತ್ತೊಂದು ಮದುವೆ ಸುದ್ದಿ ಹರಿದಾಡುತ್ತಿದ್ದರೂ ಆ ಬಗ್ಗೆ ಯೋಚನೆ ಮಾಡದ ವಿಜಯ ರಾಘವೇಂದ್ರ ಅವರು ಮಗನ ಲಾಲನೆ ಪಾಲನೆ ಮಾಡುತ್ತಿದ್ದಾರೆ. 11ನೇ ತರಗತಿಯಲ್ಲಿ ಓದುತ್ತಿರುವ ಶೌರ್ಯ ಸಿನಿಮಾಕ್ಕೆ ಎಂಟ್ರಿ ಕೊಡುತ್ತಾರಾ ಎನ್ನುವ ಬಗ್ಗೆ ಅವರ ಅಭಿಮಾನಿಗಳಿಗೆ ಸಹಜವಾಗಿ ಇಂಟರೆಸ್ಟ್ ಇದೆ. ಆದರೆ ಇದೀಗ ಬೇರೆಯದ್ದೇ ರೀತಿ ಹೇಳುವ ಮೂಲಕ ಅಭಿಮಾನಿಗಳ ತಲೆಗೆ ಹುಳು ಬಿಟ್ಟಿದ್ದಾರೆ ನಟ.
27
ಮಗನ ಬಗ್ಗೆ ವಿಜಯ ರಾಘವೇಂದ್ರ ಹೇಳಿದ್ದೇನು?
ಈವೆಂಟ್ ಒಂದಕ್ಕೆ ಮಗನನ್ನು ಕರೆದುಕೊಂಡು ಬಂದಿದ್ದರು ವಿಜಯ ರಾಘವೇಂದ್ರ. ಆ ಸಂದರ್ಭದಲ್ಲಿ ಮಗನ ಹೈಟ್ ನೋಡುತ್ತಿದ್ದರು. ಮಗ ಅಪ್ಪನಿಗಿಂತಲೂ ಸಕತ್ ಹೈಟ್ ಆಗಿದ್ದಾನೆ. ಆಗ ಅಲ್ಲಿದ್ದೋರು ಮಗನ ಹೈಟ್ ನೋಡ್ತಾ ಇದ್ದೀರಾ ಎಂದಾಗ ನಟ ಹೌದು ಎಂದಿದ್ದಾರೆ. ಕೊನೆಗೆ ಮಗ ಸಿನಿಮಾಕ್ಕೆ ಎಂಟ್ರಿ ಕೊಡೋದು ಯಾವಾಗ ಎನ್ನುವ ಪ್ರಶ್ನೆ ಬಂದಿದೆ.
37
ಹೇಳುವುದಕ್ಕೂ, ಕೇಳುವುದಕ್ಕೂ ...
ಅದಕ್ಕೆ ವಿಜಯ ರಾಘವೇಂದ್ರ ಅವರು ಹೇಳುವುದಕ್ಕೂ, ಕೇಳುವುದಕ್ಕೂ ಸಮಯವಲ್ಲ ಎಂದುಕೊಂಡು ಪ್ರಶ್ನೆ ಕೇಳಿದವರ ಹಾಗೂ ಅದನ್ನು ಆಲಿಸಿದವರ ತಲೆಗೆ ಹುಳು ಬಿಟ್ಟು ಹೋಗಿದ್ದಾರೆ. ಹಾಗಿದ್ರೆ ಮಗ ಸಿನಿಮಾಕ್ಕೆ ಎಂಟ್ರಿ ಕೊಡ್ತಾನೆ ಇರಬೇಕು ಎಂದು ಕೆಲವರು ಅಂದುಕೊಂಡಿದ್ದರೆ, ಮತ್ತೆ ಕೆಲವರು ಆತ ಚಿಕ್ಕವನು, ಇಷ್ಟು ಬೇಗ ಕೊಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ.
ಅಷ್ಟಕ್ಕೂ, ಸಹಜವಾಗಿ ಅಪ್ಪ-ಅಮ್ಮ ಚಿತ್ರ ತಾರೆಯರು ಆಗಿದ್ದರೆ, ಅವರ ಮಕ್ಕಳು ಕೂಡ ಸಿನಿಮಾಕ್ಕೆ ಬರುತ್ತಾರೆ ಎಂದು ಅವರ ಮೇಲೆ ಕಣ್ಣು ಇದ್ದೇ ಇರುತ್ತದೆ. ವಿಜಯ ರಾಘವೇಂದ್ರ ಅವರ ಪುತ್ರ ಶೌರ್ಯ ಕೂಡ ಜಿಮ್ ಬಾಡಿ ಬೆಳೆಸಿಕೊಂಡಿದ್ದು, ಹೀರೋ ರೀತಿಯಲ್ಲಿ ಮಿಂಚುತ್ತಿದ್ದಾನೆ. ಅದಕ್ಕಾಗಿಯೇ ಶೌರ್ಯ ಕೂಡ ಸಿನಿಮಾದಲ್ಲಿ ನಟಿಸಬೇಕು ಎನ್ನುವುದು ವಿಜಯ ರಾಘವೇಂದ್ರ ಅವರ ಅಸಂಖ್ಯ ಅಭಿಮಾನಿಗಳ ಆಶಯ. ಇದೇ ಕಾರಣಕ್ಕೆ ಪದೇ ಪದೇ ಸಿನಿಮಾದ ಬಗ್ಗೆ ಪ್ರಶ್ನೆ ಕೇಳುತ್ತಲೇ ಇರಲಾಗುತ್ತದೆ.
57
ವಿಜಯ ರಾಘವೇಂದ್ರ ಸಂದರ್ಶನ
ಆದರೆ ಈಚೆಗೆ ವಿಜಯ ರಾಘವೇಂದ್ರ ಅವರು ನೀಡಿದ್ದ ಸಂದರ್ಶನದಲ್ಲಿ, ಈ ಬಗ್ಗೆ ಮಾತನಾಡಿದ್ದರು. ಅವನ ಅಮ್ಮ ಮೊದಲಿನಿಂದಲೂ ಹೇಳುತ್ತಲೇ ಇದ್ದರು. ಇವನಿಗೆ ಸಿನಿಮಾದ ಮೇಲೆ ಸಕತ್ ಇಂಟರೆಸ್ಟ್ ಇದೆ, ಸುಮ್ಮನೇ ಪೋಸ್ ಕೊಡುತ್ತಾನೆ ಎಂದು. ಅದೇ ರೀತಿ ಶೌರ್ಯನಿಗೂ ಸಿನಿಮಾ ಮೇಲೆ ಇಂಟರೆಸ್ಟ್ ಇದೆ ಎಂದಿದ್ದರು.
67
ಮಗನಿಗೆ ಸಿನಿಮಾ ಪ್ರೀತಿ
ಅವನು ಸುಮಾರು ಚಿತ್ರಗಳನ್ನು ನೋಡುತ್ತಲೇ ಇರುತ್ತಾನೆ. ತಾನೇ ಟಿಕೆಟ್ ಬುಕ್ ಮಾಡಿಕೊಂಡು ಹೋಗುತ್ತಿರುತ್ತಾನೆ. ಇದುವರೆಗೆ ಯಾವುದೇ ಚಿತ್ರ ಚೆನ್ನಾಗಿಲ್ಲ ಎಂದು ಅವನ ಬಾಯಲ್ಲಿ ಬರಲಿಲ್ಲ. ಚಿತ್ರ ಹಿಡಿಸದಿದ್ದರೂ ಓಕೆ ಚೆನ್ನಾಗಿ ಪ್ರಯತ್ನ ಮಾಡಿದ್ದಾರೆ ಎಂದು ಹೇಳುತ್ತಾನೆ ಎಂದು ಮಗನ ಬಗ್ಗೆ ವಿಜಯ್ ರಾಘವೇಂದ್ರ ಹೇಳಿದ್ದರು.
77
11ನೇ ತರಗತಿ ಓದುತ್ತಿರೋ ಮಗ
ಆದರೆ, ಸದ್ಯ ಮಗ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಿಲ್ಲ. ಅವನು ಜಿಮ್ಗೆಲ್ಲಾ ಹೋಗುತ್ತಿದ್ದಾನೆ. ಇನ್ನೂ 11ನೇ ತರಗತಿ ಓದುತ್ತಿದ್ದಾನೆ. ಎಡಿಟಿಂಗ್, ಡಿಜಿಟಲ್ ಬಗ್ಗೆ ಎಲ್ಲವೂ ಚೆನ್ನಾಗಿ ಗೊತ್ತಿದೆ. ಆದರೆ ಸದ್ಯ ಅವನು ಸಿನಿಮಾಕ್ಕೆ ಎಂಟ್ರಿ ಕೊಡುವುದಿಲ್ಲ ಎಂದಿದ್ದಾರೆ. ಮುಂದಾದರೂ ಇನ್ನು ಸ್ವಲ್ಪ ದೊಡ್ಡವನಾದ ಮೇಲೆ ಮಗ ಸಿನಿಮಾದಲ್ಲಿ ಮಿಂಚಲಿ ಎನ್ನುವುದು ಅಭಿಮಾನಿಗಳ ಹಾರೈಕೆ.