ಭಾರತದ ಅತ್ಯಂತ ಲಾಭದಾಯಕ ಸಿನಿಮಾ, ಬಜೆಟ್‌ಗಿಂತ 100ಪಟ್ಟು ಗಳಿಸಿದ ಕನ್ನಡದ ಚಿತ್ರ, ಮಲ್ಟಿಫ್ಲೆಕ್ಸ್‌ನಲ್ಲಿ 1 ವರ್ಷ ರನ್ನಿಂಗ್!

Published : Aug 21, 2025, 01:23 PM IST

ಕನ್ನಡ ಚಿತ್ರರಂಗದಲ್ಲಿ ದಾಖಲೆಗಳನ್ನು ಬರೆದ ಸಿನಿಮಾ ಇದಾಗಿದೆ. ಭಾರತದ ಅತ್ಯಂತ ಲಾಭದಾಯಕ ಸಿನಿಮಾಗಳಲ್ಲಿ ಒಂದಾಗಿದೆ. ಈ ಚಿತ್ರವು ಪಿವಿಆರ್ ಬೆಂಗಳೂರಿನಲ್ಲಿ 460 ದಿನಗಳ ಕಾಲ ಪ್ರದರ್ಶನಗೊಂಡು ಹೊಸ ಮೈಲಿಗಲ್ಲು ಸ್ಥಾಪಿಸಿತು. 

PREV
15

ಈ ಚಿತ್ರ ಕನ್ನಡದಲ್ಲಿ ಹಲವು ದಾಖಲೆಗಳನ್ನು ಬರೆದಿರುವ ಸಿನಿಮಾ ಇದಾಗಿದೆ. ಅಷ್ಟು ಮಾತ್ರವಲ್ಲ ಭಾರತದ ಅತ್ಯಂತ ಲಾಭದಾಯಕ ಸಿನಿಮಾ ಎಂಬ ಹಿರಿಮೆಯನ್ನು ತನ್ನದಾಗಿಸಿಕೊಂಡಿದೆ. ಈ ಸಿನಿಮಾ ಪಿವಿಆರ್ ಬೆಂಗಳೂರಿನಲ್ಲಿ 460 ದಿನಗಳ ಕಾಲ ಪ್ರದರ್ಶನಗೊಂಡಿತ್ತು. ಈ ಮೂಲಕ ಮಲ್ಟಿಫ್ಲೆಕ್ಸ್‌ನಲ್ಲಿ ಒಂದು ವರ್ಷ ಪ್ರದರ್ಶನ ಕಂಡ ಕನ್ನಡ ಸಿನಿಮಾ ಇದಾಗಿದೆ.

25

2006ರಲ್ಲಿ ಯೋಗರಾಜ್ ಭಟ್ ನಿರ್ದೇಶನದ ಗಣೇಶ್ ಮತ್ತು ಪೂಜಾ ಗಾಂಧಿ ಅಭಿನಯದ ಮುಂಗಾರು ಮಳೆ 70 ಲಕ್ಷ ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಅಂದು ಗಣೇಶ್ ಉದಯನ್ಮೋಖ ನಟರಾಗಿದ್ರೆ, ಪೂಜಾ ಗಾಂಧಿ ಅವರಿಗೆ ಮೊದಲ ಚಿತ್ರವಾಗಿತ್ತು. ಅಂದು ಅನಂತ್‌ನಾಗ್ ಚಿತ್ರದಲ್ಲಿ ನಟಿಸಿದ ಸ್ಟಾರ್ ನಟ. ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡ ದಿಗಂತ್ ಸಹ ಉದಯನ್ಮೋಖ ನಟರಾಗಿದ್ದರು.

35

ಮುಂಗಾರು ಮಳೆ ಬಾಕ್ಸ್ ಆಫಿಸ್‌ ಕಲೆಕ್ಷನ್‌ನಲ್ಲಿ ವಿಶ್ವದಾದ್ಯಂತ 50 ಕೋಟಿ ರೂಪಾಯಿ ಸಂಗ್ರಹ ಮಾಡಿದ ಮೊದಲ ಕನ್ನಡ ಚಿತ್ರವಾಗಿದೆ. ಪ್ರದರ್ಶನ ಅಂತ್ಯದ ವೇಳೆ ಮುಂಗಾರು ಮಳೆ ಸಿನಿಮಾ ವಿಶ್ವದಾದ್ಯಂತ ಒಟ್ಟು 75 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಇದರಲ್ಲಿ ಕರ್ನಾಟಕದಿಂದಲೇ 50 ಕೋಟಿ ರೂ. ಸಂಗ್ರಹವಾಗಿತ್ತು. ಮುಂಗಾರು ಮಳೆ ಚಿತ್ರವನ್ನು ಸಿನಿಮಾ ಲೋಕದ ಹಿಟ್ ಫಿಲಂ ಎಂದು ಪರಿಗಣಿಸಲಾಗುತ್ತದೆ.

45

ಯಶಸ್ಸಿನ ಬಳಿಕ ಮುಂಗಾರು ಮಳೆಯಲ್ಲಿ ನಟಿಸಿದ ಎಲ್ಲಾ ಕಲಾವಿದರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾದರು. ಗಣೇಶ್ ಗೋಲ್ಡನ್ ಸ್ಟಾರ್, ಆದ್ರೆ ಪೂಜಾ ಗಾಂಧಿ ಮಳೆ ಹುಡುಗಿಯಂತೆ ಗುರುತಿಸಿಕೊಳ್ಳುತ್ತಾರೆ. ಮುಂಗಾರು ಮಳೆ ನಂತರ ಸುಮಾರು 5 ರಿಂದ 6 ವರ್ಷ ಎಲ್ಲಾ ಕಲಾವಿದರು ಚಂದನವನದಲ್ಲಿ ಬಹುಬೇಡಿಕೆಯ ಕಲಾವಿದರಾಗಿದ್ದರು.

55

ಮುಂಗಾರು ಮಳೆ ಯಶಸ್ಸಿನ ಬಳಿಕ ನಿರ್ಮಾಪಕ ಇ.ಕೃಷ್ಣ ಅವರ ಮೇಲೆ ಅದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಮುಂಗಾರು ಮಳೆ' ಚಿತ್ರವು ₹ 67.50 ಕೋಟಿ ರೂ. ಗಳಿಸಿದೆ ಎಂದು ಕೃಷ್ಣ ಹೇಳಿಕೊಂಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಐಟಿ ದಾಳಿ ನಡೆದಿತ್ತು. ಮುಂಗಾರು ಮಳೆ ಸಿನಿಮಾ ಸುಮಾರು 1 ದಶಕಕ್ಕೂ ಅಧಿಕ ಕಾಲ ಟ್ರೆಂಡ್‌ನಲ್ಲಿತ್ತು. ಚಿತ್ರದ ಹಾಡುಗಳು ಎವರ್‌ಗ್ರೀನ್‌ ಆಗಿವೆ.

Read more Photos on
click me!

Recommended Stories