ಕೊನೆಗೂ ಓಪನ್​ ಅಯ್ತು ಉಪೇಂದ್ರರ ಸೀಕ್ರೆಟ್​ ಲಿಂಕ್​: ನೀವು ಓಪನ್​ ಮಾಡಿದ್ರೆ ಕೂಡ್ಲೇ ಡಿಲೀಟ್​ ಮಾಡಿಬಿಡಿ!

Published : Mar 15, 2026, 06:30 PM IST

ನಟ ಉಪೇಂದ್ರ ಅವರು ಸೋಷಿಯಲ್ ಮೀಡಿಯಾದಲ್ಲಿ ಸೀಕ್ರೆಟ್ ಲಿಂಕ್ ಹಂಚಿಕೊಳ್ಳುವುದಾಗಿ ಹೇಳಿ ಕುತೂಹಲ ಮೂಡಿಸಿದ್ದರು. ಆದರೆ, ಆ ಲಿಂಕ್ ತೆರೆದಾಗ ಅದರಲ್ಲಿ ಖಾಲಿ ಸಿಲಿಂಡರ್ ಚಿತ್ರವಿದ್ದು, ಇದು ಸದ್ಯದ ಎಲ್‌ಪಿಜಿ ಕೊರತೆ ಮತ್ತು ಕಾಳಸಂತೆಯ ಸಮಸ್ಯೆಯನ್ನು ಬಿಂಬಿಸಿತ್ತು.

PREV
16
ನಾಳೆ ಲಿಂಕ್​

ನಿನ್ನೆ ಅರ್ಥಾತ್​ ಮಾರ್ಚ್ 14ರಂದು ನಟ ಉಪೇಂದ್ರ ಅವರು ನಾಳೆ ಒಂದು ಲಿಂಕ್​ ಶೇರ್​ ಮಾಡ್ತೇನೆ. ಇದು ಸೀಕ್ರೆಟ್​ ಲಿಂಕ್​. 10 ಗಂಟೆಗೆ ನಾನು ಒಂದು ಲಿಂಕ್‌ ಪೋಸ್ಟ್‌ ಮಾಡ್ತೀನಿ, ಅದನ್ನು ಕೆಲ ಹೊತ್ತಲ್ಲೇ ಡಿಲೀಟ್‌ ಕೂಡ ಮಾಡ್ತೀನಿ. ಯಾಕೆಂದ್ರೆ ಹೀಗೆ ಮಾಡಬೇಕು ಎಂದು ನನಗೆ ತಿಳಿಸಲಾಗಿದೆ ಎಂದು ತಮ್ಮ ಸೋಷಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.

26
ಕಾಯುತ್ತಿದ್ದ ಫ್ಯಾನ್ಸ್​

ಹೀಗೆ ಹುಳು ಬಿಟ್ಟಿದ್ದ ಉಪೇಂದ್ರ ಅವರು ಯಾವಾಗ ಲಿಂಕ್​ ಹಾಕ್ತಾರೆ ಎಂದು ಫ್ಯಾನ್ಸ್​ ಕಾಯುತ್ತಾ ಇದ್ದರು. ಸದಾ ಹೊಸತನದಿಂದ ತುಂಬಿರುವ ಉಪ್ಪಿ ಅವರ ತಲೆಯ ಬಗ್ಗೆ ಇದಾಗಲೇ ಗೊತ್ತಿದ್ದದ್ದೇ. ಆದ್ದರಿಂದ ಈ ಲಿಂಕ್​ನಲ್ಲಿ ಅವರು ತಮ್ಮ ಹೊಸ ಸಿನಿಮಾ ಘೋಷಣೆ ಮಾಡಬಹುದಾ? ಇಲ್ಲವೇ ತಾವು ಈಗಾಗಲೇ ಮಾಡಿರುವ ಸಿನಿಮಾದ ಟೀಸರ್‌, ಫರ್ಸ್ಟ್‌ ಲುಕ್‌ ಏನಾದರೂ ರಿಲೀಸ್‌ ಮಾಡಬಹುದಾ? ಪ್ರಜಾಕೀಯದ ಬಗ್ಗೆ ಅಪ್‌ಡೇಟ್‌ ಇರಬಹುದಾ? ಇಲ್ಲವೇ ತಮ್ಮ ಹೊಸ ಸಿನಿಮಾದ ಘೋಷಣೆ ಇರಬಹುದಾ ಅನ್ನೋ ಚರ್ಚೆಗಳು ಶುರುವಾಗಿತ್ತು.

36
ತಲೆಗೆ ಹುಳು ಬಿಟ್ಟಿದ್ದ ಉಪೇಂದ್ರ

ಉಪೇಂದ್ರ ಅವರು ತಮ್ಮ ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್‌ ಖಾತೆಯಲ್ಲಿ, "ನಾಳೆ ಬೆಳಗ್ಗೆ 10 ಗಂಟೆಗೆ ಒಂದು ಲಿಂಕ್ ಪೋಸ್ಟ್ ಮಾಡ್ತೀನಿ. ಇದನ್ನ ಸಾರ್ವಜನಿಕವಾಗಿ ಹಂಚಿಕೊಳ್ಳಬೇಡಿ ಅಂತ ನನಗೆ ಸೂಚನೆ ಇದೆ. ಹಾಗಾಗಿ ಪೋಸ್ಟ್ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಡಿಲೀಟ್ ಮಾಡಿದ್ರೂ ಮಾಡಬಹುದು. ನೀವು ಇದನ್ನು ನೋಡಿದ್ರೆ ಬೇರೆ ಯಾರ ಹತ್ತಿರವೂ ಹೇಳ್ಬೇಡಿ. ಸದ್ಯಕ್ಕೆ ಇದು ನಮ್ಮ ನಡುವೆ ಮಾತ್ರ ಇರಲಿ. ಲಿಂಕ್‌ ನೋಡಿ ಸುಮ್ಮನಿದ್ದುಬಿಡು" ಎಂದು ಬರೆದುಕೊಂಡಿದ್ದರು.

46
ಲಿಂಕ್​ನಲ್ಲಿ ಇದ್ದದ್ದೇನು?

ಇದೀಗ ಆ ಲಿಂಕ್​ ಬಂದಿದೆ. ಅದನ್ನು ಓಪನ್​ ಮಾಡಿದವರು ಸುಸ್ತಾಗಿದ್ದಾರೆ. ಏಕೆಂದರೆ ಫ್ಯಾನ್ಸ್ ಅಂದುಕೊಂಡದ್ದು ಅದರಲ್ಲಿ ಏನೂ ಇಲ್ಲ. ಅದರಲ್ಲಿ ಇದದ್ದು ಸಿಲಿಂಡರ್‌!

56
ಸಿಲಿಂಡರ್​ ಕೊರತೆ

ಸದ್ಯ ಎಲ್ಲೆಡೆ ಸಿಲಿಂಡರ್​ ಕೊರತೆ ಉಂಟಾಗಿದೆ. ಹೋಟೆಲ್​ಗಳು ಮುಚ್ಚಬೇಕಾದ ಸ್ಥಿತಿ ಬಂದಿದೆ. ಇರಾನ್​, ಇಸ್ರೇಲ್​, ಅಮೆರಿಕದ ಯುದ್ಧದಿಂದಾಗಿ ಈ ಸಮಸ್ಯೆ ತಲೆದೋರಿದೆ. ಭಾರತದಲ್ಲಿ ಸದ್ಯ ಎಲ್​ಪಿಜಿ ಸಾಕಷ್ಟು ಸರಬರಾಜು ಇದ್ದರೂ ಕೆಲವರು ಅದನ್ನು ಸ್ಟಾಕ್​ ಮಾಡಿಟ್ಟುಕೊಂಡು ಕೊರತೆ ಸೃಷ್ಟಿಮಾಡುತ್ತಿರುವುದೂ ಬೆಳಕಿಗೆ ಬಂದಿದೆ.

66
ಕಾಳಸಂತೆಯಲ್ಲಿ ಮಾರಾಟ

ಮನೆ, ಹೋಟೆಲ್‌ಗಳಲ್ಲಿ ಸಿಲಿಂಡರ್‌ಗೆ ದುಬಾರಿ ಬೆಲೆ ಕೊಟ್ಟರೂ ಸಿಗದ ಸ್ಥಿತಿ ಉಂಟಾಗಿದೆ. ಕಾಳಸಂತೆಯಲ್ಲಿ ಸಿಲಿಂಡರ್ ಮಾರಟ ಮಾಡುತ್ತಿದ್ದಾರೆ. ಇವೆಲ್ಲ ಸಮಸ್ಯೆಗಳನ್ನು ಅವರು ಖಾಲಿ ಸಿಲಿಂಡರ್​ ರೂಪದಲ್ಲಿ ತೋರಿಸಿದ್ದಾರೆ. ಏನಿದು ಬಾಸ್‌ ಜನ ಈ ಸಿಲಿಂಡರ್‌ ರೀತಿಯಲ್ಲಿ ಖಾಲಿ ಅಂತನಾ?, ಪ್ರಜಾಕೀಯ ಚಿಹ್ನೆ ಬದಲಾಗಿದೆ, ಅಣ್ಣಾ ಯಾವಾಗ ಬ್ಲ್ಯಾಸ್ಟ್, ಏನು ಗುರು ಇದು ಎಂದು ಕೆಲವರು, ನಾನೇನೋ ಬೇರೆ ಲಿಂಕ್‌ ಅನ್ಕೊಂಡಿದ್ದೆ ಎಂದೆಲ್ಲಾ ಹೇಳುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories