'ಅಂಕಲ್' ಅಂತ ಕರೆಯೋಕೆ ಅಮೂಲ್ಯಗೆ ನಟ ದರ್ಶನ್ ಪರ್ಮಿಷನ್ ಕೊಟ್ಟಿದ್ದು ಯಾಕೆ? ಕೊನೆಗೂ ಈ ಸೀಕ್ರೆಟ್ ರಿವೀಲ್ ಆಯ್ತು!

Published : Mar 14, 2026, 07:24 PM IST

ನಟಿ ಅಮೂಲ್ಯ ಮಾತ್ರ ದರ್ಶನ್ ಅವರನ್ನು ಪ್ರೀತಿಯಿಂದ 'ಅಂಕಲ್' ಎಂದು ಕರೆಯುತ್ತಾರೆ. ಒಬ್ಬ ಸ್ಟಾರ್ ನಟನನ್ನು, ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವವನ್ನು ಈ ನಟಿ ಮಾತ್ರ ಯಾಕೆ 'ಅಂಕಲ್' ಎಂದು ಕರೆಯುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಈ ಸೀಕ್ರೆಟ್ ಇಲ್ಲಿದೆ ನೋಡಿ..

PREV
19

ದರ್ಶನ್-ಅಮೂಲ್ಯಾ ಸಂಬಂಧ ಎಂಥದ್ದು ಗೊತ್ತಾ?

ಸ್ಯಾಂಡಲ್ ವುಡ್ ನ ಮುದ್ದಾದ ನಟಿ, ಚೆಲುವಿನ ಚಿತ್ತಾರ ಬೆಡಗಿ ಅಮೂಲ್ಯ ಅವರು ಡಿ ಬಾಸ್ ದರ್ಶನ್ ಅವರನ್ನು ಏನೆಂದು ಕರೆಯುತ್ತಾರೆ ಎಂಬುದು ಬಹುತೇಕ ಅಭಿಮಾನಿಗಳಿಗೆ ತಿಳಿದಿರುವ ವಿಚಾರ. ಹೌದು, ಬಹುತೇಕರು ದರ್ಶನ್ ಅವರನ್ನು ಡಿ ಬಾಸ್, ದಾಸ, ದರ್ಶನ್ ಸರ್ ಎಂದು ಅತ್ಯಂತ ಗೌರವದಿಂದ ಹಾಗೂ ಅಭಿಮಾನದಿಂದ ಕರೆಯುತ್ತಾರೆ.

29

ಆದರೆ, ನಟಿ ಅಮೂಲ್ಯ ಮಾತ್ರ ದರ್ಶನ್ ಅವರನ್ನು ಪ್ರೀತಿಯಿಂದ 'ಅಂಕಲ್' ಎಂದು ಕರೆಯುತ್ತಾರೆ. ಒಬ್ಬ ಸ್ಟಾರ್ ನಟನನ್ನು, ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವವನ್ನು ಈ ನಟಿ ಮಾತ್ರ ಯಾಕೆ 'ಅಂಕಲ್' ಎಂದು ಕರೆಯುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಈ ಬಗ್ಗೆ ಸ್ವತಃ ಅಮೂಲ್ಯ ಅವರೇ ಒಂದು ಸಂದರ್ಶನದಲ್ಲಿ ಬಾಯಿ ಬಿಟ್ಟಿದ್ದಾರೆ. ಆ ರೋಚಕ ಹಾಗೂ ಮುದ್ದಾದ ಹಿಂದಿನ ಕಥೆ ಇಲ್ಲಿದೆ.

39

ಸಂದರ್ಶನವೊಂದರಲ್ಲಿ ನಿರೂಪಕರು ಅಮೂಲ್ಯ ಅವರಿಗೆ ನೇರವಾದ ಪ್ರಶ್ನೆಯೊಂದನ್ನು ಕೇಳುತ್ತಾರೆ. "ನಿಮ್ಮ ಮೇಲೆ ಒಂದು ಕಂಪ್ಲೇಂಟ್ ಇದೆ. ಫೇವರಿಟ್ ಹೀರೋಗಳನ್ನು, ಅದರಲ್ಲೂ ವಿಶೇಷವಾಗಿ ದರ್ಶನ್ ಅವರನ್ನು ನೀವು ಮಾತ್ರ ಅಂಕಲ್ ಎಂದು ಕರೆಯುತ್ತೀರಿ, ಯಾಕೆ?" ಎಂದು ಕೇಳಿದಾಗ, ಅಮೂಲ್ಯ ಅವರು ನೀಡಿದ ಉತ್ತರ ನಿಜಕ್ಕೂ ಅಚ್ಚರಿ ಮೂಡಿಸುವಂತಿತ್ತು.

49

"ನಾನು ಅವರನ್ನೇನು ಬೇಕು ಅಂತ ಅಂಕಲ್ ಎಂದು ಕರೆಯುವುದಿಲ್ಲ. ಅದರ ಹಿಂದೆ ಒಂದು ಕಥೆಯಿದೆ" ಎನ್ನುತ್ತಾ ಅಮೂಲ್ಯ ತಮ್ಮ ಬಾಲ್ಯದ ದಿನಗಳಿಗೆ ಜಾರುತ್ತಾರೆ. ಹೌದು, ಅಮೂಲ್ಯ ಅವರು ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದವರು. ದರ್ಶನ್ ಅಭಿನಯದ ಸೂಪರ್ ಹಿಟ್ 'ಲಾಲಿ ಹಾಡು' ಚಿತ್ರದಲ್ಲಿ ಅಮೂಲ್ಯ ಅವರು ಬಾಲನಟಿಯಾಗಿ ನಟಿಸಿದ್ದರು. 

59

ಆ ಸಮಯದಲ್ಲಿ ಅಮೂಲ್ಯ ಅವರು ತುಂಬಾನೇ ಚಿಕ್ಕ ಹುಡುಗಿ. ಚಿತ್ರೀಕರಣದ ಸೆಟ್ ನಲ್ಲಿ ಆ ಪುಟ್ಟ ಹುಡುಗಿಗೆ ಎಲ್ಲರೂ, "ಹೋಗು, ದರ್ಶನ್ ಅಂಕಲ್ ಹತ್ರ ಹೋಗು, ಅವರನ್ನ ಅಂಕಲ್ ಅಂತ ಕರೀ" ಎಂದು ಹೇಳಿಕೊಟ್ಟಿದ್ದರಂತೆ. ಆ ಎಳೆಯ ವಯಸ್ಸಿನಲ್ಲಿ ಎಲ್ಲರೂ ಹೇಳಿಕೊಟ್ಟ ಹಾಗೆ ಅಮೂಲ್ಯ ಅವರು ದರ್ಶನ್ ಅವರನ್ನು 'ಅಂಕಲ್' ಎಂದು ಕರೆಯಲು ಶುರು ಮಾಡಿದರು. ಆ ಅಭ್ಯಾಸ ಹಾಗೆಯೇ ಮುಂದುವರಿಯಿತು.

69

ಆದರೆ, ದಿನ ಕಳೆದಂತೆ ಅಮೂಲ್ಯ ಅವರು ಬೆಳೆದು ದೊಡ್ಡವರಾದರು. ನಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಮಿಂಚಿದರು. ತಾನು ದೊಡ್ಡವಳಾದ ಮೇಲೆ, ಸ್ಟಾರ್ ನಟನೊಬ್ಬನನ್ನು 'ಅಂಕಲ್' ಎಂದು ಕರೆಯುವುದು ಅವರಿಗೆ ಕೊಂಚ ಮುಜುಗರ ತರಿಸಲು ಶುರು ಮಾಡಿತು. "ನನಗೂ ವಯಸ್ಸಾಯ್ತು, ಈಗಲೂ ಅವರನ್ನು ಹಾಗೆ ಕರೆಯುವುದು ಸರಿಯಲ್ಲ" ಎಂದು ಭಾವಿಸಿದ ಅಮೂಲ್ಯ, ದರ್ಶನ್ ಅವರನ್ನು ಬೇರೆ ರೀತಿಯಲ್ಲಿ ಕರೆಯಲು ಪ್ರಯತ್ನ ಪಟ್ಟರಂತೆ.

79

ಆದರೆ, ಇದಕ್ಕೆ ಡಿ ಬಾಸ್ ದರ್ಶನ್ ಅವರ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ? ಅಮೂಲ್ಯ ಅವರು ಬೇರೆ ರೀತಿಯಲ್ಲಿ ಕರೆಯಲು ಹೋದಾಗ, ದರ್ಶನ್ ಅವರು ಪ್ರೀತಿಯಿಂದಲೇ ಬೈದು ಬುದ್ಧಿವಾದ ಹೇಳಿದ್ದರಂತೆ! "ಯಾಕೆ ಚೇಂಜ್ ಮಾಡ್ತೀಯಾ? ಬೇರೆಯವರಿಗೋಸ್ಕರ ನೀನು ಯಾಕೆ ಬದಲಾಗಬೇಕು? ಬೇರೆಯವರೆಲ್ಲ ನನ್ನನ್ನ ಬೇರೆ ಬೇರೆ ತರ ಕರೀತಾರೆ. ಆದ್ರೆ ನೀನು ಮಾತ್ರ ನನ್ನನ್ನ ಮೊದಲಿನಿಂದಲೂ ಅಂಕಲ್ ಅಂತ ಕರೀತಾ ಇದ್ದೀಯಾ. ಅದನ್ನೇ ಕಂಟಿನ್ಯೂ ಮಾಡು. ನನಗೆ ವಯಸ್ಸಾಯ್ತು ಅಂತ ನೀನು ಅಂದುಕೊಂಡ್ರೆ, ನನಗೂ ವಯಸ್ಸಾಗಿದೆ ಪರವಾಗಿಲ್ಲ, ನೀನು ಅಂಕಲ್ ಅಂತಾನೇ ಕರಿ" ಎಂದು ದರ್ಶನ್ ಅವರು ಪ್ರೀತಿಯಿಂದಲೇ ಆದೇಶ ಮಾಡಿದ್ದರಂತೆ.

89

ದರ್ಶನ್ ಅವರ ಈ ಪ್ರೀತಿಯ ಮಾತಿಗೆ ಕಟ್ಟುಬಿದ್ದ ಅಮೂಲ್ಯ, ಇಂದಿಗೂ ಅವರನ್ನು ಖಾಸಗಿಯಾಗಿ ಭೇಟಿಯಾದಾಗ 'ಅಂಕಲ್' ಎಂದೇ ಕರೆಯುತ್ತಾರಂತೆ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಅಥವಾ ಪಬ್ಲಿಕ್ ಆಗಿ ಪೋಸ್ಟ್ ಹಾಕುವಾಗ ಮಾತ್ರ ಅಮೂಲ್ಯ ಅವರು ತುಂಬಾನೇ ಹುಷಾರಾಗಿರುತ್ತಾರೆ. ಅಭಿಮಾನಿಗಳ ಪ್ರತಿಕ್ರಿಯೆ ಹೇಗಿರುತ್ತದೆಯೋ ಎಂಬ ಕಾರಣಕ್ಕೆ, "ಸೋಷಿಯಲ್ ಮೀಡಿಯಾದಲ್ಲಿ ನಾನು ಅಂಕಲ್ ಅನ್ನೋ ಪದ ಯೂಸ್ ಮಾಡಲ್ಲ. ಅಲ್ಲಿ ಡಿ ಬಾಸ್ ಅಂತಾನೇ ಹಾಕ್ತೀನಿ. ಆದ್ರೆ ಅವರು ಮಾತ್ರ, ನೀನು ಹಿಂಗೇ ಕರಿಬೇಕು ಅಂತ ನನ್ನ ಕೈಯಲ್ಲಿ ಆರ್ಡರ್ ಮಾಡಿ ಕರಿಸ್ಕೊಳ್ತಾರೆ" ಎಂದು ಅಮೂಲ್ಯ ಅವರು ನಗುತ್ತಾ ಆ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

99

ಒಟ್ಟಿನಲ್ಲಿ, ಸ್ಟಾರ್ ಗಿರಿ, ವಯಸ್ಸು ಎಲ್ಲವನ್ನೂ ಮೀರಿ ಒಂದು ಸುಂದರವಾದ, ಮುಗ್ಧವಾದ ಬಾಂಧವ್ಯ ದರ್ಶನ್ ಹಾಗೂ ಅಮೂಲ್ಯ ಅವರ ನಡುವೆ ಬೆಳೆದಿದೆ. ಬಾಲನಟಿಯಾಗಿದ್ದಾಗಿನಿಂದಲೂ ಇರುವ ಆ ಪ್ರೀತಿ, ಗೌರವ ಎಂದಿಗೂ ಬದಲಾಗಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

(ಕೃಪೆ- ವಿವಿಧ ವಿಸ್ಮಯ)

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories