Driti Rajkumar: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ ಮಾರ್ಚ್ 17ರಂದು, ಅದಕ್ಕಾಗಿ ಅಭಿಮಾನಿಗಳು ಸಂಭ್ರಮದಿಂದ ತಯಾರಿ ನಡೆಸುತ್ತಿರುವಾಗಲೇ, ಅಪ್ಪು ಮನೆಯ ಮುದ್ದಿನ ಶ್ವಾನವೊಂದು ಅಸು ನೀಗಿದ್ದು, ಈ ಕುರಿತು ಮಗಳು ಧೃತಿ ಫೋಟೊ ಹಂಚಿಕೊಂಡಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ 51ನೇ ವರ್ಷದ ಹುಟ್ಟುಹಬ್ಬ ಇದೇ ಮಾರ್ಚ್ 17ರದು ಆಚರಿಸಲಾಗುತ್ತಿದೆ. ಈ ಸಂಭ್ರಮವನ್ನು ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ, ಆದರೆ ಇದರ ಮಧ್ಯೆ ಅಪ್ಪು ಕುಟುಂಬ ಮತ್ತೊಂದು ಜೀವವನ್ನು ಕಳೆದುಕೊಂಡಿದೆ.
26
ಮುದ್ದಿನ ಶ್ವಾನ ಸಾವು
ಹೌದು, ಅಪ್ಪು ಹುಟ್ಟುಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಇರುವಂತೆ, ಅಪ್ಪು ಕುಟುಂಬದ ಮುದ್ದಿನ ಶ್ವಾನ ಸಾವನ್ನಪ್ಪಿರುವ ಬಗ್ಗೆ ಮಗಳು ಧೃತಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.
36
ಸ್ಪಾರ್ಕಿ ಜೊತೆ ಧೃತಿ-ವಂದಿತಾ
ಮುದ್ದಿನ ಸ್ಪಾರ್ಕಿ ಜೊತೆ ವಂದಿತಾ ಮತ್ತು ಧೃತಿ ಇಬ್ಬರೂ ಜೊತೆಯಾಗಿ ಅಪ್ಪಿಕೊಂಡಿರುವ ಫೊಟೊ ಹಾಗೂ ಸ್ಪಾರ್ಕಿಯ ವಿವಿಧ ಫೋಟೊಗಳನ್ನು ಧೃತಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಸ್ಪಾರ್ಕಯನ್ನು ತಾವು ಎಷ್ಟು ಪ್ರೀತಿಸುತ್ತೇವೆ ಅನ್ನೋದನ್ನು ಸಹ ತಿಳಿಸಿದ್ದಾರೆ.
ಪುನೀತ್ ಪುತ್ರಿ ಧೃತಿ ಮುದ್ದಿನ ಶ್ವಾನ ಸ್ಪಾರ್ಕಿ ಜೊತೆಗಿನ ಫೊಟೊಗಳನ್ನು ಹಂಚಿಕೊಂಡಿದ್ದು I love you Sparky . Gonna miss you so much ಎಂದು ಬರೆದುಕೊಂದಿದ್ದಾರೆ, ಜೊತೆಗೆ ಶಾಂತಿಯ ಧೂತ ಪಾರಿವಾಳದ ಫೋಟೊಗಳನ್ನ ಶೇರ್ ಮಾಡಿದ್ದಾರೆ.
56
ಅಪ್ಪು ನೆನೆದ ಅಭಿಮಾನಿಗಳು
ಧೃತಿ ಈ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಂತೆ, ಅಭಿಮಾನಿಗಳು ಅಪ್ಪುವನ್ನು ನೆನೆಯುತ್ತಿದ್ದಾರೆ. ರೆಸ್ಟ್ ಇನ್ ಪೀಸ್ ಸ್ಪಾರ್ಕಿ, ನೀನು ಇನ್ನು ಮುಂದೆ ಅಪ್ಪು ಜೊತೆ ಆಡುತ್ತಾ, ಅಪ್ಪುವನ್ನು ಆರೈಕೆ ಮಾಡುತ್ತಾ ಇರು ಎಂದು ಹಾರೈಸಿದ್ದಾರೆ.
66
ಅಪ್ಪು ಹುಟ್ಟುಹಬ್ಬ
ಪುನೀತ್ ರಾಜಕುಮಾರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪವರ್ ಸ್ಟಾರ್ ಹಾಗೂ ರಮ್ಯಾ ಅಭಿನಯದ ಆಕಾಶ್ ಸಿನಿಮಾ ಬಿಡುಗಡೆಯಾಗಿದ್ದು, ಅಭಿಮಾನಿಗಳು ಸಂಭ್ರಮದಿಂದ ಥಿಯೇಟರ್ ಕಡೆಗೆ ಹೋಗಿ ಸಿನಿಮಾ ವೀಕ್ಷಿಸಿ, ಅಪ್ಪು ಮೇಲಿನ ಪ್ರೀತಿಯನ್ನು ಮೆರೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.