ಬಂದೂಕು ಹಿಡಿದು ಸೈನಿಕನಾದ ಉಪೇಂದ್ರ: ಹುಟ್ಟುಹಬ್ಬದಂದೇ ಗೆರಿಲ್ಲಾ ವಾರ್‌ಗೆ ಹೊರಟ ಬುದ್ಧಿವಂತ!

Published : Sep 18, 2025, 11:26 AM IST

ಓಂಪ್ರಕಾಶ್‌ ರಾವ್‌ ನಿರ್ದೇಶನದ 50ನೇ ಚಿತ್ರ ಘೋಷಣೆ ಆಗಿದೆ. ಆ ಚಿತ್ರದ ಹೆಸರು ‘ಗೆರಿಲ್ಲಾ ವಾರ್‌’. ಚಿತ್ರದಲ್ಲಿ ಉಪೇಂದ್ರ ಅವರದ್ದು ಸೈನಿಕನ ಪಾತ್ರ. ನಾಯಕಿಯಾಗಿ ನಿಮಿಕಾ ರತ್ನಾಕರ್‌ ಇದ್ದಾರೆ. ನಾದಬ್ರಹ್ಮ ಹಂಸಲೇಖ ಸಂಗೀತ ನೀಡುತ್ತಿದ್ದಾರೆ.

PREV
17
ಹುಟ್ಟುಹಬ್ಬದ ಸಂಭ್ರಮದಲ್ಲಿ ಉಪೇಂದ್ರ

ಉಪೇಂದ್ರ ಇಂದು ಹುಟ್ಟುಹಬ್ಬ ಸಂಭ್ರಮದಲ್ಲಿದ್ದಾರೆ. ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳನ್ನು ಭೇಟಿಯಾಗಲಿದ್ದಾರೆ. ಇದೇ ಸಂದರ್ಭದಲ್ಲಿ ಉಪೇಂದ್ರ ನಟನೆಯ, ಓಂಪ್ರಕಾಶ್‌ ರಾವ್‌ ನಿರ್ದೇಶನದ 50ನೇ ಚಿತ್ರ ಘೋಷಣೆ ಆಗಿದೆ. ಆ ಚಿತ್ರದ ಹೆಸರು ‘ಗೆರಿಲ್ಲಾ ವಾರ್‌’.

27
ನಿಮಿಕಾ ರತ್ನಾಕರ್‌ ನಾಯಕಿ

ಚಿತ್ರದಲ್ಲಿ ಉಪೇಂದ್ರ ಅವರದ್ದು ಸೈನಿಕನ ಪಾತ್ರ. ನಾಯಕಿಯಾಗಿ ನಿಮಿಕಾ ರತ್ನಾಕರ್‌ ಇದ್ದಾರೆ. ನಾದಬ್ರಹ್ಮ ಹಂಸಲೇಖ ಸಂಗೀತ ನೀಡುತ್ತಿದ್ದಾರೆ. ಡೆನ್ನಿಸಾ ಪ್ರಕಾಶ್‌ ಚಿತ್ರಕ್ಕೆ ಕತೆ ಬರೆದಿದ್ದಾರೆ. ಓಂಪ್ರಕಾಶ್‌ ರಾವ್‌ ಹಾಗೂ ಆರ್‌ ವಾಸುದೇವ ರೆಡ್ಡಿ ನಿರ್ಮಿಸುತ್ತಿದ್ದಾರೆ.

37
ಗೆರಿಲ್ಲಾ ವಾರ್‌ ಪೋಸ್ಟರ್ ಬಿಡುಗಡೆ

ಗೆರಿಲ್ಲಾ ವಾರ್‌ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದ್ದು, ಪೋಸ್ಟರ್​​ನಲ್ಲಿ ಉಪೇಂದ್ರ ಸೈನಿಕರ ಸಮವಸ್ತ್ರ ಧರಿಸಿ ಅತ್ಯಾಧುನಿಕ ಬಂದೂಕು ಹಿಡಿದು ಯಾವುದೋ ಮಿಲಿಟರಿ ಆಪರೇಷನ್​​​ನಲ್ಲಿ ತೊಡಗಿದ್ದಾರೆ.

47
ಪಕ್ಕಾ ಆಕ್ಷನ್ ಸಿನಿಮಾ

ಗೆರಿಲ್ಲಾ ವಾರ್‌ ಹೆಸರೇ ಹೇಳುವಂತೆ ಇದೊಂದು ಪಕ್ಕಾ ಆಕ್ಷನ್ ಸಿನಿಮಾ ಆಗಿರಲಿದೆ. ವಿವಿಧ ದೇಶಗಳ ಸೈನ್ಯಗಳು ದೊಡ್ಡ ಪ್ರಮಾಣದ ವೈರಿಗಳನ್ನು ಎದುರಿಸಲು ಬಳಸುವ ಗೆರಿಲ್ಲಾ ವಾರ್‌ ಸಮರ ಪ್ರಾಕಾರವನ್ನು ಈ ಚಿತ್ರ ಆಧರಿಸಿದೆ.

57
ಸೈನಿಕನಾದ ರಿಯಲ್ ಸ್ಟಾರ್

ಉಪೇಂದ್ರ ಅವರು ಈ ಚಿತ್ರದಲ್ಲಿ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಈ ಸೈನಿಕ ಗಡಿ ಮಾತ್ರ ಕಾಯುವ ಸೈನಿಕನಲ್ಲ‌‌. ಪ್ರಸ್ತುತ ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಧೀಮಂತ ನಾಯಕ ಎಂದು ತಿಳಿದು ಬಂದಿದೆ.

67
ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ

ಇನ್ನು ನಿರ್ದೇಶಕ ಹಾಗೂ ನಟರಾದ ರಿಯಲ್‌ ಸ್ಟಾರ್‌ ಉಪೇಂದ್ರ ಅವರು ಸೆ.18-1968ರಂದು ಕುಂದಾಪುರದ ಸಮೀಪದಲ್ಲಿರುವ ಕೋಟೇಶ್ವರದಲ್ಲಿ ಜನಿಸಿದರು. 1992 ರಲ್ಲಿ ಬಿಡುಗಡೆಯಾದ ತರ್ಲೆನನ್ಮಗ ಚಿತ್ರದ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

77
ಕಾಶೀನಾಥ್ ಜತೆ ಸಹಾಯಕ ನಿರ್ದೇಶಕ

ಇದಕ್ಕೂ ಮು೦ಚೆ ಕಾಶೀನಾಥ್ ಜತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ನಾಯಕನಟರಾಗಿ ನಟಿಸಿದ ಮೊದಲ ಚಿತ್ರ ಎ. ತಮ್ಮ ವಿಶಿಷ್ಟ ಆಲೋಚನಾ ಲಹರಿಗಳು, ವಿಭಿನ್ನ ನಟನಾ ಶೈಲಿಗಳಿಂದ ಭಿನ್ನವಾಗಿ ನಿಲ್ಲುವ ಇವರು ಕನ್ನಡ ಚಿತ್ರರಂಗ ಕಂಡ ಅದ್ಭುತ ಪ್ರತಿಭೆ.

Read more Photos on
click me!

Recommended Stories