ಸು ಫ್ರಮ್ ಸೋ ಸಿನಿಮಾದಲ್ಲಿ ಭಾವುಕ ಪಾತ್ರದ ಮೂಲಕ ಮನ ಸೆಳೆದ ನಟಿ ಸಂಧ್ಯಾ ಅರಕೆರೆ ಸೀರೆಯಲ್ಲಿ ಮಿಂಚಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಟಿ ಫೋಟೊ ಶೇರ್ ಮಾಡಿದ್ದು, ಸಿನಿ ರಸಿಕರು ಮಾತ್ರ ನಟಿಯ ನಟನೆಯನ್ನು ಹೊಗೊಳೋದನ್ನು ನಿಲ್ಲಿಸ್ತಾನೆ ಇಲ್ಲ.
ಕನ್ನಡದ ಸೂಪರ್ ಹಿಟ್ ಸಿನಿಮಾ ‘ಸು ಫ್ರಮ್ ಸೋ’ (Su from So) ನಟಿ ಸಂಧ್ಯಾ ಅರಕೆರೆ ಸೋಶಿಯಲ್ ಮೀಡಿಯಾದಲ್ಲಿ ಹೊಸದಾದ ಫೋಟೊಗಳನ್ನು ಶೇರ್ ಮಾಡಿದ್ದು, ಅಭಿಮಾನಿಗಳು ನಟಿಯನ್ನು ಹೊಗಳೋದನ್ನು ಮಾತ್ರ ನಿಲ್ಲಿಸ್ತಾನೆ ಇಲ್ಲ.
27
ಸಂಧ್ಯಾ ಅರಕೆರೆ
ರಂಗಭೂಮಿ ಕಲಾವಿದೆಯಾಗಿರುವ ಸಂಧ್ಯಾ ಅರಕೆರೆ (Sandhya Arakere) ಕನ್ನಡದ ಹಲವು ಸಿನಿಮಾಗಳಲ್ಲಿ ಹಲವು ಪಾತ್ರಗಳಿಗೆ ಜೀವ ತುಂಬಿ ನಟಿಸಿದ್ದರು. ಆದರೆ ಅವರಿಗೆ ಖ್ಯಾತಿ ತಂದುಕೊಟ್ಟಿದ್ದು ಸು ಫ್ರಮ್ ಸೋ ಸಿನಿಮಾ.
37
ರವಿಯಣ್ಣನ ಭಾನು
ಈ ಸಿನಿಮಾದಲ್ಲಿ ಭಾವುಕ ಪಾತ್ರದ ಮೂಲಕ ಗಮನ ಸೆಳೆದ ಸಂಧ್ಯಾ ಅವರ ನಟನೆ ಹಾಗೂ ಭಾನು ಮತ್ತು ರವಿಯಣ್ಣನ ಕಾಂಬಿನೇಶನ್ ಜನ ಇಷ್ಟ ಪಟ್ಟಿದ್ದರು. ಇವತ್ತಿಗೂ ಕೂಡ ಜನ ನಟಿಯ ಅಭಿನಯವನ್ನು ಮನಸಾರೆ ಹೊಗಳುತ್ತಿದ್ದಾರೆ.
ಸಂಧ್ಯಾ ಸುಂದರವಾದ ಸೀರೆಯುಟ್ಟು ವಿವಿಧ ರೀತಿಯಲ್ಲಿ ಹೂನಗು ಸೂಸುತ್ತಾ ಫೋಟೊಗೆ ಪೋಸ್ ಕೊಟ್ಟರೆ, ಜನರು ನೀವು ನಗುತ್ತಿರೋದನ್ನು ನೋಡೊದೆ ಚಂದ, ಸು ಫ್ರಮ್ ಸೋದಲ್ಲಿ ನಿಮ್ಮ ಅಭಿನಯ ನೋಡಿ ಮೂಕರಾದೆವು, ನೀವೊಬ್ಬ ಅದ್ಭುತ ನಟಿ ಎಂದು ಕಾಮೆಂಟ್ ಮಾಡಿದ್ದಾರೆ.
57
ರಾಜ್ ಬಿ ಶೆಟ್ಟಿ ನಿರ್ಮಾಣದಲ್ಲಿ ಮತ್ತೆ ನಟನೆ
ಸು ಫ್ರಮ್ ಸೋ ರಾಜ್ ಬಿ ಶೆಟ್ಟಿ (Raj B Shetty) ಅವರ ನಿರ್ಮಾಣದಲ್ಲಿ ಮೂಡಿ ಬಂದಿದ್ದು, ಇದೀಗ ಅವರ ಲೈಟರ್ ಬುದ್ಧ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗಲಿರುವ ಮತ್ತೊಂದು ಕಿರುಚಿತ್ರದಲ್ಲಿ ಸಂಧ್ಯಾ ಅರಕೆರೆ ನಟಿಸಲಿದ್ದಾರೆ.
67
ಹಿಂದೆ ಗಾಳಿ ಮುಂದೆ ಮತ್ತೆ
ರಘು ಆರವ್ ನಿರ್ದೇಶನ ಮಾಡಲಿರುವ ಹಿಂದೆ ಗಾಳಿ ಮುಂದೆ ಮತ್ತೆ ಕಿರುಚಿತ್ರ ಯೂಟ್ಯೂಬಲ್ಲಿ ಇದೇ ಸೆಪ್ಟೆಂಬರ್ 19ರಂದು ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಸಂಧ್ಯಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.
77
ಯಾವ ರೀತಿ ಪಾತ್ರ?
ಈಗಾಗಲೇ ಕಿರುಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು, ಇದರಲ್ಲೂ ಸಂಧ್ಯಾ ಅರಕೆರೆ ಭಾನು ಪಾತ್ರದಂತೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರವೂ ನೋವಿನ ಕಥೆಯನ್ನ ಹೇಳಲಿದೆಯೇ? ಯಾವ ರೀತಿ ಬರಲಿದೆ ಅನ್ನೋದನ್ನು ಕಾದು ನೋಡಬೇಕು.