ಶ್ರೀಕೃಷ್ಣ ಹುಟ್ಟಿದ…. ಗಂಡು ಮಗುವಿಗೆ ತಾಯಿಯಾದ ಸಂಭ್ರಮದಲ್ಲಿ ಲವ್ ಮಾಕ್ಟೇಲ್ ನಟಿ

Published : Sep 16, 2025, 05:23 PM IST

ಕನ್ನಡದ ಸೂಪರ್ ಹಿಟ್ ಸಿನಿಮಾ ‘ಲವ್ ಮಾಕ್ಟೇಲ್’ ನಲ್ಲಿ ಮ್ಯಾಚ್ ಮೇಕರ್ ಪಾತ್ರದ ಮೂಲಕ ಗಮನ ಸೆಳೆದ ನಟಿ ಸುಷ್ಮಿತಾ ಅಶ್ವಿನ್ ತಾಯಿಯಾದ ಸಂಭ್ರಮವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಶ್ರೀಕೃಷ್ಣನೇ ಹುಟ್ಟಿರುವುದಾಗಿ ಹೇಳಿದ್ದಾರೆ.

PREV
18
ಲವ್ ಮಾಕ್ಟೇಲ್ ನಟಿ

ಲವ್ ಮಾಕ್ಟೇಲ್ 2 (love mocktail 2) ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಗೆದ್ದ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದ ಸುಶ್ಮಿತಾ ಅಶ್ವಿನ್ ಇದೀಗ ಗಂಡು ಮಗುವಿಗೆ ತಾಯಿಯಾದ ಸಂಭ್ರಮದಲ್ಲಿದ್ದಾರೆ.

28
ತಾಯಿಯಾದ ಸುಷ್ಮಿತಾ ಅಶ್ವಿನ್

ನಟಿ ಸುಷ್ಮಿತಾ ಅಶ್ವಿನ್ ಅವರು ಇಂದು ಅಂದರೆ ಸೆಪ್ಟೆಂಬರ್ 16 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಪೋಸ್ಟ್ ಮಾಡಿ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

38
ಶ್ರೀಕೃಷ್ಣ ಜನಿಸಿದ

ಶ್ರೀಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಮಗು ಹುಟ್ಟಿರೋದರಿಂದ ನಟಿ ಶ್ರೀಕೃಷ್ಣ ಜನಿಸಿದ, ಇಟ್ಸ್ ಬೇಬಿ ಬಾಯ್ ಎಂದು ಶ್ರೀಕೃಷ್ಣನ ಫೋಟೊವನ್ನು ತಮ್ಮ ಇನ್’ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

48
ಶುಭ ಕೋರಿದ ಸೆಲೆಬ್ರಿಟಿಗಳು

ಸುಷ್ಮಿತಾ ಗೌಡಗೆ ನಟಿಯರಾದ ಶಾನ್ವಿ ಶ್ರೀವಾಸ್ತವ್, ತೇಜಸ್ವಿನಿ ಶರ್ಮಾ, ಅಶ್ವಿತಿ ಶೆಟ್ಟಿ, ಸೇರಿ ಹಲವು ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭ ಕೋರಿದ್ದಾರೆ. ಜೊತೆಗೆ ತಾಯಿ -ಮಗು ಆರೋಗ್ಯವಾಗಿರುವಂತೆ ಆಶೀರ್ವದಿಸಿದ್ದಾರೆ.

58
ಲವ್ ಮಾಕ್ಟೇಲ್ ನ ಜಂಕಿ

ಲವ್ ಮಾಕ್ಟೇಲ್ 2 (Love Mocktail 2) ಚಿತ್ರದಲ್ಲಿ ಜಂಕಿ ಪಾತ್ರದಲ್ಲಿ ಸುಷ್ಮಿತಾ ಕಾಣಿಸಿಕೊಂಡಿದ್ದರು. ಇದು ಮ್ಯಾಚ್ ಮೇಕರ್ ಪಾತ್ರವಾಗಿತ್ತು. ಸಣ್ಣ ಪಾತ್ರವಾಗಿದ್ದರೂ ಸಹ ಜನರು ಈ ಪಾತ್ರದ ಪಂಚಿಂಗ್ ಡೈಲಾಗ್ ಗಳನ್ನು ಕಾಮಿಡಿಯನ್ನು ಇಷ್ಟಪಟ್ಟಿದ್ದರು.

68
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್

ಲವ್ ಮಾಕ್ಟೇಲ್ ಸಿನಿಮಾ ಬಳಿಕ ಹಲವಾರು ಸಿನಿಮಾ ಆಫರ್ ಬಂದರೂ ಸುಷ್ಮಿತಾ ಸ್ವೀಕರಿಸಿರಲಿಲ್ಲ. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೇಟ್ ಮಾಡೊದರಲ್ಲಿ ಬ್ಯುಸಿಯಾಗಿದ್ದರು. ಪ್ರೆಗ್ನೆನ್ಸಿಯಲ್ಲೂ ಸಹ ನಟಿ ಗರ್ಭಧಾರಣೆಯಲ್ಲಿನ ಸಮಸ್ಯೆಗಳ ಕುರಿತಾಗಿ ಸಹ ಇನ್’ಸ್ಟಾಗ್ರಾಂನಲ್ಲಿ ವಿವಿಧ ರೀತಿಯ ಕಾಮಿಡಿ ರೀಲ್ಸ್ ಗಳನ್ನು ಶೇರ್ ಮಾಡುತ್ತಿದ್ದರು. .

78
ಗೆಳೆಯ ಅಶ್ವಿನ್ ಜೊತೆ ಮದುವೆ

2022ರಲ್ಲಿ ಸುಷ್ಮಿತಾ ಅವರು ತಮ್ಮ ಗೆಳೆಯ ಅಶ್ವಿನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಬ್ಬರು ವಿದೇಶದಲ್ಲಿ ಕೆಲವು ವರ್ಷ ನೆಲೆಸಿದ್ದರು. ಸದ್ಯ ಬೆಂಗಳೂರು ಮತ್ತು ವಿದೇಶ ಎಂದು ಅಲ್ಲಿ ಇಲ್ಲಿ ಎರಡು ಕಡೆಗಳಲ್ಲೂ ಓಡಾಡುತ್ತಿರುತ್ತಾರೆ. ಸ

88
ಅದ್ಧೂರಿ ಸೀಮಂತ

ಸುಷ್ಮಿತಾ ಸೀಮಂತವು ಅದ್ಧೂರಿಯಾಗಿ ಸಂಪ್ರದಾಯಬದ್ಧವಾಗಿ ಬೆಂಗಳೂರಿನಲ್ಲಿ ನಡೆದಿತ್ತು. ಸುಷ್ಮಿತಾ ಸೀಮಂತ ಶಾಸ್ತ್ರದ ವಿಡಿಯೋ ಮತ್ತು ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

Read more Photos on
click me!

Recommended Stories