54 ವರ್ಷದ ಮಾಜಿ ಸಿಎಂ ಜೊತೆ ಮದುವೆಯಾದ 'ಟಗರು' ಸರೋಜ ಖ್ಯಾತಿಯ ಕನ್ನಡದ ನಟಿ, ಬೆಂಗಳೂರಿನ ತ್ರಿವೇಣಿ ರಾವ್

Published : Jun 22, 2026, 04:00 PM IST

Triveni Rao Biplab Kumar Deb marriage: ಟಗರು ಸಿನಿಮಾ ಖ್ಯಾತಿಯ ಸರೋಜ ಅವರು ಮದುವೆ ಆಗಿದ್ದಾರೆ. ಏಕಾಏಕಿ ಅವರ ಮದುವೆ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ತ್ರಿಪುರಾದ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇವ್ ಜೊತೆ ಅವರು ಮದುವೆ ಆಗಿದ್ದಾರೆ.

PREV
14
ಬಿಪ್ಲಬ್‌ ಕುಮಾರ್‌ಗೆ ಎರಡನೇ ಮದುವೆ

ತ್ರಿಪುರಾದ ಮಾಜಿ ಮುಖ್ಯಮಂತ್ರಿ, ಹಾಲಿ ಬಿಜೆಪಿ ಸಂಸದ ಬಿಪ್ಲಬ್ ಕುಮಾರ್ ದೇವ್ ಜೊತೆ ಮದುವೆ ಆಗಿದೆ. ಬಿಪ್ಲಬ್‌ ಕುಮಾರ್‌ಗೆ ಇದು ಎರಡನೇ ಮದುವೆ. ನವದೆಹಲಿಯಲ್ಲಿ ಜೂನ್ 19 ರಂದು ಮದುವೆ ನಡೆದಿದೆ. ಬಹಳ ಖಾಸಗಿಯಾಗಿ ಈ ಮದುವೆ ನಡೆದಿದ್ದು, ಯಾರಿಗೂ ಹೇಳಿಲ್ಲ, ಫೋಟೋವನ್ನು ಕೂಡ ರಿಲೀಸ್‌ ಮಾಡಿಲ್ಲ.

24
ಮೊದಲ ಪತ್ನಿ ಯಾರು?

ಬಿಪ್ಲಬ್ ದೇವ್ ಈ ಹಿಂದೆ ಸ್ಟೇಟ್ ಬ್ಯಾಂಕ್ ಅಧಿಕಾರಿಯಾಗಿದ್ದ ನೀತಿ ದೇವ್ ಜೊತೆ ಮದುವೆಯಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. 20 ವರ್ಷಗಳ ಕಾಲ ಜೋಡಿಯಾಗಿದ್ದ ಇವರು ಕೆಲವೇ ತಿಂಗಳುಗಳ ಹಿಂದೆ ಡಿವೋರ್ಸ್‌ ಪಡೆದಿದ್ದರು. ಈಗ ಎರಡನೇ ಮದುವೆ ಆಗಿದ್ದಾರೆ. 2022ರಿಂದಲೇ ಇವರು ದೂರ ಆಗಿ ಬದುಕುತ್ತಿದ್ದರು. ಡಿವೋರ್ಸ್‌ಗೆ ಇತ್ಯರ್ಥವಾಗಿ 1 ಕೋಟಿ ರೂಪಾಯಿ ನೀಡಿದ್ದರು.

34
ಹೊಸ ಪತ್ನಿ ಹೆಸರು ಹೇಳಿಲ್ಲ

ಬಿಪ್ಲಬ್ ದೇವ್ ಅವರ ಹೊಸ ಪತ್ನಿಯ ಹೆಸರನ್ನು ಅಧಿಕೃತವಾಗಿ ಹೇಳಿಲ್ಲ. ಆದರೆ ಟಗರು ಸಿನಿಮಾ ಖ್ಯಾತಿಯ ನಟಿ ತ್ರಿವೇಣಿ ರಾವ್‌ ಎನ್ನಲಾಗಿದೆ. ಜೂನ್ 24 ರಂದು ಅಗರ್ತಲಾದ ಹೊಟೇಲ್ ಪೋಲೋ ಟವರ್ಸ್‌ನಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

44
ತ್ರಿವೇಣಿ ರಾವ್‌ ಏನಂತಾರೆ?

ತ್ರಿವೇಣಿ ರಾವ್‌ ಕೂಡ ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಬಿಪ್ಲಬ್‌ ಹಾಗೂ ತ್ರಿವೇಣಿ ಹೇಗೆ ಪರಿಚಯ ಆಯ್ತು ಎಂಬ ಪ್ರಶ್ನೆ ಇದೆ. ತ್ರಿವೇಣಿ ಅವರು ಚಿತ್ರರಂಗದಲ್ಲಾಗಲೀ, ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರಲಿಲ್ಲ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories