Ayogya 2: ಜಗಳ ಆಗುತ್ತೆ, ಮಾತು ಬರುತ್ತೆ, ಅದೆಲ್ಲ ಮರೆತು ಸಿನಿಮಾಕ್ಕಾಗಿ ಒಂದಾಗೋಣ: ರಚಿತಾ ರಾಮ್‌

Published : Jun 21, 2026, 10:07 PM IST

ಅಯೋಗ್ಯ 2 ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ನಟಿ ರಚಿತಾ ರಾಮ್ ಕನ್ನಡ ಚಿತ್ರರಂಗದ ಏಕತೆ ಬಗ್ಗೆ ಮಾತನಾಡಿದ್ದಾರೆ. ಸಣ್ಣಪುಟ್ಟ ಜಗಳ, ಮುನಿಸು ಮರೆತು ಸಿನಿಮಾಗಾಗಿ ಒಂದಾಗಿ ಕೆಲಸ ಮಾಡೋಣ ಎಂದು ಕರೆ ನೀಡಿದ್ದಾರೆ.

PREV
14
ಸಿನಿಮಾಕ್ಕಾಗಿ ದುಡಿಯೋಣ

‘ಸಣ್ಣಪುಟ್ಟ ಜಗಳ, ಮುನಿಸು ಆಗುತ್ತೆ. ಒಂದು ಮಾತು ಬರುತ್ತೆ, ಒಂದು ಮಾತು ಹೋಗುತ್ತೆ. ಅದನ್ನೆಲ್ಲ ಮರೆತು ಸಿನಿಮಾಕ್ಕಾಗಿ ದುಡಿಯೋಣ, ಚಿತ್ರರಂಗಕ್ಕಾಗಿ ಒಂದಾಗೋಣ’. ರಚಿತಾ ರಾಮ್‌ ಆಡಿರುವ ಮಾತುಗಳಿವು.

24
ಆಗಸ್ಟ್‌ 14ರಂದು ಬಿಡುಗಡೆ

ಸತೀಶ್‌ ನೀನಾಸಂ ಹಾಗೂ ರಚಿತಾ ರಾಮ್‌ ನಟನೆಯ ‘ಅಯೋಗ್ಯ 2’ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಿತು. ಆನಂದ್‌ ಆಡಿಯೋ ಯೂಟ್ಯೂಬ್‌ನಲ್ಲಿ ಈ ಹಾಡು ಕೇಳಬಹುದು. ಈ ಚಿತ್ರ ಆಗಸ್ಟ್‌ 14ರಂದು ಬಿಡುಗಡೆಯಾಗುತ್ತಿದೆ.

34
ಕರ್ಕೊಂಡು ಬರೋದಲ್ಲ

ಈ ವೇಳೆ ರಚಿತಾ ರಾಮ್‌, ‘ಸಿನಿಮಾಕ್ಕೆ ದೊಡ್ಡೋರನ್ನು ಬೇರೆಡೆಯಿಂದ ಕರ್ಕೊಂಡು ಬರೋದಲ್ಲ. ನಮ್ಮ ಕಲಾವಿದರನ್ನು ಆ ಎತ್ತರಕ್ಕೆ ಬೆಳೆಸಬೇಕು. ನಮ್ಮಂಥವರಿಗೂ ಅವಕಾಶ ಕೊಟ್ಟು ಬೆಳೆಸಿದ ಕಾರಣ ಇವತ್ತು ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಅಭಿನಯಿಸಲು ಸಾಧ್ಯವಾಗುತ್ತಿದೆ’ ಎಂದರು.

44
ಮೂರನೇ ಭಾಗವನ್ನೂ ಮಾಡುತ್ತೇವೆ

ಸತೀಶ್‌ ನೀನಾಸಂ, ‘ನಾನು ಎಲ್ಲ ಬಗೆಯ ಚಿತ್ರಗಳನ್ನು ಮಾಡಲು ಸಿದ್ಧನಿದ್ದೇನೆ. ಅಯೋಗ್ಯದಲ್ಲಿ ಮೂರನೇ ಭಾಗವನ್ನೂ ಮಾಡುತ್ತೇವೆ. ಈ ಚಿತ್ರ ನನ್ನ ಕೆರಿಯರ್‌ಗೆ ಹೊಸ ಬೆಳಕು ತರುವ ವಿಶ್ವಾಸವಿದೆ’ ಎಂದರು. ಮಹೇಶ್‌ ಕುಮಾರ್‌ ಈ ಚಿತ್ರದ ನಿರ್ದೇಶಕರು. ಮುನೇಗೌಡ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories