ರಾಧಿಕಾ ಸಂಭಾವನೆ ಬಗ್ಗೆ ಕೇಳಲ್ಲ, ಟೈಮ್‌ ಕೇಳ್ತಾಳೆ: ಹೆಂಡ್ತಿ ಬಗ್ಗೆ ಮನಬಿಚ್ಚಿ ಮಾತಾಡಿದ ಯಶ್

Published : Oct 24, 2024, 05:40 PM IST

ನನ್ನ ಬಗ್ಗೆ ಅವಳಿಗೆ, ಅವಳ ಬಗ್ಗೆ ನನಗೆ ಎಲ್ಲ ವಿಚಾರ ಗೊತ್ತು. ಇಲ್ಲವಾದರೆ ನನ್ನಂಥಾ ವರ್ಕೋಹಾಲಿಕ್‌, ಕ್ರೇಜಿ ವ್ಯಕ್ತಿಯ ಜೊತೆ ಬದುಕೋದು ಬಹಳ ಕಷ್ಟ ಎಂದು ಯಶ್‌ ಹೇಳಿದ್ದಾರೆ.

PREV
15
ರಾಧಿಕಾ ಸಂಭಾವನೆ ಬಗ್ಗೆ ಕೇಳಲ್ಲ, ಟೈಮ್‌ ಕೇಳ್ತಾಳೆ: ಹೆಂಡ್ತಿ ಬಗ್ಗೆ ಮನಬಿಚ್ಚಿ ಮಾತಾಡಿದ ಯಶ್

ಬಾಳ ಸಂಗಾತಿ ರಾಧಿಕಾ ಹಾಗೂ ನಾನು ಇಂಡಸ್ಟ್ರಿಯಲ್ಲಿ ಜೊತೆಯಾಗಿ ಬಂದು ಒಟ್ಟಿಗೆ ಬೆಳೆದವರು. ಆಕೆ ನನ್ನ ಸ್ಟ್ರೆಂಥ್‌. ಪತ್ನಿಗಿಂತ ಮೊದಲು ಗೆಳತಿ. ಹೀಗಾಗಿ ನನ್ನ ಬಗ್ಗೆ ಅವಳಿಗೆ, ಅವಳ ಬಗ್ಗೆ ನನಗೆ ಎಲ್ಲ ವಿಚಾರ ಗೊತ್ತು. 

25

ಇಲ್ಲವಾದರೆ ನನ್ನಂಥಾ ವರ್ಕೋಹಾಲಿಕ್‌, ಕ್ರೇಜಿ ವ್ಯಕ್ತಿಯ ಜೊತೆ ಬದುಕೋದು ಬಹಳ ಕಷ್ಟ. ನಾನೊಂದು ಸಿನಿಮಾ ಒಪ್ಪಿಕೊಂಡರೆ ಆಕೆ ಈ ಸಿನಿಮಾ ಎಷ್ಟು ದುಡ್ಡು ಮಾಡಬಹುದು ಅಂತೆಲ್ಲ ಕೇಳಲ್ಲ.

35

ಬದಲಿಗೆ ನೀನು ಖುಷಿಯಾಗಿದ್ದೀಯಾ ಅಂತಷ್ಟೇ ಕೇಳ್ತಾಳೆ. ಅವಳು ಕೇಳೋದು ನನ್ನ ಗಮನ ಮತ್ತು ಸಮಯ. ಅದನ್ನೂ ಅವಳಿಗೆ ನೀಡೋದು ಕಷ್ಟವಾಗುತ್ತಿದೆ ಎಂದು ಯಶ್‌ ಹೇಳಿದ್ದಾರೆ.

45

ಕೆಜಿಎಫ್‌ 3 ಸಿನಿಮಾ ಬರುತ್ತಾ?: ಕ್ರಿಕೆಟಿಗ ಶುಭ್‌ಮನ್‌ ಗಿಲ್‌ ಅವರು ಯಶ್‌, ಕೆಜಿಎಫ್‌ ಅಭಿಮಾನಿ ಕ್ರಿಕೆಟಿಗ ಶುಭಮನ್‌ ಗಿಲ್‌ ಅವರು ಯಶ್‌ ಮತ್ತು ಕೆಜಿಎಫ್‌ ಅಭಿಮಾನಿಯಂತೆ. ಅವರು ‘ಕೆಜಿಎಫ್‌ 3 ಸಿನಿಮಾ ಬರುತ್ತಾ?’ ಎಂದು ಕೇಳಿದ ಪ್ರಶ್ನೆಯನ್ನೂ ಸಂದರ್ಶನದಲ್ಲಿ ಕೇಳಲಾಯಿತು.

55

ಅದಕ್ಕೆ ಉತ್ತರಿಸಿದ ಯಶ್‌, ‘ಹೌದು. ಕೆಜಿಎಫ್‌ನ ರಾಕಿಭಾಯ್‌ನನ್ನು ನೀವೆಲ್ಲ ಬಹಳ ಇಷ್ಟಪಟ್ಟಿದ್ದೀರಿ. ನಿಮ್ಮ ನಂಬಿಕೆ ಹುಸಿಯಾಗದಂತೆ ‘ಕೆಜಿಎಫ್‌ 3’ ಕಥೆ ಇರುತ್ತದೆ. ಸದ್ಯ ಕೈಯಲ್ಲಿರುವ ಪ್ರಾಜೆಕ್ಟ್‌ ಮುಗಿದ ಮೇಲೆ ಆ ಬಗ್ಗೆ ಅಪ್‌ಡೇಟ್‌ ನೀಡುತ್ತೇನೆ’ ಎಂದರು.

Read more Photos on
click me!

Recommended Stories