'ರಾಬರ್ಟ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಆಶಾ ಭಟ್ ಇದೀಗ ಬೇಡಿಕೆಯ ನಟಿ ಹಾಗೂ ಸೂಪರ್ ಮಾಡಲ್ ಆಗಿ ಮಿಂಚುತ್ತಿದ್ದಾರೆ.
17ನೇ ವಯಸ್ಸಿನಲ್ಲಿ ಎನ್‌ಸಿಸಿ ಕೆಡೆಟ್ ಕೂಡ ಆಗಿದ್ದ ಆಶಾ ಭಟ್ ಕರ್ನಾಟಕದಿಂದ ಬಂದ ಮಾಡಲ್ ಮತ್ತು ಇಂಜಿನಿಯರ್. ಅಲ್ಲದೆ 2014ರಲ್ಲಿ ಮಿಸ್ ಸುಪ್ರಾನ್ಯಾಷನಲ್ ಸ್ಪರ್ಧೆಯನ್ನು ಗೆದಿದ್ದಾರೆ.
ಸುಮಾರು 3 ಲಕ್ಷ 37 ಸಾವಿರ ಫಾಲೋವರ್ಸ್‌ನ ಹೊಂದಿರುವ ಆಶಾ ಭಟ್ ಹೆಚ್ಚಾಗಿ ಸೀರೆಯಲ್ಲಿ ಕಾಣಿಸಿಕೊಳ್ಳಲು ಇಷ್ಟ ಪಡುತ್ತಾರೆ. ಅಲ್ಲದೆ ಕೆಲವೊಮ್ಮೆ ಸೀರೆಯಲ್ಲೂ ಹಾಟ್ ಆಗಿ ಕಾಣಿಸುತ್ತಾರೆ.
ಸೀರೆ ಆಗಲಿ ಮಾಡರ್ನ್ ಡ್ರೆಸ್ ಆಗಲಿ ನಮ್ಮ ರಾಬರ್ಟ್ ಸುಂದರಿ ಸದಾ ಸೂಪರ್ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಅಲ್ಲದೆ ಆಶಾ ಮುಂದಿನ ಪ್ರಾಜೆಕ್ಟ್ ರಿವೀಲ್ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.
ಸುಪ್ರಾನ್ತಾಷನಲ್ ಸ್ಪರ್ಧೆ ಗೆದ್ದಿರುವ ಮೊದಲ ಭಾರತದ ಮಾಡಲ್ ಆಶಾ ಭಟ್. ಪೋಲೆಂಡ್‌ನ ವಾರ್ಸಾದಲ್ಲಿ ನಡೆದ ಸ್ಪರ್ಧೆ ಇದಾಗಿದ್ದು ಸುಮಾರು 70 ರಾಷ್ಟ್ರಿಯ ಸುಂದರಿಗಳು ಸ್ಪರ್ಧಿಸಿದ್ದರು.
2019ರಲ್ಲಿ ಜಂಗ್ಲಿ ಸಿನಿಮಾ ಮೂಲಕ ಬಾಲಿವುಡ್‌ಗೆ ಕಾಲಿಟ್ಟರು, 2022ರಲ್ಲಿ ಓರಿ ದೇವುಡಾ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.