2015ರಲ್ಲಿ ಗಣಪ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಪ್ರಿಯಾಂಕಾ ತಿಮ್ಮೇಶ್..ಕನ್ನಡದಲ್ಲಿ ಮಾತ್ರವಲ್ಲದೆ ಮಲಯಾಳಂ ಮತ್ತು ತಮಿಳು ಸಿನಿಮಾದಲ್ಲಿ ನಟಿಸಿದ್ದಾರೆ.
ಅಕೀರಾ, ಪಟಾಕಿ, ಭೀಮಾಸೇನಾ ನಳಮಹಾರಾಜ, ಅರ್ಜುನ್ ಗೌಡ, ಮೇಡ್ ಇನ್ ಇಂಡಿಯಾ, ಶುಗರ್‌ಲೆಸ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಪ್ರಿಯಾಂಕಾ ಮಿಂಚಿದ್ದಾರೆ.
ಬಿಗ್ ಬಾಸ್ ಸೀಸನ್ 8ರ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಪ್ರಿಯಾಂಕಾ ಎಂಟ್ರಿ ಕೊಟ್ಟಿದ್ದಾರೆ. ಇದರ ಜೊತೆಗೆ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಎಂಟ್ರಿ ಕೊಟ್ಟಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಪ್ರಿಯಾಂಕಾ ತಿಮ್ಮೇಶ್ ತಮ್ಮ ವೇಟ್‌ಲಾಸ್ ಟ್ರಾನ್ಸ್‌ಫಾರ್ಮೇಶನ್ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ, ಫೋಟೋಗಳಲ್ಲಿ 6 ಪ್ಯಾಕ್ಸ್ ಮಾಡಿದ್ದಾರೆ.
'ತೂಕ ಇಳಿಸುವುದು ಸುಲಭವಾದ ಟಾಸ್ಕ್ ಅಲ್ಲ...ಒಮ್ಮೆ ನೀವು ಇಳಿಸಿದರೆ ಅದಕ್ಕಿಂತ ಸುಲಭವಾದ ಕೆಲಸ ಮತ್ತೊಂದಿಲ್ಲ. ಬ್ಯೂಟಿ ನಮ್ಮ ಕೈಯಲ್ಲಿದೆ. ನಮ್ಮನ್ನು ನಾವು ಹೇಗೆ ಪ್ರಪಂಚದಲ್ಲಿ ಪ್ರದರ್ಶಿಸಿಕೊಳ್ಳುತ್ತೀವಿ ಅನ್ನೋದು ಮುಖ್ಯವಾಗುತ್ತದೆ' ಎಂದು ಪ್ರಿಯಾಂಕಾ ಬರೆದುಕೊಂಡಿದ್ದಾರೆ.
ಪ್ರಿಯಾಂಕಾ ತಿಮ್ಮೇಶ್ ತಮ್ಮ ಫಿಟ್ನೆಸ್ ಜರ್ನಿ ಬಗ್ಗೆ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಅಪ್ಡೇಟ್ ಮಾಡುತ್ತಿರುತ್ತಾರೆ. ಆದರೆ ಎಲ್ಲಿಯೂ ಫಿಟ್ನೆಸ್ ಸೀಕ್ರೆಟ್ ರಿವೀಲ್ ಮಾಡಿಲ್ಲ.