ಚಾಮರಾಜನಗರದಲ್ಲಿ ಹುಲಿ ವೇಷದಲ್ಲಿ ಕುಣಿದ ಶಿವಣ್ಣ; ಅಪ್ಪುಗೆ ನಮನ

First Published | Jun 27, 2022, 10:00 AM IST

ಗಡಿ ಜಿಲ್ಲೆಯಾಗಿರುವ ಚಾಮರಾಜನಗರದಲ್ಲಿ ‘ಬೈರಾಗಿ’ ಚಿತ್ರದ ಪ್ರಿ ರಿಲೀಸ್‌ ಈವೆಂಟ್‌ ಅದ್ದೂರಿಯಾಗಿ ನಡೆಯಿತು. 

ನಟ ಶಿವರಾಜ್‌ಕುಮಾರ್‌, ಡಾಲಿ ಧನಂಜಯ್‌, ಪೃಥ್ವಿ ಅಂಬರ್‌, ನಟಿ ಯಶ ಶಿಕುಮಾರ್‌ ಸೇರಿದಂತೆ ದೊಡ್ಡ ಕಲಾವಿದರ ತಂಡವೇ ಗಡಿ ಜಿಲ್ಲೆಗೆ ಆಗಮಿಸಿ ಕಾರ್ಯಕ್ರಮದ ರಂಗೇರಿಸಿತ್ತು. 

 ಡಾ ಬಿ ಆರ್‌ ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೀತಾ ಶಿವರಾಜ್‌ಕುಮಾರ್‌, ನಿರ್ದೇಶಕ ವಿಜಯ… ಮಿಲ್ಟನ್‌, ನಿರ್ಮಾಪಕರಾದ ಕೃಷ್ಣ ಸಾರ್ಥಕ್‌, ಜಗದೀಶ್‌ ಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದರು.

Tap to resize

ಕಾರ್ಯಕ್ರಮಕ್ಕೆ ಶಿವರಾಜ್‌ಕುಮಾರ್‌ ಅವರ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು. ಕೇಕೆ, ಶಿಳ್ಳೆ, ಚಪ್ಪಾಳೆಗಳ ನಡುವೆ ‘ಬೈರಾಗಿ’ ಹವಾ ಮುಗಿಲು ಮುಟ್ಟಿತು. 

 ಶಿವಣ್ಣ ಅವರು ನಟ ಪುನೀತ್‌ರಾಜ್‌ಕುಮಾರ್‌ ಅವರ ಹೆಸರು ಹೇಳುತ್ತಿದ್ದಂತೆಯೇ ನೆರೆದಿದ್ದ ಅಭಿಮಾನಿಗಳ ಸದ್ದು ಜೋರಾಯಿತು. ಎಲ್ಲರು ಅಪ್ಪು ಅಪ್ಪು ಎಂದು ಏಕಕಾಲದಲ್ಲಿ ಕೂಗಿದರು. 

ಜತೆಗೆ ಇಡೀ ಕಾರ್ಯಕ್ರಮದಲ್ಲಿ ಮೊಬೈಲ್‌ ಪೋನ್‌ಗಳ ಟಾಚ್‌ರ್‍ ಆನ್‌ ಮಾಡುವ ಮೂಲಕ ಪುನೀತ್‌ರಾಜ್‌ಕುಮಾರ್‌ ಅವರಿಗೆ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಪೃಥ್ವಿ ಅಂಬರ್‌ ಹಾಗೂ ಯಶ ಶಿಕುಮಾರ್‌ ನೃತ್ಯ ಎಲ್ಲರ ಗಮನ ಸೆಳೆಯಿತು. 

 ‘ಅಪ್ಪು ಯಾವಾಗಲೂ ನಮ್ಮ ಜತೆಗೆ ಇರುತ್ತಾರೆ. ಅವರ ಹೆಸರನ್ನು ನಾವು ಸೆಲೆಬ್ರೆಟ್‌ ಮಾಡೋಣ. ನಿಮ್ಮ ಅಭಿಮಾನದಿಂದಲೇ ನಾವು. ಗಾಜನೂರು ನಮ್ಮ ತವರೂರು. ಚಾಮರಾಜನಗರಕ್ಕೂ ನಮಗು ನಂಟಿದೆ.'

 'ನಮ್ಮ ಜನ ಅದ್ದೂರಿ ಸ್ವಾಗತ ಮಾಡಿದ್ದಾರೆ. ಬೈರಾಗಿ ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಈ ಚಿತ್ರದ ಯಶಸ್ಸು ನಿರ್ದೇಶಕ ವಿಜಯ್‌ ಮಿಲ್ಟನ್‌ ಅವರಿಗೆ ಸೇರುತ್ತದೆ’ ಎಂದರು ಶಿವರಾಜ್‌ಕುಮಾರ್‌.

ಡಾಲಿ ಧನಂಜಯ್‌ ಅವರು ‘ಬಡವ ರಾಸ್ಕಲ್‌’ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದರು. ಧನಂಜಯ್‌ ಅವರು ನೃತ್ಯ ಮಾಡುವಾಗ ಡಾಲಿ ಡಾಲಿ ಎಂದು ಅಭಿಮಾನಿಗಳು ಕೂಗಿದರು. 

‘ಶಿವಣ್ಣ ಅವರು ನಮ್ಮನ್ನು ಎಷ್ಟುಪ್ರೀತಿಸಬೇಕೋ ಅಷ್ಟುಪ್ರೀತಿಸುತ್ತಿದ್ದಾರೆ. ನಮ್ಮೂರಿಗೆ ಹೋಗುತ್ತಿದ್ದೇವೆ ಎಂದು ಅವರೇ ನಮಗೆ ಹೊಸ ಬಟ್ಟೆಕೊಡಿಸಿದ್ದಾರೆ. ಇದಕ್ಕಿಂತ ಪ್ರೀತಿ ಇನ್ನೇನು ಬೇಕು’ ಎಂದು ಡಾಲಿ ಅವರು ಹೇಳಿದರು. ಜು.1ರಂದು ಬೈರಾಗಿ ಸಿನಿಮಾ ತೆರೆಗೆ ಬರುತ್ತಿದೆ.

Latest Videos

click me!