ಒಂದು ಶಿಕಾರಿಯ ಕಥೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಕಿರುತೆರೆ ನಟಿ ಸಿರಿ ಪ್ರಹ್ಲಾದ್ ಬಹುಬೇಡಿಕೆಯ ನಟಿಯಾಗಿ ಬೆಳೆಯುತ್ತಿದ್ದಾರೆ.
ಪಿಆರ್‌ಕೆ ಸಂಸ್ಥೆ ನಿರ್ಮಾಣ ಮಾಡಿರುವ ಲಾ ಸಿನಿಮಾದಲ್ಲಿ ಸಿರಿ ಅಭಿನಯಿಸಿದ್ದಾರೆ. ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ಈ ಸಿನಿಮಾ ಅದ್ಭುತ ಪ್ರತಿಕ್ರಿಯೆ ಪಡೆದಿದೆ.
ತಮ್ಮ ಮೊದಲ ಚಿತ್ರಕ್ಕೆ Best Debutant Actress ಪ್ರಶಸ್ತಿಗೆ ಸೈಮಾ 2020 ಆಯ್ಕೆ ಆಗಿದ್ದರು. ಸಿನಿಮಾ ನೋಡಿ ವೋಟ್ ಹಾಕಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದ್ದರು.
'ವಿಜಯಾನಂದ' ಸಿನಿಮಾದಲ್ಲಿ ಶ್ರೀ ವಿಜಯ್ ಸಂಕೇಶ್ವರ ಅವರ ಪತ್ನಿ ಶ್ರೀಮತಿ ಲಲಿತಾ ಸಂಕೇಶ್ವರ ಅವರ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ದೊಡ್ಡ ಅವಕಾಶ ನೀಡಿದಕ್ಕೆ ಭಾವುಕರಾಗಿದ್ದಾರೆ.
ಕನ್ನಡತಿ ಖ್ಯಾತಿಯ ಕಿರಣ್ ರಾಜ್ ನಟನೆಯ ಬಡ್ಡೀಸ್ ಸಿನಿಮಾದಲ್ಲಿ ಸಿರಿ ಅಭಿನಯಸಿದ್ದಾರೆ. ಜೂನ್ 24ರಂದು ಸಿನಿಮಾ ಬಿಡುಗಡೆಯಾಗಿ ಅದ್ಧೂರಿ ಪ್ರದರ್ಶನ ಕಾಣುತ್ತಿದೆ.
ಬಿಗ್ ಬಾಸ್ ಮಂಜು ಪಾವಗಡ ಜೊತೆ ಮಲ್ಲೇಶಿ ಪ್ರೇಮಪ್ರಸಂಗ ಹೆಸರಿನ ಶಾರ್ಟ್‌ಫಿಲ್ಮಂನಲ್ಲಿ ಅಭಿನಯಿಸಿದ್ದಾರೆ. ಇಬ್ಬರ ಕಾಂಬಿನೇಷನ್ ಸೂಪರ್ ಹಿಟ್ ಆಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಸಿರಿ ಸುಮಾರು 43 ಸಾವಿರ ಫಾಲೋವರ್ಸ್‌ನ ಹೊಂದಿದ್ದಾರೆ. ಫೋಟೋಶೂಟ್ ಮತ್ತು ಸಿನಿಮಾಗಳ ಬಗ್ಗೆ ಹಂಚಿಕೊಳ್ಳುತ್ತಾರೆ.