ಕರ್ನಾಟಕದಲ್ಲಿ ಕಾಣಿಸಿಕೊಂಡ ಶ್ರದ್ಧಾ ಶ್ರೀನಾಥ್; ಡಿಯರ್ ವಿಕ್ರಮ್ ಯಾರು?

Published : Jun 25, 2022, 02:07 PM IST

ಡಿಯರ್ ವಿಕ್ರಮ್ ಸಿನಿಮಾ ಟ್ರೈಲರ್‌ ಬಿಡುಗಡೆಯಲ್ಲಿ ಕಾಣಿಸಿಕೊಂಡ ಶ್ರದ್ಧಾ ಶ್ರೀನಾಥ್. ಪಿಂಕ್ ಅಂಡ್ ಬಬ್ಲಿ ಸುಂದರಿಗೆ ನೆಟ್ಟಿಗರು ಫಿದಾ...  

PREV
17
ಕರ್ನಾಟಕದಲ್ಲಿ ಕಾಣಿಸಿಕೊಂಡ ಶ್ರದ್ಧಾ ಶ್ರೀನಾಥ್; ಡಿಯರ್ ವಿಕ್ರಮ್ ಯಾರು?

u-ಟರ್ನ್‌ ಸುಂದರಿ ಶ್ರದ್ಧಾ ಶ್ರೀನಾಥ್ ನಟನೆಯ ಡಿಯರ್ ವಿಕ್ರಮ್ ಸಿನಿಮಾ ಜೂನ್ 30ರಂದು ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಸತೀಶ್ ನೀನಸಾಂಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. 

27

ವಿಭಿನ್ನ ಕಥಾವಸ್ತುವನ್ನು ಹೊಂದಿರುವ ಚಲನಚಿತ್ರ ಡಿಯರ್ ವಿಕ್ರಮ್‌ ಟೀಸರ್ ಸಿನಿರಸಿಕರ ಗಮನ ಸೆಳೆದಿದೆ.ಬಿಡುಗಡೆಯಾಗಿರುವ ಟ್ರೇಲರ್ ಆ ಕುತೂಹಲವನ್ನು ಇಮ್ಮಡಿಗೊಳಿಸಿದೆ.

37

ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಶ್ರದ್ಧಾ ಶ್ರೀನಾಥ್ ಪಿಂಕ್ ಸಿಲ್ಕ್‌ ಬಣ್ಣಸ ಸೆಲ್ವಾರ್‌ನಲ್ಲಿ ಮಿಂಚಿದ್ದಾರೆ. ಟ್ರೆಡಿಷನಲ್‌ ಲುಕ್‌ನಲ್ಲಿ ಶ್ರದ್ಧಾರನ್ನು ನೋಡಿ ಹುಡುಗರು ಫಿದಾ ಆಗಿದ್ದಾರೆ. 

47

ಶ್ರದ್ಧಾ ಹೆಚ್ಚಿಗೆ ತೆಲುಗು ಮತ್ತು ತಮಿಳು ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ ಎನ್ನುವ ಆರೋಪಕ್ಕೆ ಉತ್ತರ ಕೊಟ್ಟಿದ್ದಾರೆ. 'ವರ್ಷದಲ್ಲಿ ಎರಡು ಮೂರು ಸಿನಿಮಾಗಳನ್ನು ಮಾಡುವುದಷ್ಟೆ.'

57

 'ಬೇರೆ ಅವರನ್ನು ನೋಡಿದರೆ ಶೂಟಿಂಗ್ ಇಲ್ಲ ಪ್ರಚಾರ ಅಂತ ಬ್ಯುಸಿಯಾಗಿರುತ್ತಾರೆ. ನಾನು ತುಂಬಾ ಸೆಲೆಕ್ಟಿವ್. ನಮಗೆ ಸಿಗುವ 100 ಕಥೆಯಲ್ಲಿ 90 ಕಥೆಗಳು ನಮಗೆ ಸೆಟ್ ಆಗುವುದಿಲ್ಲ ಏನೋ ಕೊರತೆ ಇರುತ್ತದೆ.'

67

'ನಾನು ಸ್ವಲ್ಪ ಚೂಸಿನೇ. ಆಯ್ಕೆ ಮಾಡಿರುವುದರಲ್ಲಿ ಓಡುತ್ತಾ ಹೇಗೆ ಕಾಣಿಸುತ್ತೀವಿ ಅನ್ನೋದು ಇರುತ್ತೆ. ಕಥೆ ಒಪ್ಪಿಕೊಳ್ಳುವುದಕ್ಕಿಂತ ರಿಜೆಕ್ಟ್ ಮಾಡುವುದೇ ಜಾಸ್ತಿ.'

77

'ಏನಕ್ಕೆ ಕನ್ನಡ ಮಾಡ್ತಿಲ್ಲ ಅಂದ್ರೆ  ನನಗೆ ಇಷ್ಟ ಆಗುವಂತೆ ಕಥೆ ಸಿಗುತ್ತಿಲ್ಲ. ಈಗ ಎಲ್ಲರೂ ಕಮ್‌ಬ್ಯಾಕ್ ಆಂತಿದ್ದಾರೆ ಆದರೆ ನಾನು ಎಲ್ಲೂ ಹೋಗಿಲ್ಲ ಯಾಕೆ ಕಮ್ ಬ್ಯಾಕ್ ಮಾಡ್ಬೇಕು' ಎಂದು ಶ್ರದ್ಧಾ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories