ಚಂದನವನದ ಸಿಕ್ಸ್ ಪ್ಯಾಕ್ ಸುಂದರಿ ಎಂದೇ ಖ್ಯಾತಿ ಪಡೆದಿರುವ ನಟಿ ನಿಶ್ವಿಕಾ ನಾಯ್ಡು ಬೋಲ್ಡ್ ಕೆಂಪು ಬಣ್ಣದ ಸೀರೆಯುಟ್ಟಿರುವ ಫೋಟೊ ಶೇರ್ ಮಾಡಿದ್ದು, ಸೀರೆಯಲ್ಲಿ ಸಿಕ್ಸ್ ಪ್ಯಾಕ್ ತೋರಿಸಿದ್ದಾರೆ. ಈ ಫೋಟೊ ನೋಡಿ ಪಡ್ಡೆಗಳು ನಿದ್ದೆ ಹಾರೋಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ತಮ್ಮ ಡ್ಯಾನ್ಸ್, ಅಭಿನಯದ ಜೊತೆಗೆ ಸಿಕ್ಸ್ ಪ್ಯಾಕ್ ಆಬ್ಸ್ ಮೂಲಕವೇ ಸಹಸ್ರಾರು ಅಭಿಮಾನಿಗಳನ್ನು ಪಡೆದಿರುವ ಚಂದನವನದ ಸಿಕ್ಸ್ ಪ್ಯಾಕ್ ಸುಂದರಿ (six pack beauty) ನಿಶ್ವಿಕಾ ನಾಯ್ಡು ಅವರು ಇದೀಗ ತಮ್ಮ ಹೊಸ ಫೋಟೊ ಶೂಟ್ ಮೂಲಕ ಸದ್ದು ಮಾಡ್ತಿದ್ದಾರೆ.
27
ಸಿಕ್ಸ್ ಪ್ಯಾಕ್ ಸುಂದರಿ
ನಿಶ್ವಿಕಾ (Nishvika Naidu) ತಾವು ಯಾವುದೇ ಡ್ರೆಸ್ ಧರಿಸಿದರೂ ತಮ್ಮ ಅಬ್ಸ್ ಪ್ರದರ್ಶಿಸದೇ ಇರೋದಿಲ್ಲ ನಟಿಯ ಫಿಟ್ ದೇಹಸಿರಿ ಹಾಗೂ ಕೆಂಫು ಬಣ್ಣದ ಸ್ಸೀರೆಯಲ್ಲಿ ಮಿಂಚುತ್ತಿರುವ ನಟಿಯ ಮುಖ ನೋಡಿ ಪಡ್ಡೆಗಳಂತು ನಿದ್ದೆ ಬಿಟ್ಟು, ನಿಶ್ವಿಕಾ ಅಂದವನ್ನು ಹೊಗಳುವುದರಲ್ಲಿ ಬ್ಯುಸಿಯಾಗಿದ್ದಾರೆ.
37
ನಿಶ್ವಿಕಾ ಕೊಟ್ಟ ಕ್ಯಾಪ್ಶನ್
ತಮ್ಮ ಫೋಟೊಗಳಿಗೆ ನಿಶ್ವಿಕಾ ಅಷ್ಟೇ ಮುದ್ದಾಗಿ ಕ್ಯಾಪ್ಶನ್ ಕೊಟ್ಟಿದ್ದು, ಟೈಮ್ ಟೈಮ್ ಗೆ ಫೋಟೊ ಅಪ್ ಲೋಡ್ ಮಾಡೋದು ಒಂದು ಟೆನ್ಶನ್ ಅಂದ್ರೆ, ಆ ಫೋಟೊಗೆ ಕ್ಯಾಪ್ಶನ್ ಹುಡುಕಿ ಹಾಕೋದು ಇನ್ನೊಂದು ಟೆನ್ಶನ್, ಈ ಫೋಟೊಗೆ ನೀವೇ ಕ್ಯಾಪ್ಶನ್ ಹಾಕಿ(give caption) ಎಂದಿದ್ದಾರೆ ನಟಿ.
ನಟಿ ನಿಶ್ವಿಕಾ ನಾಯ್ಡು ಕೆಂಪು ಬಣ್ಣದ ಸುಂದರವಾದ ಸೀರೆ ಧರಿಸಿದ್ದು, ಅದಕ್ಕೆ ಟ್ಯೂಬ್ ಬ್ಲೌಸ್ ಧರಿಸಿ ಫೋಟೊಗೆ ಪೋಸ್ ನೀಡೀದ್ದಾರೆ. ನಟಿಯನ್ನು ನೋಡಿ ಅಭಿಮಾನಿಗಳು, ಹುಡುಗರ ಹೃದಯ ಕದ್ದ ಚೋರಿ, ಸಿಕ್ಸ್ ಪ್ಯಾಕ್ ಸುಂದರಿ ಎಂದಿದ್ದಾರೆ, ಇನ್ನೂ ಕೆಲವರು ದೇವತೆ, ಯಾಕಿಷ್ಟು ಚಂದ ನೀವು, ಯೂನಿವರ್ಸಲ್ ಕ್ರಶ್ (Universal Crush) ನಿಶ್ವಿಕಾ ಎಂದಿದ್ದಾರೆ.
57
ಚಿರು ಜೊತೆ ಸಿನಿಮಾಗೆ ಎಂಟ್ರಿ
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿರುವ ನಿಶ್ವಿಕಾ ನಾಯ್ಡು, ತೆಲುಗು ಫ್ಯಾಮಿಲಿ ಹುಡುಗಿ. ಚಿರಂಜೀವಿ ಸರ್ಜಾ ಜೊತೆ ಅಮ್ಮ ಐ ಲವ್ ಯೂ (Amma I Love You) ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಂತರ ವಾಸು ನಾ ಪಕ್ಕಾ ಕಮರ್ಷಿಯಲ್, ಪಡ್ಡೆಹುಲಿ, ಜೆಂಟಲ್ ಮ್ಯಾನ್ ಸಿನಿಮಾದಲ್ಲಿ ನಟಿಸಿದ್ದರು.
67
ಐಟಂ ಹಾಡುಗಳ ಮೂಲಕ ಗಮನ ಸೆಳೆದ ನಟಿ
ಇದಿಷ್ಟೇ ಅಲ್ಲದೇ ರಾಮಾರ್ಜುನ, ಸಖತ್, ಗುರುಶಿಷ್ಯರು, ದಿಲ್ ಪಸಂದ್, ಕರಟಕ ದಮನಕ ಸಿನಿಮಾದಲ್ಲಿ ನಟಿಸಿದ್ದರು. ಅಲ್ಲದೇ ಗಾಳಿಪಟ 2 ಸಿನಿಮಾದಲ್ಲಿ ವಿಶೇಷ ಅತಿಥಿಯಾಗಿ, ಹಾಗೂ ಗರಡಿ ಸಿನಿಮಾದಲ್ಲಿ ಹೊಡಿರಲಿ ಹಲಗಿ ಹಾಡಿಗೆ ಹೆಜ್ಜೆ ಹಾಕಿದ್ದರು.
77
ಮಹಾನಟಿಯ ಸೀಸನ್ 2 ಜಡ್ಜ್
ನಿಶ್ವಿಕಾ ನಾಯ್ಡು ಝೀ ಕನ್ನಡದ (Zee Kannada) ಮಹಾನಟಿ ಸೀಸನ್ 2ನಲ್ಲಿ ತೀರ್ಪುಗಾರರಾಗಿದ್ದಾರೆ. ಮೊದಲ ಸೀಸನ್ ನಲ್ಲೂ ಸಹ ತೀರ್ಪುಗಾರರಾಗಿದ್ದರು. ಇವರ ಜೊತೆ ರಮೇಶ್ ಅರವಿಂದ್, ಪ್ರೇಮಾ, ತರುಣ್ ಸುಧೀರ್ ಕೂಡ ತೀರ್ಪುಗಾರರಾಗಿದ್ದಾರೆ. ಅನುಶ್ರೀ ನಿರೂಪಣೆ ಮಾಡುತ್ತಿದ್ದಾರೆ. ಸದ್ಯದಲ್ಲೆ ನಟಿ ತೆಲುಗಿನಲ್ಲಿ ಸ್ಟಾರ್ ನಟ ಚಿರಂಜೀವಿ ಜೊತೆ ಐಟಂ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ.