ಇಷ್ಟು ದಿನ ಕುಟುಂಬಕ್ಕೆ ಹೆಚ್ಚು ಸಮಯ ನೀಡುತ್ತಿದ್ದ ಗೋಲ್ಡನ್ ಕ್ವೀನ್ ಅಮೂಲ್ಯ, ಮಂಜು ಸ್ವರಾಜ್ ನಿರ್ದೇಶನದ ಪೀಕಬೂ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಕಮ್‌ಬ್ಯಾಕ್ ಮಾಡಿದ್ದಾರೆ.
ಸ್ಯಾಂಡಲ್‌ವುಡ್‌ನ ಗೋಲ್ಡನ್ ಕ್ವೀನ್ ಅಮೂಲ್ಯ ಬರೋಬ್ಬರಿ 8 ವರ್ಷಗಳ ಬಳಿಕ ಮತ್ತೆ ಕಮ್‌ಬ್ಯಾಕ್ ಮಾಡಿದ್ದಾರೆ. ಪೀಕಬೂ ಎಂಬ ಹೊಸ ಸಿನಿಮಾವನ್ನು ಒಪ್ಪಿಕೊಳ್ಳುವ ಮೂಲಕ ಮತ್ತೆ ಸಿನಿರಂಗಕ್ಕೆ ನಟಿ ಅಮೂಲ್ಯ ಹಿಂದಿರುಗಿದ್ದಾರೆ.
27
ಮಂಜು ಸ್ವರಾಜ್ ನಿರ್ದೇಶನ
ಇಷ್ಟು ದಿನ ಕುಟುಂಬಕ್ಕೆ ಹೆಚ್ಚು ಸಮಯ ನೀಡುತ್ತಿದ್ದ ಅಮೂಲ್ಯ, ಮಂಜು ಸ್ವರಾಜ್ ನಿರ್ದೇಶನದ ಪೀಕಬೂ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಕಮ್‌ಬ್ಯಾಕ್ ಮಾಡಿದ್ದಾರೆ.
37
ಅಮೂಲ್ಯ ಹುಟ್ಟುಹಬ್ಬ
ಇಂದು (ಸೆ.14) ನಟಿ ಅಮೂಲ್ಯ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ವೇಳೆ ಪೀಕಬೂ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಮತ್ತು ಟೀಸರ್ ಬಿಡುಗಡೆಯಾಗಿದೆ. ವಿಶೇಷವಾಗಿ ಮಂಜು ಸ್ವರಾಜ್ ಅಮೂಲ್ಯಗೆ ನಿರ್ದೇಶಿಸುತ್ತಿರುವ ಎರಡನೇ ಸಿನಿಮಾ.
ಇದಕ್ಕೂ ಮುಂಚೆ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅಮೂಲ್ಯ ಜೊತೆ ಶ್ರಾವಣಿ ಸುಬ್ರಮಣ್ಯ ಸಿನಿಮಾವನ್ನು ಮಂಜು ಸ್ವರಾಜ್ ಮಾಡಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೀಗ ಪೀಕಬೂ ಎನ್ನುವ ಶೀರ್ಷಿಕೆಯಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.
57
ಪೀಕಬೂ ಟೀಸರ್ ಬಿಡುಗಡೆ
ಪೀಕಬೂ ಸಿನಿಮಾ ಸಲುವಾಗಿ ಅಮೂಲ್ಯ ಅವರು ಸಂಪೂರ್ಣ ತಯಾರಾಗಿದ್ದು, ಮೊದಲಿನಂತೆ ಅವರು ಕಾಣುತ್ತಿದ್ದಾರೆ. ಡ್ಯಾನ್ಸ್ ಮಾಡುತ್ತಾ ಟೀಸರ್ನಲ್ಲಿ ತಮ್ಮ ಎನರ್ಜಿಯನ್ನು ತೋರಿಸಿದ್ದಾರೆ. ವಿ. ನಾಗೇಂದ್ರ ಅವರು ಕೊರಿಯೋಗ್ರಫಿ ಮಾಡಿದ್ದಾರೆ.
67
ಪೀಕಬೂ ಅಂದ್ರೆ...
ಪೀಕಬೂ ಅಂದ್ರೆ ಮಕ್ಕಳನ್ನ ಆಡಿಸಲು ಬಳಸುವ ಪದ ಇದಾಗಿದೆ ಎಂದು ಚಿತ್ರತಂಡ ಹೇಳಿದೆ. ಜೊತೆಗೆ ಈ ಸಿನಿಮಾದ ಹೀರೋ ಯಾರು ಎಂಬುದನ್ನು ಚಿತ್ರತಂಡ ಇನ್ನೂ ಬಹಿರಂಗಪಡಿಸಿಲ್ಲ.
77
ಶ್ರೀ ಕೆಂಚಾಂಬಾ ಫಿಲಂಸ್ ಬ್ಯಾನರ್ ಅಡಿಯಲ್ಲಿ ಪೀಕಬೂ
ಇನ್ನು ಈ ಚಿತ್ರದ ತಾಂತ್ರಿಕ ವರ್ಗ ಅಂತಿಮವಾಗಿದ್ದು, ಸುರೇಶ್ ಬಾಬು ಅವರು ಛಾಯಾಗ್ರಹಣ ಮಾಡಲಿದ್ದಾರೆ. ವೀರ್ ಸಮರ್ಥ್ ಅವರ ಸಂಗೀತ ಈ ಚಿತ್ರಕ್ಕೆ ಇರಲಿದೆ. ಹಾಗೂ ಶ್ರೀ ಕೆಂಚಾಂಬಾ ಫಿಲಂಸ್ ಬ್ಯಾನರ್ ಅಡಿಯಲ್ಲಿ ಗಣೇಶ್ ಕೆಂಚಾಂಬಾ ನಿರ್ಮಿಸುತ್ತಿರುವ ಸಿನಿಮಾ ಇದಾಗಿದೆ.