Published : Sep 11, 2025, 04:30 PM ISTUpdated : Sep 11, 2025, 04:35 PM IST
chaithra achar ಚಂದನವನದ ಸುಂದರಿ ಚೈತ್ರಾ ಆಚಾರ್ ಇದೀಗ ಮತ್ತೊಮ್ಮೆ ತಮ್ಮ ಬೋಲ್ಡ್ ಫೋಟೊ ಶೂಟ್ ಮೂಲಕ ಹಲ್ ಚಲ್ ಸೃಷ್ಟಿಸಿದ್ದಾರೆ. ಹೊಸ ಲುಕ್ ನಲ್ಲಿ ಸಖತ್ ಹಾಟ್ ಆಗಿ ಕಾಣಿಸ್ತಿದ್ದಾರೆ ನಟಿ.
ಚೈತ್ರಾ ಆಚಾರ್ (Chaithra Achar)ತಮ್ಮ ಅದ್ಭುತವಾದ ನಟನೆ ಮತ್ತು ತಮ್ಮ ಬೋಲ್ಡ್ ಲುಕ್ ಮೂಲಕವೇ ಸದ್ದು ಮಾಡುತ್ತಿರುವ ಚೆಲುವೆ. ಯಾವುದೇ ಪಾತ್ರ ಸಿಕ್ಕರೂ ಅಷ್ಟೇ ಅದ್ಭುತವಾಗಿ ನಟಿಸುತ್ತಾರೆ ಚೈತ್ರಾ.
27
ಬೋಲ್ಡ್ ಲುಕ್
ಕನ್ನಡ, ತಮಿಳು, ತೆಲುಗು ಎಂದು ಸದ್ಯಕ್ಕಂತೂ ನಟನೆಯಲ್ಲಿ ಸಾಕಷ್ಟು ಬ್ಯುಸಿಯಾಗಿರುವ ನಟಿ ಸೋಶಿಯಲ್ ಮೀಡಿಯಾ ಮೂಲಕ ಬೋಲ್ಡ್ ಲುಕ್ ನಲ್ಲಿ (bold look)ಕಾಣಿಸಿಕೊಳ್ಳುವುದನ್ನು ತಪ್ಪಿಸಲ್ಲ ಈ ಮಚ್ಚೆ ಸುಂದರಿ.
37
ಟ್ರೋಲರ್
ಯಾವತ್ತೂ ಟ್ರೋಲರ್ ಗಳಿಗೆ ಕಾಮೆಂಟ್ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳದ ಚೈತ್ರಾ ಆಚಾರ್, ತಮ್ಮ ಕಾಮೆಂಟ್ ಸೆಕ್ಷನ್ ಗಳನ್ನೇ ಕ್ಲೋಸ್ ಮಾಡಿ, ತಮಗೆ ಬೇಕೆನಿಸಿದ ಲುಕ್ ಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ರಾರಾಜಿಸುತ್ತಿರುತ್ತಾರೆ.
ಇದೀಗ ಹೊಸದಾಗಿ ಫೋಟೊ ಶೂಟ್ ಮಾಡಿಸಿಕೊಂಡಿರುವ ಸುಂದರಿ, ಮತ್ತೊಮ್ಮೆ ತಮ್ಮ ಬೋಲ್ಡ್ ಲುಕ್ ತೋರಿಸಿದ್ದಾರೆ. ಸದ್ಯಕ್ಕಂತೂ ಈ ಫೋಟೊಗಳು ವೈರಲ್ ಆಗುತ್ತಿದೆ. ನಟಿಯ ಅಂದಕ್ಕೂ ಜನ ಫಿದಾ ಆಗಿದ್ದಾರೆ.
57
ಕಮೆಂಟ್
ಬಿಳಿ ಬಣ್ಣದ ಪ್ಯಾಂಟ್ ಹಾಗೂ ಬಿಳಿ ಬಣ್ಣದ ಬ್ರೇಜರ್ ನಂತಹ ಟಾಪ್ ಧರಿಸಿರುವ ಚೈತ್ರಾ ಆಚಾರ್, ಅಷ್ಟೇ ಬೋಲ್ಡ್ ಮತ್ತು ಬಿಂದಾಸ್ ಆಗಿ ವಿವಿಧ ರೀತಿಯಲ್ಲಿ ಫೋಟೊಗಳಿಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೊವನ್ನು ಸಾವಿರಾರು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
67
ಯಶಸ್ಸು
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಚೈತ್ರಾ ಆಚಾರ್ ತಮಿಳಿನಲ್ಲಿ ನಟ ಸಿದ್ಧಾರ್ಥ್, ಶರತ್ ಕುಮಾರ್ ಅವರೊಂದಿಗೆ '3 ಬಿಎಚ್‌ಕೆ' ಸಿನಿಮಾದಲ್ಲಿ ನಟಿಸಿದ್ದರು, ಈ ಸಿನಿಮಾ ಸಿನಿರಸಿಕರ ಮನಸ್ಸು ಗೆದ್ದಿದ್ದು, ಸಿಕ್ಕಾಪಟ್ಟೆ ಯಶಸ್ಸು ಗಳಿಸಿದೆ.
77
ಸಿನಿಮಾಗಳಲ್ಲಿ ಬ್ಯುಸಿ
ಕನ್ನಡದಲ್ಲಿ ಚೈತ್ರಾ ಆಚಾರ್ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ‘ಉತ್ತರಕಾಂಡ’, 'ಮಾರ್ನಮಿ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ ತಮಿಳು ನಟ ಶಶಿಕುಮಾರ್ ಜೊತೆಗೂ ಇನ್ನೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಒಟ್ಟಲ್ಲಿ ಸದ್ಯಕ್ಕಂತೂ ನಟಿ ಸಖತ್ ಬ್ಯುಸಿಯಾಗಿದ್ದಾರೆ.