ನಟಿ Krishi Thapanda ಮನೆಯಲ್ಲಿ ಸತ್ಯನಾರಾಯಣ ಪೂಜೆ, ಅನುಪಮಾ ಗೌಡ ಭಾಗಿ

Published : Nov 29, 2025, 11:41 AM IST

ಚಂದನವನದ ನಟಿ ಕೃಷಿ ತಾಪಂಡ ಮನೆಯಲ್ಲಿ ಅದ್ಧೂರಿಯಾಗಿ ಸತ್ಯನಾರಾಯಣ ಪೂಜೆ ನಡೆದಿದೆ. ಈ ವಿಶೇಷ ಪೂಜೆಯಲ್ಲಿ ಕೃಷಿ ತಾಪಂಡ ಮನೆಯವರು, ಸ್ನೇಹಿತರು ಹಾಗೂ ಅನುಪಮಾ ಗೌಡ ಭಾಗಿಯಾಗಿದ್ದಾರೆ. ಫೋಟೊಗಳನ್ನು ಕೃಷಿ ತಮ್ಮ ಇನ್’ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

PREV
18
ಕೃಷಿ ತಾಪಂಡ

ಇತ್ತೀಚೆಗೆ ನಟಿ, ನಿರೂಪಕಿ ಅನುಪಮಾ ಗೌಡ ಮನೆಯಲ್ಲಿ ಸತ್ಯಾನಾರಾಯಣ ಪುಜೆ ನಡೆದಿತ್ತು. ಇದೀಗ ಚಂದನವನದ ನಟಿ ಕೃಷಿ ತಾಪಂಡ ಮನೆಯಲ್ಲಿ ಅದ್ದೂರಿಯಾಗಿ ಸತ್ಯನಾರಾಯಣ ಪೂಜೆ ನಡೆದಿದೆ.

28
ಕುಟುಂಬಸ್ಥರು-ಸ್ನೇಹಿತರು ಭಾಗಿ

ಕೃಷಿ ತಾಪಂಡ ಮನೆಯಲ್ಲಿ ನಡೆದ ಪೂಜೆಯಲ್ಲಿ ಕೃಷಿ ತಂದೆ ತಾಯಿ ಸೇರಿ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ಭಾಗಿಯಾಗಿದ್ದರು.

38
ಅನುಪಮಾ ಗೌಡ

ಕೃಷಿ ತಾಪಂಡ ಬೆಸ್ಟ್ ಫ್ರೆಂಡ್ ಆಗಿರುವ ಅನುಪಮಾ ಗೌಡ ಕೂಡ ಸತ್ಯನಾರಾಯಣ ಪೂಜೆಯಲ್ಲಿ ಭಾಗಿಯಾಗಿದ್ದು, ಪೂಜೆಯು ಅದ್ಧೂರಿಯಾಗಿ ನಡೆದಿದೆ.

48
ತಂದೆ ತಾಯಿ ಜೊತೆ ಪೂಜೆ

ಕೃಷಿ ತಾಪಂಡ ತಂದೆ-ತಾಯಿ, ಸಹೋದರ ಹಾಗೂ ಅವರ ಪತ್ನಿ ಜೊತೆ ಕುಳಿತು ಸತ್ಯನಾರಾಯಣ ಪೂಜೆ ನೆರವೇರಿಸಿದ್ದಾರೆ. ಫೋಟೋಗಳ ಜೊತೆಗೆ ಓಂ ಸತ್ಯನಾರಾಯಣಾಯ ನಮಃ ಎನ್ನುವ ಕ್ಯಾಪ್ಶನ್ ಕೂಡ ಹಾಕಿದ್ದಾರೆ.

58
ತಂದೆತಾಯಿಯ ಆಶೀರ್ವಾದ

ಅದ್ಧೂರಿಯಾಗಿ ಸತ್ಯ ನಾರಾಯಣ ಪೂಜೆ ನೆರವೇರಿದ ಬಳಿಕ ಕೃಷಿ ತಮ್ಮ ತಂದೆ -ತಾಯಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.

68
ಸುದ್ದಿಯಲ್ಲಿದ್ದ ಕೃಷಿ

ಇತ್ತೀಚೆಗೆ ಕೃಷಿ ನಿರ್ಮಾಪಕರೊಬ್ಬರ ಮೇಲೆ ದೂರ ದಾಖಲಿಸಿದ್ದರು. ಈ ವಿಷಯದ ಕುರಿತು ಬಾರಿ ಸುದ್ದಿಯಾಗಿತ್ತು. ಇದರಿಂದ ಕುಗ್ಗಿದ್ದ ಕೃಷಿ ಇದೀಗ ಶಾಂತಿ ನೆಮ್ಮದಿಗಾಗಿ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಿಸಿದ್ದಾರೆ.

78
ಕೃಷಿ ತಾಪಂಡ ಸಿನಿಮಾಗಳು

ಅಕಿರಾ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕೃಷಿ ಕಹಿ, ಎರಡು ಕನಸು. ಕನ್ನಡಕ್ಕಾಗಿ ಒಂದನ್ನು ಒತ್ತಿ ಸೇರಿ ಬೆರಳೆಣಿಕೆಯಷ್ಟು ಸಿನಿಮಾದಲ್ಲಿ ನಟಿಸಿದ್ದರು. ಕೃಷಿ ಕೊನೆಯದಾಗಿ ಗಣ ಸಿನಿಮಾದಲ್ಲಿ ನಟಿಸಿದ್ದರು.

88
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್

ಕೃಷಿ ತಾಪಂಡ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ತಮ್ಮ ಫೋಟೊ ಶೂಟ್ ಮೂಲಕ ಅಭಿಮಾನಿಗಳ ಮನ ಗೆಲ್ಲುತ್ತಿರುತ್ತಾರೆ. ಜೊತೆಗೆ ನಟಿ ಕಾರ್ಫೋರೇಟ್ ಜಾಪ್ ಕೂಡ ಮಾಡುತ್ತಿದ್ದಾರೆ.

Read more Photos on
click me!

Recommended Stories