ಸಿನಿಮಾ ರೀ ಎಂಟ್ರಿ ವಿಚಾರಕ್ಕೆ ಬಂದರೆ 40- 50 ಸ್ಕ್ರಿಪ್ಟ್ ಕೇಳಿದ್ದೇನೆ. ಒಂದು ಇಷ್ಟ ಆಗಿದೆ. ಸಾಕಷ್ಟು ಹಿಟ್ ಸಿನಿಮಾ ನೀಡಿದ ನನ್ನ ಇಷ್ಟದ ನಿರ್ದೇಶಕರ ಐತಿಹಾಸಿಕ ಕಥೆಯುಳ್ಳ ಸಿನಿಮಾವದು ಎಂದರು ನಟಿ ರಮ್ಯಾ.
ಇಂದು (ನ.29) ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಜನ್ಮದಿನ. ಆದರೆ ತಾನು ಜನ್ಮದಿನ ಆಚರಣೆ ಮಾಡಿಕೊಳ್ಳೋದಿಲ್ಲ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಬರ್ತ್‌ಡೇ ಬಗ್ಗೆ ಸಂಭ್ರಮಿಸೋದಕ್ಕೆ ನನಗೇನು ಹದಿನೆಂಟು ಹತ್ತೊಂಬತ್ತು ವರ್ಷ ಅಲ್ಲ. ಯಾಕಪ್ಪ ಬರ್ತ್‌ಡೇ ಬರುತ್ತೆ ಅಂತ ಕೇಳೋ ಸನ್ನಿವೇಶದಲ್ಲಿದ್ದೇನೆ ಎಂದಿದ್ದಾರೆ.
25
ಒಂದು ಇಷ್ಟ ಆಗಿದೆ
ಸಿನಿಮಾ ರೀ ಎಂಟ್ರಿ ವಿಚಾರಕ್ಕೆ ಬಂದರೆ 40- 50 ಸ್ಕ್ರಿಪ್ಟ್ ಕೇಳಿದ್ದೇನೆ. ಒಂದು ಇಷ್ಟ ಆಗಿದೆ. ಸಾಕಷ್ಟು ಹಿಟ್ ಸಿನಿಮಾ ನೀಡಿದ ನನ್ನ ಇಷ್ಟದ ನಿರ್ದೇಶಕರ ಐತಿಹಾಸಿಕ ಕಥೆಯುಳ್ಳ ಸಿನಿಮಾವದು.
35
ನರೇಶನ್ ಕೇಳೋದಕ್ಕೆ ನಾನು ಸಿದ್ಧ
ಬಹುಶಃ ಅದು ನನ್ನ ಕಂಬ್ಯಾಕ್ ಚಿತ್ರವಾಗಲಿದೆ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಸಿನಿಮಾದ ಬಗ್ಗೆ ನನಗಿನ್ನೂ ಮಾಹಿತಿ ಇಲ್ಲ. ಅವರ ನರೇಶನ್ ಕೇಳೋದಕ್ಕೆ ನಾನು ಸಿದ್ಧ ಎಂದಿದ್ದಾರೆ.
ಡಿ.11ಕ್ಕೆ ರಿಲೀಸ್ ಆಗ್ತಿರುವ ಡೆವಿಲ್ ಸಿನಿಮಾಕ್ಕೆ ಆಲ್ ದಿ ಬೆಸ್ಟ್. ದರ್ಶನ್ ಫ್ಯಾನ್ಸ್ ಮೇಲಿನ ಕೇಸ್ ಹಿಂತೆಗೆದುಕೊಳ್ಳೋ ಪ್ರಶ್ನೆಯೇ ಇಲ್ಲ. ಅವರಿಗೆ ಬಡತನ ಇದೆ ಅನ್ನೋ ಮಾತಿದೆ. ಆದರೆ ಮೊಬೈಲ್‌ಗೆ ಡಾಟಾ ಹಾಕೋದಕ್ಕೆ ಹಣ ಇದೆ.
55
ಅವರಿಗೆ ಬಡತನದ ಅರಿವು ಇರಲಿಲ್ಲವಾ
ಅಶ್ಲೀಲ ಕಾಮೆಂಟ್ ಮಾಡುವಾಗ ಅವರಿಗೆ ಬಡತನದ ಅರಿವು ಇರಲಿಲ್ಲವಾ, ಸದ್ಯ ಅವರೆಲ್ಲ ಬೇಲ್ ಮೇಲೆ ಹೊರಗೆ ಬಂದಿದ್ದಾರೆ. ತಮ್ಮ ಮಕ್ಕಳಿಗಾದರೂ ಅವರು ಒಳ್ಳೆಯದನ್ನು ಕಲಿಸಲಿ ಎಂದೂ ರಮ್ಯಾ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.