Aditi Prabhudeva ಮನಗೆದ್ದ ರೈತರ ಮಗ... ಕಾಫಿ ನಾಡಿನ ಹುಡುಗ!

First Published | Dec 27, 2021, 7:37 PM IST

ಬೆಂಗಳೂರು(ಡಿ. 27)  ಸ್ಯಾಂಡಲ್ ವುಡ್ (Sandalwood) ಸುಂದರಿ ಅದಿತಿ ಪ್ರಭುದೇವ  (Aditi Prabhudeva) ರೈತರೊಬ್ಬರನ್ನು (Marriage) ಮದುವೆಯಾಗುತ್ತಿದ್ದಾರೆ.  ಡಿ.26ರ ಭಾನುವಾರ ಎಂಗೇಜ್‌ಮೆಂಟ್ ಆಗಿದ್ದು ಆಪ್ತರಿಗಷ್ಟೆ ಅವಕಾಶ ಇತ್ತು. ಅದಿತಿ ಮದುವೆಯಾಗುತ್ತಿರುವ ಹುಡುಗನ ಹೆಸರು ಯಶಸ್. ಯಶಸ್ ಮತ್ತು ಅದಿತಿ ಹಲವು ವರ್ಷಗಳಿಂದ ಪ್ರೀತಿಯಲ್ಲಿ ಇದ್ದರು. ಚಿಕ್ಕಮಗಳೂರಿನ ಕಾಫಿ ತೋಟದ ಮಾಲೀಕರಾಗಿರುವ (chikmagaluru coffee planter)ಯಶಸ್ ಅವರನ್ನು ನಟಿ ಮದುವೆಯಾಗುತ್ತಿದ್ದಾರೆ.

ಶಾನೆ ಟಾಪಾಗವಳೆ ಎಂದು ಕನ್ನಡಿಗರನ ಮನ ಗೆದ್ದಿದ್ದ ದಾವಣಗೆರೆಯ ಸುಂದರಿ ಅದಿತಿ ಪ್ರಭುದೇವ ಎಂಗೇಜ್ ಆಗಿದ್ದಾರೆ!.. ಸೋಶಿಯಲ್  ಮೀಡಿಯಾದಲ್ಲೆ ಅದೇ ಸುದ್ದಿ... ಕನ್ನಡದ ನಟಿ ಹಸೆಮಣೆ ಏರುವುದು ಫಿಕ್ಸ್ ಆಯ್ತಾ? ಹುಡುಗ ಯಾರು? ಯಾವಾಗ ಮದುವೆ? ಅಭಿಮಾನಿಗಳಿಂದ ನೂರಾರು ಪ್ರಶ್ನೆ ಎಲ್ಲದಕ್ಕೂ ಉತ್ತರ  ನೀಡಿದ್ದಾರೆ.

ತುಂಬಾ ಪ್ರೀತಿ ಮಾಡೋರು, ಜವಾಬ್ದಾರಿ ಇದೋರು ಬೇಕು; ಪತಿಗಾಗಿ ಗಣೇಶನನ್ನ ಬೇಡಿಕೊಂಡ ಅದಿತಿ!

ನಟಿ ಚಿಕ್ಕಮಗಳೂರಿನ ರೈತರೊಬ್ಬರನ್ನು ಮದುವೆಯಾಗುತ್ತಿದ್ದಾರೆ. ಮದುವೆ  ಸೇರಿ ಬೇರೆ ವಿಚಾರಗಳ ಬಗ್ಗೆ ನಟಿ ಮಾಹಿತಿ ನೀಡಿಲ್ಲ.  ಈಗಲೂ ಸಿನಿಮಾ ಶೂಟಿಂಗ್ ನಲ್ಲಿಯೇ ಇದ್ದೇನೆ ಎಂದು ತಿಳಿಸಿದ್ದಾರೆ.

Tap to resize

ನಟಿ ಅದಿತಿ ಸದಾ ಕನ್ನಡ ಚಿತ್ರಗಳನ್ನು ಬೆಂಬಲಿಸಿಕೊಂಡು ಬಂದವರು, ಬೆಳಗಾವಿಯಲ್ಲಿ ಎಂಇಎಸ್ ಪುಂಟಾಟಕ್ಕೂ ವಿರೋಧ ವ್ಯಕ್ತಪಡಿಸಿದ್ದರು . ಕನ್ನಡಕ್ಕೆ ಅವಮಾನ ಆಗುತ್ತಿದ್ದರೆ ಸಹಿಸಲು ಸಾಧ್ಯವಿಲ್ಲ ಎಂದು ಗುಡುಗಿದ್ದರು.

ನಟಿ ಹೆಚ್ಚಿನ ವಿಚಾರ ಬಿಟ್ಟುಕೊಟ್ಟಿಲ್ಲ. ಸಾಕಷ್ಟು ಸಿನಿಮಾಗಳು ಕೈಯಲ್ಲಿದೆ. ಇದೆಲ್ಲವನ್ನು ಮುಗಿಸಿ ನಿಮಗೆಲ್ಲ ತಿಳಿಸುತ್ತೇನೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ನಟಿ ಅಭಿಮಾನಿಗಳಿಗೆ ಹೊಸ ವರ್ಷಕ್ಕೂ ಮುನ್ನ ಶುಭ ಸುದ್ದಿ ನೀಡಿದ್ದಾರೆ.   ಈನ ಸುದ್ದಿಯಿಂದ ಕೆಲವರ ಹೃದಯವೂಮ ಚೂರು ಚೂರಾಗಿದೆ!

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.  ಮುಂದಿನ ವರ್ಷದಲ್ಲಿ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಹಾಗೂ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆ ಮಾತುಕತೆಯೂ ಜೋರಾಗಿ ನಡೆಯುತ್ತಿದೆ.

Latest Videos

click me!