Arav Surya Wedding: ತಿರುಪತಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ 'ಯಾರಿವಳು' ನಟ!

Suvarna News   | Asianet News
Published : Dec 19, 2021, 01:47 PM IST

ವೈಷ್ಣವಿ ಜೊತೆ ತಿರುಪತಿಯಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಆರವ್... 

PREV
18
Arav Surya Wedding: ತಿರುಪತಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ 'ಯಾರಿವಳು' ನಟ!

ಯಾರಿವಳು (Yaarivalu) ಮತ್ತು ವೀಣಾದೀಪ (Veenadeepa) ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದುಕೊಂಡ ನಟ ಆರವ್ ಸೂರ್ಯ (Arav Surya). 
 

28

ನಟ ಆರವ್ ಸೂರ್ಯ ಮತ್ತು ಗೆಳತಿ ವೈಷ್ಣವಿ (Vaishnavi) ಡಿಸೆಂಬರ್ 12ರಂದು ತಿರುಪತಿಯಲ್ಲಿ (Tirupati) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ (Social media) ಹಂಚಿಕೊಂಡಿದ್ದಾರೆ. 

38

ತಿರುಪತಿಯಲ್ಲಿ ನಡೆದ ಮದುವೆಯಲ್ಲಿ ಕುಟುಂಬಸ್ಥರು (Family) ಮಾತ್ರ ಭಾಗಿಯಾಗಿದ್ದರು.  ಅರವ್ ರೇಶ್ಮಿ ಪಂಚೆ ಶೆಲ್ಯ (Silk outfit) ಧರಿಸಿದ್ದರೆ, ವೈಷ್ಣವಿ ಕ್ರೀಮ್ ಮತ್ತು ಕೆಂಪು ಬಣ್ಣದ ಸೀರೆ (Saree) ಧರಿಸಿದ್ದಾರೆ. 

48

 ಮದುವೆಯ ಎರಡು ಫೋಟೋ ಹಂಚಿಕೊಂಡ ಆರವ್ ಅವರು ಮದುವೆ ಸಮಯದಲ್ಲಿ ಬಿಂದಿಗೆಯಲ್ಲಿ ಉಂಗುರ (Ring Game) ಹಾಕಿ ಆಟವಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಮತ್ತೊಂದು ಫೋಟೋದಲ್ಲಿ ಮಗದೊಂದು ಶಾಸ್ತ್ರ ಮಾಡುತ್ತಿದ್ದಾರೆ. 

58

ಈ ವರ್ಷ ಫೆಬ್ರವರಿ (February) ತಿಂಗಳಿನಲ್ಲಿ ಇಬ್ಬರೂ ಅದ್ಧೂರಿಯಾಗಿ ನಿರ್ಶ್ಚಿತಾರ್ಥ (Engagement) ಮಾಡಿಕೊಂಡಿದ್ದರು. ಈ ಸಮಯದಲ್ಲಿ ತಮ್ಮ ಸಂಗಾತಿ ವೈಷ್ಣವಿ ಅವರನ್ನು ಸಿನಿ ಸ್ನೇಹಿತರಿಗೆ ಪರಿಚಯ ಮಾಡಿಕೊಟ್ಟಿದ್ದರು. 

68

 ಮದುವೆಗೂ ಮುನ್ನ ಇಬ್ಬರೂ ವಿಭಿನ್ನ ಕಾನ್ಸೆಪ್ಟ್‌ನಲ್ಲಿ ಫೋಟೋಶೂಟ್ (Concept Prewedding Photoshoot) ಮಾಡಿಸಿದ್ದರು. ಹಿಂದೆ ಹಳ್ಳಿ ಬ್ಯಾಕ್‌ಗ್ರೌಂಡ್‌ ರೀತಿ, ಮನೆ ಮುಂದೆ ಕುರ್ಚಿ ಮೇಲೆ ಆರವ್ ಕೂತಿದ್ದಾರೆ. ಹಿಂದೆ ವೈಷ್ಣವಿ ನಿಂತಿದ್ದಾರೆ.  ಫೋಟೋ ಸೂಪರ್ ಆಗಿದ್ದು ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

78

ಇದು ಲವ್ ಮ್ಯಾರೇಜ್ (Love Marriage) ಅಥವಾ ಅರೇಂಜ್ಜ್ ಮ್ಯಾರೇಜ್‌ (Arrange Marriage) ಅಂತ ಯಾರಿಗೂ ಕ್ಲಾರಿಟಿ ಸಿಕ್ಕಿಲ್ಲ. ವೈಷ್ಣವಿ ಅವರ ಮುಖ ನೋಡಿದರೆ ಅವರು ಚಿತ್ರರಂಗದವರು ಅನಿಸುವುದಿಲ್ಲ. ಹೀಗಾಗಿ ಅವರನ್ನು ಒಮ್ಮೆ ಪರಿಚಯ ಮಾಡಿಕೊಡಿ, ಎಂದು ನೆಟ್ಟಿಗರು ಡಿಮ್ಯಾಂಡ್ ಮಾಡಿದ್ದರು. 

88

ವೈಯಕ್ತಿಕ ಕಾರಣಗಳಿಂದ ಆರವ್‌ 'ಯಾರಿವಳು' ಧಾರಾವಾಹಿಯಿಂದ ಇದೀಗ ಹೊರ ನಡೆದಿದ್ದಾರೆ. ಆರವ್ ಪಾತ್ರಕ್ಕೆ ಇದೀಗ ರಾಹುಲ್ ಆಮೀನ್ (Rahul Amin) ಎಂಟ್ರಿಕೊಟ್ಟಿದ್ದಾರೆ.

Read more Photos on
click me!

Recommended Stories