ನಟ ದರ್ಶನ್‌ಗೆ ಜೀವಾವಧಿ ಶಿಕ್ಷೆ ಆಗುತ್ತಾ? ಯಾವುದಕ್ಕೂ ಇರಲಿ, ಈ ಮುದ್ದಾದ ಫ್ಯಾಮಿಲಿ ಫೋಟೋವನ್ನೊಮ್ಮೆ ನೋಡಿ!

Published : Nov 03, 2025, 09:46 PM IST

ಸದಾಕಾಲ ಬಾಡಿಗಾರ್ಡ್‌ಗಳ ಜೊತೆಯೇ ತಿರುಗಾಡುತ್ತಿದ್ದ ದರ್ಶನ್‌ಗೆ ಅಂದೂ ಇಂದೂ ಪೊಲೀಸ್‌ ಭದ್ರತೆ ಕೊಡುತ್ತಿದ್ದಾರೆ. ಆದರೆ, ಅಂದು ದರ್ಶನ್‌ ಸ್ಟಾರ್‌ ಹೀರೋ ಆಗಿದ್ದರು. ಆದರೆ, ಇಂದು ಕೊಲೆ ಪ್ರಕರಣದ ಆರೋಪಿ. ಏನೆಲ್ಲಾ ಆಗೋಯ್ತು!.. ಅವರ ಮುದ್ದಾದ ಫ್ಯಾಮಿಲಿಯ ಎಂದೂ ನೋಡಿರದ ಫೋಟೋಗಳು ಇಲ್ಲಿವೆ ನೋಡಿ..

PREV
116
ನಟ ದರ್ಶನ್ ಫ್ಯಾಮಿಲಿಯ ಅಪರೂಪದ ಫೋಟೋಗಳು!

ಸದ್ಯ ಕೊಲೆ ಆರೋಪಿಯಾಗಿರುವ ಕನ್ನಡದ ಸ್ಟಾರ್ ನಟ ದರ್ಶನ್ ಅವರ 'ದರ್ಶನ' ಇವತ್ತು ಮತ್ತೆ ಆಗಿದೆ. ಬರೋಬ್ಬರಿ 81 ದಿನಗಳ ಬಳಿಕ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ವೇಳೆ ಇಂದು ನಟ ದರ್ಶನ್ ಸಿಟಿ ಸಿವಿಲ್ ಕೋರ್ಟ್‌ಗೆ ಹಾಜರಾಗಿದ್ದರು.

216
ನಟ ದರ್ಶನ್ ಫ್ಯಾಮಿಲಿಯ ಅಪರೂಪದ ಫೋಟೋಗಳು!

ಜೈಲಿನ ನಾಲ್ಕು ಗೋಡೆಗಳ ಮಧ್ಯೆ ವಿಲಿವಿಲಿ ಅಂತಾ ಒದ್ದಾಡುತ್ತಿದ್ದ ನಟ ದರ್ಶನ್‌ ತೂಗುದೀಪ ಅವರನ್ನು ಇಂದು ಸಿಟಿ ಸಿವಿಲ್‌ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಈ ಮೂಲಕ ನಟ ದರ್ಶನ್‌ಗೆ ಇಂದು ಹೊರಜಗತ್ತಿನ 'ದರ್ಶನ' ಆಗಿದೆ.

316
ನಟ ದರ್ಶನ್ ಫ್ಯಾಮಿಲಿಯ ಅಪರೂಪದ ಫೋಟೋಗಳು!

ಬೂದು ಬಣ್ಣದ ಪುಲ್‌ಓವರ್‌ ನೀಲಿ ಬಣ್ಣದ ಜೀನ್ಸ್‌ ತೊಟ್ಟು ದರ್ಶನ್‌ ಪೊಲೀಸ್ ವಾಹನದಲ್ಲಿ ಕೋರ್ಟ್‌ಗೆ ಆಗಮಿಸಿದ್ದರು. ಆದರೆ, ಸಾಕಷ್ಟು ಸೊರಗಿದ್ದಾರೆ, ಮುಖದಲ್ಲಿ ಕಳೆ ಹೊರಟುಹೋಗಿದೆ ಎನ್ನಬಹುದು.

416
ನಟ ದರ್ಶನ್ ಫ್ಯಾಮಿಲಿಯ ಅಪರೂಪದ ಫೋಟೋಗಳು!

ಸ್ಟಾರ್ ನಟರಾಗಿದ್ದಾಗ ಸದಾಕಾಲ ಬಾಡಿಗಾರ್ಡ್‌ಗಳ ಜೊತೆಯೇ ತಿರುಗಾಡುತ್ತಿದ್ದ ದರ್ಶನ್‌ಗೆ ಅಂದೂ ಇಂದೂ ಕೂಡ ಪೊಲೀಸ್‌ ಭದ್ರತೆ ಕೊಡುತ್ತಿದ್ದಾರೆ. ಆದರೆ, ಅಂದು ದರ್ಶನ್‌ ಸ್ಟಾರ್‌ ಹೀರೋ ಆಗಿದ್ದ. ಆದರೆ, ಈಗ ಕೊಲೆ ಪ್ರಕರಣದ ಆರೋಪಿ. ಏನೆಲ್ಲಾ ಆಗೋಯ್ತು ನೋಡಿ!

516
ನಟ ದರ್ಶನ್ ಫ್ಯಾಮಿಲಿಯ ಅಪರೂಪದ ಫೋಟೋಗಳು!

ಮಧ್ಯಾಹ್ನದ ವೇಳೆ ನಟ ದರ್ಶನ್‌ ಕೋರ್ಟ್‌ಗೆ ಆಗಮಿಸಿದಾಗ ಅದಾಗಲೇ ಅಲ್ಲಿ ಭಾರೀ ಜನಜಂಗುಳಿ ಸೇರಿತ್ತು. ದರ್ಶನ್‌ ಫ್ಯಾನ್ಸ್‌ಗಳು ಒಂದಡೆಯಾದರೆ, ಇನ್ನೊಂದೆಡೆ ಲೆಕ್ಕವಿಲ್ಲದಷ್ಟು ವಕೀಲರು.

616
ನಟ ದರ್ಶನ್ ಫ್ಯಾಮಿಲಿಯ ಅಪರೂಪದ ಫೋಟೋಗಳು!

ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಹಾಗೂ ಎ2 ಆರೋಪಿ ದರ್ಶನ್‌ರನ್ನು ಭಿನ್ನ ವಾಹನಗಳಲ್ಲಿ ಕರೆತರಲಾಗಿತ್ತು. ಪೊಲೀಸರ ಭದ್ರತೆಯ ನಡುವೆ ಕೋರ್ಟ್‌ನ ಆವರಣಕ್ಕೆ ಹೋದ ದರ್ಶನ್‌ಗೆ ಕೆಲ ಹೊತ್ತು ಅಲ್ಲಿಯೇ ಕಾಯುವಂತೆ ತಿಳಿಸಲಾಯಿತು.

716
ನಟ ದರ್ಶನ್ ಫ್ಯಾಮಿಲಿಯ ಅಪರೂಪದ ಫೋಟೋಗಳು!

ಬಳಿಕ ದರ್ಶನ್‌ ಮೇಲೆ ದೋಷಾರೋಪ ಮಾಡುವ ಮುನ್ನ ಸಾಕಷ್ಟು ಡ್ರಾಮಾ ನಡೆಯಿತು. ದರ್ಶನ್ ಸೇರಿದಂತೆ ಒಟ್ಟೂ 17 ಮಂದಿ ಆರೋಪಿಗಳು ಕೋರ್ಟ್‌ನ ಒಳಗೆ ನಿಲ್ಲಲು ಅಲ್ಲಿ ಜಾಗವೇ ಇದ್ದಿರಲಿಲ್ಲ. ಕೊನೆಗೆ ಸ್ವತಃ ಜಡ್ಜ್‌ ಪ್ರಕರಣಕ್ಕೆ ಸಂಬಂಧಪಟ್ಟ ವಕೀಲರು ಬಿಟ್ಟು ಬೇರೆಯಾರೂ ಇಲ್ಲಿರಕೂಡದು ಎಂದು ಹೇಳಿಬಿಟ್ಟರು.

816
ನಟ ದರ್ಶನ್ ಫ್ಯಾಮಿಲಿಯ ಅಪರೂಪದ ಫೋಟೋಗಳು!

ಅಲ್ಲಿದ್ದ ಪೊಲೀಸರು ಕೂಡ ವಕೀಲರಿಗೆ ಹೊರಹೋಗುವಂತೆ ಮನವಿ ಮಾಡಿದರು. ಜಡ್ಜ್‌ ಹಾಗೂ ಪೊಲೀಸರು ಮನವಿಯ ಬಳಿಕ ಕೆಲ ಹೊತ್ತಿಗೆ ಕೊಂಚ ಪ್ರಮಾಣದಲ್ಲಿ ಜನಜಂಗುಳಿ ಖಾಲಿಯಾಯಿತು.

916
ನಟ ದರ್ಶನ್ ಫ್ಯಾಮಿಲಿಯ ಅಪರೂಪದ ಫೋಟೋಗಳು!

ಜಡ್ಜ್‌ ದರ್ಶನ್‌ ಹಾಗೂ ಇತರ 16 ಮಂದಿಯ ಕುರಿತಾಗಿ ದೋಷಾರೋಪ ಮಾಡಿದರೆ, ಎಲ್ಲರೂ ಕೂಡ ಅದನ್ನು ತಿರಸ್ಕರಿಸಿದರು. ಕೊನೆಗೆ ಜಡ್ಜ್‌ ನ.10ರಿಂದ ಪ್ರಕರಣದ ವಿಚಾರಣೆ ಆರಂಭ ಮಾಡುವುದಾಗಿ ಆದೇಶ ನೀಡಿದರು. ಆದ್ದರಿಂದ ಇದೀಗ ದರ್ಶನ್ ಅಭಿಮಾನಿಗಳು ನವೆಂಬರ್ 10 ಬರುವುದನ್ನೇ ಕಾಯುವಂತಾಗಿದೆ.

1016
ನಟ ದರ್ಶನ್ ಫ್ಯಾಮಿಲಿಯ ಅಪರೂಪದ ಫೋಟೋಗಳು!

ಇದೀಗ ನಟ ದರ್ಶನ್‌ ಫೋಟೋ ಭಾರೀ ವೈರಲ್ ಅಗಿದೆ. 81 ದಿನಗಳ ಕಾಲ ಹೊರಜಗತ್ತನ್ನು ಕಾಣದಿರುವ ದರ್ಶನ್‌ ಹೇಗಿರಬಹುದು ಎನ್ನುವ ಕುತೂಹಲ ಎಲ್ಲರಲ್ಲಿತ್ತು. ಈ ವೇಳೆ ಕೋರ್ಟ್‌ ಒಳಗೆ ದರ್ಶನ್‌ ಕುಳಿತಿರುವ ಫೋಟೋ ವೈರಲ್‌ ಆಗಿದೆ.

1116
ನಟ ದರ್ಶನ್ ಫ್ಯಾಮಿಲಿಯ ಅಪರೂಪದ ಫೋಟೋಗಳು!

ಮುಖ ಸಂಪೂರ್ಣವಾಗಿ ಬಾಡಿ ಹೋಗಿದ್ದರೆ, ಕಣ್ಣಿನಲ್ಲಿ ಮುಂದೇನಾಗಬಹುದು ಎನ್ನುವ ಆತಂಕ ಕಂಡಿದೆ. ಎರಡು ಕೈಗಳನ್ನು ಜೋಡಿಸಿ ದರ್ಶನ್‌ ದೇವರನ್ನು ಬೇಡಿಕೊಳ್ಳುತ್ತಿರುವ ರೀತಿ ಕಂಡಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ ಸೊರಗಿ ಹೋಗಿರುವುದು ಈ ಫೋಟೋದಲ್ಲಿ ಕಂಡಿದೆ.

1216
ನಟ ದರ್ಶನ್ ಫ್ಯಾಮಿಲಿಯ ಅಪರೂಪದ ಫೋಟೋಗಳು!

ಜೈಲಿಗೆ ಹೋಗುವ ಮೊದಲು ಬೇಕೆಂದಾಗ ಬೇಕಾದ ಆಹಾರ ತಿನ್ನುತ್ತಿದ್ದ ದರ್ಶನ್‌, ಈಗ ಕನಿಷ್ಠ ಮನೆ ಊಟ ಮಾಡಲು ಕೂಡ ಕೋರ್ಟ್‌ ಅನುಮತಿ ತೆಗೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಇಂದು ಕೋರ್ಟ್‌ಗೆ ಬರುವ ಖುಷಿಯಲ್ಲಿ ದರ್ಶನ್‌ ಬೆಳಗ್ಗೆ ಇಂದ ಏನನ್ನೂ ತಿಂದಿರಲಿಲ್ಲ. ಇದನ್ನೇ ಜಡ್ಜ್‌ ಮುಂದೆ ತಿಳಿಸಲಾಯಿತು.

1316
ನಟ ದರ್ಶನ್ ಫ್ಯಾಮಿಲಿಯ ಅಪರೂಪದ ಫೋಟೋಗಳು!

'ದರ್ಶನ್ ಮಾಡಿಲ್ಲ.. ಊಟ ಕೊಡಬಹುದೇ' ಎಂದು ವಕೀಲರು ನ್ಯಾಯಾಧೀಶರನ್ನು ಹೇಳಿದರು. ಅವರಿನ್ನೂ ಊಟ ಮಾಡಿಲ್ಲವೇ ಎಂದು ಜಡ್ಜ್‌ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಬರುವ ವಾಹನದಲ್ಲಿ ಊಟ ಕೊಟ್ಟೆವು ಆದರೆ ತಿಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

1416
ನಟ ದರ್ಶನ್ ಫ್ಯಾಮಿಲಿಯ ಅಪರೂಪದ ಫೋಟೋಗಳು!

ಜೊತೆಗೆ, 'ಅವರ ಪತ್ನಿ ವಿಜಯಲಕ್ಷ್ಮೀ ಮನೆಯಿಂದ ಊಟ ತಂದಿದ್ದಾರೆ. ಅದನ್ನು ಕೊಡಬಹುದೇ' ಎಂದು ಕೇಳಿದಾಗ 'ಮನೆ ಊಟವನ್ನು ಪರಿಶೀಲನೆ ಮಾಡಿ ಬಳಿಕ ಕೊಡಿ' ಎಂದಿ ಜೈಲಧಿಕಾರಿಗೆ ಜಡ್ಜ್‌ ಸೂಚನೆ ನೀಡಿದರು. ಹಾಗೇ ಮಾಡಲಾಯಿತು.

1516
ನಟ ದರ್ಶನ್ ಫ್ಯಾಮಿಲಿಯ ಅಪರೂಪದ ಫೋಟೋಗಳು!

ಜೈಲಿನಲ್ಲೇ ಮನೆ ಊಟ ಸವಿದ ಬಳಿಕ ದರ್ಶನ್‌ ಅಲ್ಲಿಂದ ಪರಪ್ಪನ ಅಗ್ರಹಾರ ಕಡೆ ಹೊರಟರು. ಕೋರ್ಟ್‌ನಿಂದ ಹೊರಹೋಗುವ ವೇಳೆ ಮುಂದೆ ಪವಿತ್ರಾ ಗೌಡ ಹೋದರೆ, ಆಕೆಯ ಹಿಂದೆ ದರ್ಶನ್‌ ಹೋದರು. ಈ ವೇಳೆ ಕೆಲ ಅಭಿಮಾನಿಗಳಿಗೆ ಸೆಲ್ಯೂಟ್‌ ಹೊಡೆದ ದರ್ಶನ್‌ ಇನ್ನೂ ಕೆಲವರಿಗೆ ಕೈ ನೀಡಿದರು.

1616
ನಟ ದರ್ಶನ್ ಫ್ಯಾಮಿಲಿಯ ಅಪರೂಪದ ಫೋಟೋಗಳು!

ದರ್ಶನ್‌ ಕಂಡ ಕಡೆಯಲ್ಲೆಲ್ಲಾ ಅವರ ಅಭಿಮಾನಿಗಳು 'ಬಾಸ್‌.. ಬಾಸ್‌..' ಎಂದು ಕೂಗಲು ಆರಂಭಿಸಿದರು. ಕೋರ್ಟ್ ಆವರಣದಲ್ಲಿ 'ಡಿ ಬಾಸ್' ಎಂದು ಕಿರುಚಾಡಿದ ಅಭಿಮಾನಿಗಳು ಬಳಿಕ ಅವರನ್ನು ಕರೆದುಕೊಂಡು ಹೋದ ಬಸ್‌ನ ಹಿಂದೆಯೇ ಓಡಲು ಆರಂಭಿಸಿದರು. ಸಂಜೆ 5.30ರ ಮತ್ತೆ ದರ್ಶನ್ ಹಾಗು ಸಹಚರರು ಪರಪ್ಪನ ಅಗ್ರಹಾರ ಜೈಲಿಗೆ ವಾಪಸಾದರು.

Read more Photos on
click me!

Recommended Stories