ಮಂಗಳೂರು ಹುಡುಗನ ಜೊತೆ ಸಪ್ತಪದಿ ತುಳಿದ ‘Shake it Pushpavathi’ ಗಾಯಕಿ ಐಶ್ವರ್ಯ ರಂಗರಾಜನ್

Published : Nov 03, 2025, 01:44 PM IST

ಸರಿಗಮಪ ಮೂಲಕ ಕನ್ನಡಿಗರಿಗೆ ಪರಿಚಿತರಾಗಿ, ಶೇಕ್ ಇಟ್ ಪುಷ್ಪವತಿ, ಮೀಟ್ ಮಾಡೋಣ ಇಲ್ಲ ಡೇಟ್ ಮಾಡೋಣ ಮೊದಲಾದ ಸಖತ್ ಕಿಕ್ ಕೊಡುವ ಹಾಡುಗಳ ಮೂಲಕ ಚಂದನವನದ ಹಿನ್ನೆಲೆ ಗಾಯಕಿಯಾಗಿ ಮಿಂಚುತ್ತಿರುವ ಗಾಯಕಿ ಐಶ್ವರ್ಯ ರಂಗರಾಜನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

PREV
16
ಐಶ್ವರ್ಯ ರಂಗರಾಜನ್

ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಮೂಲಕ ಜನರಿಗೆ ಪರಿಚಯವಾದ ಗಾಯಕಿ ಐಶ್ವರ್ಯ ರಂಗರಾಜನ್. ಸರಿಗಮ ವಿನ್ ಆಗದಿದ್ದರೂ ತಮ್ಮ ಹಾಡಿನ ಮೂಲಕ ಚಂದನವನದಲ್ಲಿ ಮೋಡಿ ಮಾಡಿದ್ದರು. ಇದೀಗ ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಸುದ್ದಿಯಲ್ಲಿದ್ದಾರೆ.

26
ವೈವಾಹಿಕ ಜೀವನಕ್ಕೆ ಕಾಲಿಟ್ಟ ಐಶ್ವರ್ಯ

ಚಂದನವನದಲ್ಲಿ ಸೂಪರ್ ಹಿಟ್ ಹಾಡುಗಳನ್ನು ನೀಡುವ ಮೂಲಕ ಜನಪ್ರಿಯತೆಯನ್ನು ಗಳಿಸಿರುವ ಐಶ್ವರ್ಯ ರಂಗರಾಜನ್ ಇದೀಗ ತಮ್ಮ ಬಹುಕಾಲದ ಗೆಳೆಯ, ಪ್ರೀತಿಸಿದ ಹುಡುಗ ಸಾಯಿ ಸ್ವರೂಪ್ ಜೊತೆ ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

36
ಮಾರ್ಚ್ ತಿಂಗಳಲ್ಲಿ ನಿಶ್ವಿತಾರ್ಥ

ಐಶ್ವರ್ಯ ರಂಗರಾಜನ್ ಅವರು ಇದೆ ವರ್ಷ ಮಾರ್ಚ್ ತಿಂಗಳಲ್ಲಿ ಸಿಂಪಲ್ ಆಗಿ ಮನೆಯಲ್ಲಿಯೇ ಗುರುಹಿರಿಯರ ಸಮ್ಮುಖದಲ್ಲಿ ತಾವು ಪ್ರೀತಿಸಿದ ಹುಡುಗ ಸಾಯಿ ಸ್ವರೂಪ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಕುರಿತಂತೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಗಾಯಕಿ 'ಎಂಗೇಜ್ಡ್‌. ನಾವು ಪರ್ಫೆಕ್ಟ್‌ ಫಿಚ್‌ ಹುಡುಕಿಕೊಂಡಿದ್ದೇನೆ. ಇನ್ನು ಮುಂದೆ ಬೆಂಗಳೂರಿನಿಂದ ಮಂಗಳೂರು ಅಪ್‌ ಆಂಡ್‌ ಡೌನ್' ಎಂದು ಐಶ್ವರ್ಯ ಬರೆದುಕೊಂಡಿದ್ದಾರೆ.

46
ಸದ್ದಿಲ್ಲದ ಮದುವೆ ಮಾಡಿಕೊಂಡ ಗಾಯಕಿ

ಐಶ್ವರ್ಯ ತಮ್ಮ ನಿಶ್ಚಿತಾರ್ಥದ ಕುರಿತಾಗಲಿ ಅಥವಾ ಮದುವೆ ಕುರಿತಾಗಲಿ ಎಲ್ಲಿಯೂ ಮಾಹಿತಿ ನೀಡಿರಲಿಲ್ಲ. ಇದೀಗ ಐಶ್ವರ್ಯ ಮದುವೆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಮದುವೆ ಯಾವಾಗ? ಎಲ್ಲಿ ನಡೆಯಿತು ಎನ್ನುವ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ.

56
ಆಲ್ಬಂ ಹಾಡು ರಿಲೀಸ್

ಕೆಲದಿನಗಳ ಹಿಂದೆಯಷ್ಟೇ ಐಶ್ವರ್ಯ ತಮ್ಮ ಹೊಸ ಆಲ್ಬಂ ಹಾಡು ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಿದ್ದರು. ನಿನಗೆಂದೇ ಎನ್ನುವ ಟೈಟಲ್ ಹೊಂದಿರುವ ಆಲ್ಬಂ ಹಾಡಿನಲ್ಲಿ ಐಶ್ವರ್ಯ ತಮ್ಮ ಫಿಯಾನ್ಸಿ ಜೊತೆ ಸ್ಕ್ರೀನ್ ಶೇರ್ ಮಾಡಿದ್ದರು. ನ್ಯೂ ಸಿಂಗಲ್ ಅಲರ್ಟ್ ಎನ್ನುತ್ತಾ ಐಶ್ವರ್ಯ ಆಲ್ಬಂ ಬಿಡುಗಡೆ ಮಾಡಿದ್ದು, ಅಭಿಮಾನಿಗಳು ಈ ಜೋಡಿಗೆ ಪ್ರೀತಿಯ ಮಳೆ ಸುರಿದಿದ್ದರು.

66
ಐಶ್ವರ್ಯ ಹಾಡಿರುವ ಸೂಪರ್ ಹಿಟ್ ಹಾಡುಗಳು

ಹಿನ್ನೆಲೆ ಗಾಯಕಿಯಾಗಿ ಹಲವಾರು ಪ್ರಶಸ್ತಿಗಳನ್ನು,ದೇಶ ವಿದೇಶಗಳಲ್ಲಿ ಸಂಗೀತ ಸುಧೆಯನ್ನು ಹರಿಸಿರುವ ಐಶ್ವರ್ಯ ರಂಗರಾಜನ್ ನಟ ದರ್ಶನ್ ನಟನೆಯ ಕ್ರಾಂತಿ ಸಿನಿಮಾದಲ್ಲಿ 'ಶೇಕ್ ಇಟ್ ಪುಸ್ಪವತಿ' ಹಾಡನ್ನು ಹಾಡಿದ್ದರು, ಇದು ಸಿಕ್ಕಾಪಟ್ಟೆ ಹಿಟ್ ಆಗಿದ್ದು, ಇದಲ್ಲದೇ ಮೀಟ್ ಮಾಡೋಣ ಇಲ್ಲ ಡೇಟ್ ಮಾಡೋಣ, ನಮಾಮಿ ನಮಾಮಿ, ಮಳೆಯೇ ಮಳೆಯೇ, ಟ್ರೋಲ್ ಆಗುತ್ತೆ ಸೇರಿ 25ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.

Read more Photos on
click me!

Recommended Stories