Yash Toxic Teaser ನೋಡಿ ರಾಧಿಕಾ ಪಂಡಿತ್‌ ಪಕ್ಕಾ ಹೀಗೆ ಹೇಳ್ತಾರೆ; ಮಾಹಿತಿ ಕೊಟ್ಟ ವೀಕ್ಷಕರು!

Published : Jan 08, 2026, 11:44 AM IST

Rocking Star Yash ನಟನೆಯ ಟಾಕ್ಸಿಕ್‌ ಸಿನಿಮಾ ಟೀಸರ್‌ ರಿಲೀಸ್‌ ಆಗಿದೆ. ಜನ್ಮದಿನದಂದು ಯಶ್‌ ಅವರು ರಾಯ ಆಗಿ ಕಾಣಿಸಿಕೊಂಡ ಲುಕ್‌ ಅನೇಕರಿಗೆ ಇಷ್ಟ ಆಗಿದೆ. ಯುಟ್ಯೂಬ್‌ನಲ್ಲಿ ರಿಲೀಸ್‌ ಆದ ಒಂದು ಗಂಟೆಗೆ ಒಂದು ಮಿಲಿಯನ್‌ ವೀಕ್ಷಣೆ ಕಂಡಿದೆ. ಹಾಗಾದರೆ ಈ ಸಿನಿಮಾದ ಟೀಸರ್‌ ನೋಡಿದವರು ಏನು ಹೇಳಿದರು?

PREV
15
ವೀಕ್ಷಕರು ಏನು ಹೇಳಿದರು?

ಯಶ್‌ ಅವರು Naughty ಆಗಿದ್ದಾರೆ. ಆ ಹಸಿಬಿಸಿ ದೃಶ್ಯಗಳನ್ನು ನಾವು ನಿರೀಕ್ಷೆಯೇ ಮಾಡಿರಲಿಲ್ಲ. ಈ ದೃಶ್ಯಗಳಿಂದಾಗಿ ನಾವು ಸ್ಟೇಟಸ್‌ ಹಾಕೋಕೆ ಆಗ್ತಿಲ್ಲ. ಇನ್ನೂ ಕೆಲವರು ಆ ದೃಶ್ಯವನ್ನು ಸಾಕಷ್ಟು ಬಾರಿ ನೋಡಿರುವುದಾಗಿಯೂ ಕಾಮೆಂಟ್‌ ಮಾಡಿದ್ದಾರೆ. ನನಗೆ ಆನಿಮಲ್‌ ಸಿನಿಮಾದ ರಣಬೀರ್‌ ಕಪೂರ್‌ ಅವರನ್ನು ನೋಡಿದ ಹಾಗೆ ಆಯ್ತು. ಯಶ್‌ ಅವರಿಂದ ಇದನ್ನೆಲ್ಲ ನಿರೀಕ್ಷೆಯೇ ಮಾಡಿರಲಿಲ್ಲ, ಶಾಕ್‌ ಆಯ್ತು.

25
ಯಶ್‌ ಸಿನಿಮಾ ಡೈಲಾಗ್‌ ಸತ್ಯವಾಯ್ತು

ಶ್ರಾವಣ ಮುಗಿದ್ಮೇಲೆ ನನ್‌ ಮಗ ಟಾಪ್‌ನಲ್ಲಿ ಬರ್ತಾನೆ. ನಾನು ಬರೋವರೆಗೂ ಮಾತ್ರ ಬೇರೆಯವರ ಹವಾ, ನಾನ್‌ ಬಂದ್ಮೇಲೆ ನಂದೇ ಹವಾ ಎಂದು ಯಶ್‌ ಅವರ ಈ ಹಿಂದಿನ ಸಿನಿಮಾ ಡೈಲಾಗ್‌ಗಳನ್ನು ಹೇಳಿದ್ದಾರೆ.

35
ಸೀರಿಯಸ್‌ ಆಗಿ ತಗೊಂಡಿರುವ ಯಶ್

ಐ ಡೋಂಟ್‌ ಲೈಕ್‌ ವಯಲೆನ್ಸ್‌, ಬಟ್‌ ವಯಲೈನ್ಸ್‌ ಲೈಕ್ಸ್‌ ಮೀ ಎಂಬ ಡೈಲಾಗ್‌ನ್ನು ಯಶ್‌ ಅವರು ಬಹಳ ಸೀರಿಯಸ್‌ ಆಗಿ ತಗೊಂಡ ಹಾಗಿದೆ.

45
ರಾಧಿಕಾ ಪಂಡಿತ್‌ ಏನಂದ್ರು?

ಈ ಸಿನಿಮಾದಲ್ಲಿ ಹಸಿಬಿಸಿ ದೃಶ್ಯಗಳು ಸಿಕ್ಕಾಪಟ್ಟೆ ಇವೆ. ಹೀಗಾಗಿ ರಾಧಿಕಾ ಪಂಡಿತ್‌ ಅವರು ಮನಸ್ಸಿನಲ್ಲಿ, “ಮನೆಗೆ ಬಾ..ಇದೆ” ಎಂದು ಅಂದುಕೊಂಡಿರುತ್ತಾರೆ.

55
ಡೈಲಾಗ್‌ ಸೂಪರ್‌ ಆಗಿದೆ

Daddy s home ಎನ್ನುವ ಡೈಲಾಗ್‌ ಸಖತ್‌ ಆಗಿದೆ. ನಿಜಕ್ಕೂ ಫೇರಿಟೈಲ್‌ ಥರ ಸಿನಿಮಾವಿದೆ. ಹಾಲಿವುಡ್‌ ರೇಂಜ್‌ಗೆ ಸಿನಿಮಾವಿದೆ. ಟಾಕ್ಸಿಕ್‌ ಸಿನಿಮಾ ಟೀಸರ್‌ ನೋಡಲು ಬಂದು, ಹಾಲಿವುಡ್‌ ಟೀಸರ್‌ ನೋಡಿದ ಹಾಗೆ ಆಯ್ತು. ಈ ಸಿನಿಮಾದ ಛಾಯಾಗ್ರಹಣ ಸಖತ್‌ ಆಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories