Kantara Chapter 1 ಸೆಟ್​ನಲ್ಲಿ ನಾಲ್ಕೈದು ಸಲ ನಾನು ಸತ್ತೇ ಹೋಗ್ವೇಕಿತ್ತು... ನಟ ರಿಷಬ್​ ಶೆಟ್ಟಿ ಭಾವುಕ

Published : Sep 23, 2025, 11:14 AM IST

'ಕಾಂತಾರ ಅಧ್ಯಾಯ 1'ರ ಟ್ರೈಲರ್ ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿದೆ. ಈ ಸಂದರ್ಭದಲ್ಲಿ ಮಾತನಾಡಿದ ನಟ ರಿಷಬ್ ಶೆಟ್ಟಿ, ಚಿತ್ರೀಕರಣದ ಸವಾಲುಗಳು, ದೈವದ ಕೃಪೆಯ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ. ಜೊತೆಗೆ, ಸಿನಿಮಾ ವೀಕ್ಷಣೆಗೆ ಸಂಬಂಧಿಸಿದ ಪೋಸ್ಟ್ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ.

PREV
17
ಹವಾ ಸೃಷ್ಟಿಸ್ತಿರೋ ಕಾಂತಾರ ಅಧ್ಯಾಯ 1

ಚಿಕ್ಕ ಬಜೆಟ್​ನ ಸಿನಿಮಾ ಕೂಡ ಪ್ಯಾನ್​ ಇಂಡಿಯಾ ಮಟ್ಟಕ್ಕೆ ಹೋಗಬಹುದು ಎಂದು ತೋರಿಸಿಕೊಟ್ಟದ್ದು ಕಾಂತಾರಾ ಚಿತ್ರ. ಇದೀಗ ಅದರ ಬಹುನಿರೀಕ್ಷಿತ ಪ್ರೀಕ್ವೆಲ್ 'ಕಾಂತಾರ ಅಧ್ಯಾಯ 1' (Kantara Chapter 1 trailer) ಟ್ರೇಲರ್ ನಿನ್ನೆ (ಸೆಪ್ಟೆಂಬರ್ 22) ಬಿಡುಗಡೆಯಾಗಿದೆ. 2.56 ನಿಮಿಷದ ಈ ಟ್ರೈಲರ್​ ಬಿಡುಗಡೆಯಾಗಿದ್ದು, ಬಾಹುಬಲಿ ಸಿನಿಮಾದ ಸೆಟ್‌ನಂತೆ ಧಾರ್ಮಿಕ ಹಿನ್ನೆಲೆಯನ್ನೂ ಹೊಂದಿರುವುದು ಕಂಡುಬರುತ್ತದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರದ ಟ್ರೈಲರ್​ ಆರ್ಭಟ ಜೋರಾಗಿಯೇ ನಡೆದಿದೆ. ಎಲ್ಲಾ ಭಾಷೆಗಳಲ್ಲಿ ಸೇರಿ ಟ್ರೈಲರ್ 5.5 ಕೋಟಿಗೂ ಅಧಿಕ ವೀವ್ಸ್ ಕಂಡಿದೆ.

27
ನಾಲ್ಕೈದು ಸಲ ಹೋಗಿಯೇ ಬಿಡ್ತಿದ್ದೆ

ಈ ಸಂದರ್ಭದಲ್ಲಿ ಮಾತನಾಡಿದ ರಿಷಬ್ ಶೆಟ್ಟಿ ಅವರು ಹಲವು ವಿಷಯಗಳನ್ನು ಹೇಳಿದ್ದಾರೆ. ‘ಕಾಂತಾರ (Kantara Prequel) ಸೆಟ್​ನಲ್ಲಿ ಹಾಗಾಯ್ತು, ಹೀಗಾಯ್ತು ಅಂತ ಮಾಧ್ಯಮಗಳಲ್ಲಿ ಸುದ್ದಿ ಬರುತ್ತಿತ್ತು. ಲೆಕ್ಕ ಹಾಕಿದರೆ ನಾಲ್ಕು ಅಥವಾ ಐದು ಸಲ ನಾನು ಹೋಗಿಯೇ ಬಿಡುತ್ತಿದ್ದೆ. ಆದರೆ ನಾನು ಇಂದು ಬದುಕಿ ಬಂದು ನಿಮ್ಮ ಮುಂದೆ ನಿಂತಿದ್ದೇನೆ. ಅದಕ್ಕೆ ನಮ್ಮ ಹಿಂದಿರುವ ದೈವ ಕಾರಣ ಎಂಬುದು ನನ್ನ ನಂಬಿಕೆ. ಇಡೀ ತಂಡದ ಪ್ರತಿಯೊಬ್ಬರಿಗೆ ದೈವ ಆಶೀರ್ವಾದ ಮಾಡಿದೆ’ ಎಂದಿದ್ದಾರೆ. ಕಾಂತಾರದ ಸಂದರ್ಭದಲ್ಲಿ ಕೆಲವು ನಟರು ಕಾಕತಾಳೀಯ ಎಂಬಂತೆ ಸಾವನ್ನಪ್ಪಿದ್ದಾರೆ. ಅದನ್ನು ಉದ್ದೇಶಿಸಿ ನಟ (Rishab Shetty) ಈ ಮಾತನ್ನು ಹೇಳಿ ಎಮೋಷನಲ್ ಆದರು.

37
ಪೋಸ್ಟರ್​ ಬಗ್ಗೆ ಹೇಳಿದ ನಟ

ಇದೇ ವೇಳೆ ಅವರು, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದು ಸದ್ದು ಮಾಡ್ತಿರೋ ಪೋಸ್ಟರ್​ ಬಗ್ಗೆನೂ ಮಾತನಾಡಿದರು. 'ಮದ್ಯಪಾನ, ಧೂಮಪಾನ ಮಾಡಬಾರದು ಹಾಗೂ ಮಾಂಸಾಹಾರ ಸೇವಿಸದೇ ಬಂದು 'ಕಾಂತಾರ- 1' ಸಿನಿಮಾ ನೋಡುವ ಸಂಕಲ್ಪ ಮಾಡಿಕೊಳ್ಳೋಣ' ಎಂದು ಅದರಲ್ಲಿ ಬರೆಯಲಾಗಿತ್ತು. ತಪ್ಪಿನ ಅರಿವಾಗುತ್ತಿದ್ದಂತೆ ಅದಕ್ಕೆ ಕ್ಷಮೆ ಕೇಳಿ ಅದೇ ಪೇಜ್‌ನಲ್ಲಿ ಸ್ಪಷ್ಟನೆ ನೀಡಿದ್ದರು. ಈ ಬಗ್ಗೆ ಹೇಳಿದ ರಿಷಬ್​ ಶೆಟ್ಟಿ ಆ ಪೋಸ್ಟ್‌ಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

47
ಊಟೋಪಚಾರದ ಸ್ಪಷ್ಟನೆ

'ಕಾಂತಾರ ಪರ್ವ' ಹೆಸರು ಟ್ವಿಟ್ಟರ್ ಪೇಜ್‌ನಲ್ಲಿ ಇದನ್ನು ಪೋಸ್ಟ್​ ಮಾಡಲಾಗಿತ್ತು. ಇದರ ಬಗ್ಗೆ ಹೇಳಿದ ನಟ, "ಊಟೋಪಚಾರ ಹಾಗೂ ಅವರವರ ಅಭ್ಯಾಸಗಳನ್ನು ಯಾರು ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಎಲ್ಲವೂ ಅವರವರ ಸ್ವಂತ ವಿವೇಚನೆಗೆ ಬಿಟ್ಟ ವಿಚಾರ. ಯಾರೋ ಫೇಕ್ ಪೋಸ್ಟ್ ಹಾಕಿರುವುದು ಅದು. ನಮ್ಮ ಗಮನಕ್ಕೂ ಬಂತು. ಆದರೆ ಅದನ್ನು ನಮ್ಮ ತಂಡಕ್ಕೂ ಯಾವುದೇ ಸಂಬಂಧ ಇಲ್ಲ" ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

57
ಐದು ವರ್ಷಗಳ ಜರ್ನಿ

ಕಾಂತಾರ ಸಿನಿಮಾ 5 ವರ್ಷದ ದೊಡ್ಡ ಜರ್ನಿ. ಈ ಸಿನಿಮಾ ಕಂಪ್ಲೀಟ್‌ ಮಾಡೋಕೆ ಆಗ್ತಿರಲಿಲ್ಲ, ಅಷ್ಟು ಅಡೆತಡೆಗಳು ಎದುರಿಸಿದ್ದೀನಿ. ನನ್ನ ಹೆಂಡ್ತಿ ಅದೆಷ್ಟು ಹರಕೆ ಹೊತ್ತಿದ್ದಾಳೋ.. ನಾನು ಶೂಟಿಂಗ್ ಹೋಗ್ತಿದ್ರೆ ದೇವರ ಮುಂದೆ ಪ್ರಾರ್ಥನೆ ಮಾಡ್ತಿದ್ಲು. ಇನ್ನೊಂದು ಸಲ ಹೇಗಿದ್ದೀರ ಅಂತ ಕೇಳಿದ್ರೆ ಅತ್ತೆ ಬಿಡ್ತೀನಿ, ಅಷ್ಟೊಂದು ಎಮೋಷನಲ್ ಜರ್ನಿ ಇದು ಎಂದು ಹೇಳಿದರು.

67
ವಿವಿಧ ಭಾಷೆಗಳಲ್ಲಿ ಟ್ರೈಲರ್​

ಹೃತಿಕ್ ರೋಷನ್, ಶಿವಕಾರ್ತಿಕೇಯನ್, ಪೃಥ್ವಿರಾಜ್ ಸುಕುಮಾರನ್, ಪ್ರಭಾಸ್ ಅವರಿಂದ, ವಿಶ್ವವೇ ಎದುರು ನೋಡುತ್ತಿರುವ ಕಾಂತಾರ ಚಾಪ್ಟರ್‌-1 ಚಿತ್ರದ ಕನ್ನಡ, ಹಿಂದಿ, ತಮಿಳು, ಮಲಯಾಳಂ ಹಾಗೂ ತೆಲುಗು ಭಾಷೆಯ ಟ್ರೈಲರ್ ಬಿಡುಗಡೆ ಆಗಿದೆ.

77
ಟ್ರೈಲರ್‌ನುದ್ದಕ್ಕೂ ದೃಶ್ಯ ವೈಭವ

ಇಡೀ ಟ್ರೈಲರ್‌ನುದ್ದಕ್ಕೂ ದೃಶ್ಯ ವೈಭವ ಕಾಣಬಹುದು. ರಾಜ ಮತ್ತು ಕಾಡಿನ ಜನರ ನಡುವಿನ ಕಥೆ ಹಾಗೂ ಕಾಂತಾರ ನೆಲದ ಮಣ್ಣಿಗೆ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲು ಹೊರಟಿರುವುದು ಪ್ರಮುಖ ಅಂಶ. ಅಂದಹಾಗೆ ಅಕ್ಟೋಬರ್​ 2ರಂದು ಈ ಚಿತ್ರ ಬಿಡುಗಡೆಗೊಳ್ಳಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories