ನೂರೊಂದು ನೆನಪು ಎದೆಯಾಳದಿಂದ... ಹಾಡಿಗೆ 'ಅಣ್ಣಯ್ಯ' ಶಿವು ದನಿಯಾದ್ರೆ ಹೀಗಿರತ್ತೆ ನೋಡಿ...

Published : Sep 22, 2025, 06:40 PM IST

'ಅಣ್ಣಯ್ಯ' ಸೀರಿಯಲ್ ಖ್ಯಾತಿಯ ನಟ ವಿಕಾಶ್ ಉತ್ತಯ್ಯ, ವಿಷ್ಣುವರ್ಧನ್ ಅವರ 'ನೂರೊಂದು ನೆನಪು' ಹಾಡಿಗೆ ಲಿಪ್‌ಸಿಂಕ್ ಮಾಡಿ ಗಮನ ಸೆಳೆದಿದ್ದಾರೆ. ಮೂಲತಃ ಕೊಡಗಿನವರಾದ ಇವರು, ವಕೀಲ ವೃತ್ತಿ ಬಿಟ್ಟು ನಟನೆಗೆ ಬಂದಿದ್ದು, 'ಅಪಾಯವಿದೆ ಎಚ್ಚರಿಕೆ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

PREV
17
ಬಂಧನ ಚಿತ್ರವನ್ನು ನೆನಪಿಸಿದ ಅಣ್ಣಯ್ಯ

ನೂರೊಂದು ನೆನಪು ಎದೆಯಾಳದಿಂದ... 1984ರಲ್ಲಿ ಬಿಡುಗಡೆಗೊಂಡ ನಟ ವಿಷ್ಣುವರ್ಧನ್​- ಸುಹಾಸಿನಿ ನಟನೆಯ ಬಂಧನ ಚಿತ್ರದ ಈ ಹಾಡು ಇಂದಿಗೂ ಹಚ್ಚ ಹಸಿರಾಗಿದೆ. ಭಗ್ನಪ್ರೇಮಿಗಳ ಕಣ್ಣಲ್ಲಿ ನೀರು ತರಿಸುವ ಈ ಹಾಡನ್ನು ಇಂದಿಗೂ ಅದೆಷ್ಟೋ ಮಂದಿ ಗುನುಗುನಿಸುತ್ತಲೇ ಇದ್ದಾರೆ. ಮೊನ್ನೆ ತಾನೇ, ಅಂದರೆ ಇದೇ ಸೆಪ್ಟೆಂಬರ್​ 18ರಂದು ಅವರ 75ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು. ಇದೇ ಸಂದರ್ಭದಲ್ಲಿ ಅವರಿಗೆ ಕರ್ನಾಟಕ ಸರ್ಕಾರ 'ಕರ್ನಾಟಕ ರತ್ನ' ಎಂದು ಘೋಷಿಸುವ ಮೂಲಕ ವಿಶೇಷ ರೀತಿಯಲ್ಲಿ ಗೌರವವನ್ನೂ ಸಲ್ಲಿಸಿದೆ. ಈ ದಿನದಂದು ಅವರ ಹಲವು ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ನಟನನ್ನು ನೆನಪಿಸಿಕೊಂಡಿದ್ದಾರೆ.

27
ನೂರೊಂದು ನೆನಪು... ಹಾಡಿಗೆ ಲಿಪ್​ಸಿಂಕ್​

ಅಣ್ಣಯ್ಯ ಸೀರಿಯಲ್​ ಖ್ಯಾತಿಯ ಶಿವು ಅರ್ಥಾತ್​ ಅವರು, ವಿಕಾಶ್​ ಉತ್ತಯ್ಯ (Vikash Uthaiah) ಅವರು ಈ ಹಾಡಿಗೆ ಲಿಪ್​ಸಿಂಕ್​ ಮಾಡಿದ್ದು, ತಮ್ಮ ಭಾವನೆಯ ಮೂಲಕವೇ ಹಾಡಿಗೆ ಅರ್ಥ ಕಲ್ಪಿಸಿದ್ದಾರೆ. ಇದನ್ನು ನೋಡಿ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಣ್ಣಿನಲ್ಲಿಯೇ ನೂರೊಂದು ನೆನಪು ಹಾಡಿನ ಅರ್ಥ ಹೇಳಿದ್ರಿ ಎಂದು ಭೇಷ್​ ಭೇಷ್​ ಎನ್ನುತ್ತಿದ್ದಾರೆ. ಅಷ್ಟಕ್ಕೂ ವಿಕಾಶ್​ ಅವರು ವಿಷ್ಣುವರ್ಧನ್​ ಅವರ 75ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರನ್ನು ನೆನಪಿಸಿಕೊಂಡು ಈ ಹಾಡನ್ನು ಹಾಡಿದ್ದಾರೆ.

37
ಕೊಡಗಿನ ನಟ ವಿಷ್ಣುವರ್ಧನ್​ ಅಭಿಮಾನಿ

ಇನ್ನು ನಟ ವಿಕಾಶ್ ಉತ್ತಯ್ಯ ಅವರ ಕುರಿತು ಹೇಳುವುದಾದರೆ, ಅವರ ಅಪಾಯವಿದೆ ಎಚ್ಚರಿಕೆ ಕಳೆದ ಫೆಬ್ರುವರಿಯಲ್ಲಿ ರಿಲೀಸ್​ ಆಗಿದೆ. ಇನ್ನು ಮೂಲತಃ ಕೊಡಗಿನವರಾಗಿರುವ ವಿಕಾಶ್‌ ಉತ್ತಯ್ಯ ಅವರು ಬಣ್ಣದ ಲೋಕಕ್ಕೆ ಕಾಲಿಡುವ ಮುನ್ನ ವಕೀಲರಾಗಿ ಕೆಲಸ ಮಾಡುತ್ತಿದ್ದರು. ನಟನೆ ಮೇಲಿನ ಆಸಕ್ತಿಯಿಂದ ಕೆಲಸ ಬಿಟ್ಟು ನಟರಾಗಿದ್ದಾರೆ. ವಿಷ್ಣುವರ್ಧನ್​ ಅವರ ಫ್ಯಾನ್​ ಕೂಡ.

47
ಸಿನಿಮಾದಲ್ಲಿಯೂ ಅಭಿನಯ

ವಿಕಾಶ್ ಉತ್ತಯ್ಯ ಅವರು ಸೀರಿಯಲ್ ಗೆ ಬರುವ ಮುನ್ನ ಕೆಲ ಸಿನಿಮಾಗಳಲ್ಲಿ ಅಭಿನಯಿದ್ದಾರೆ. ಈ ಹಿಂದೆ ಮೇರಿ ಎಂಬ ಸಿನಿಮಾದಲ್ಲಿ ನಟಿಸಿದ್ದ ಇವರು, ಇತ್ತೀಚೆಗೆ 2023ರಲ್ಲಿ ದ್ವಂದ್ವ ದ್ವಯಂ, ಆನೆ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಅಲ್ಲದೇ, ಕನಸಿನ ಮಳೆಯಾದವರು ಎಂಬ ಶಾರ್ಟ್ ಫಿಲ್ಮನಲ್ಲೂ ನಟಿಸಿದ್ದಾರೆ.

57
ಲವ್​ ಬಗ್ಗೆ ಹೇಳಿದ್ದ ವಿಕಾಶ್​

ಈಚೆಗೆ ಅವರು ತಮ್ಮ ಜೀವನದ ಕೆಲವು ವಿಷಯಗಳ ಬಗ್ಗೆ ಮಾತನಾಡಿದ್ದರು. ವಿಕಾಶ್​ ಅವರು, ಕೆಲ ದಿನಗಳ ಹಿಂದೆ ನಾನು ಲವ್​ನಲ್ಲಿ ಬಿದ್ದಿದ್ದೇನೆ, ಅವಳಿಗೆ ಹೇಳುವ ಮುನ್ನ ನಿಮಗೆ ಹೇಳುತ್ತೇನೆ ಎಂದು ವಿಡಿಯೋ ಹರಿಬಿಟ್ಟು ಅಭಿಮಾನಿಗಳ ತಲೆಗೆ ಹುಳು ಬಿಟ್ಟಿದ್ದರು. ಆದರೆ ಸೋಷಿಯಲ್​ ಮೀಡಿಯಾದಲ್ಲಿ ಆ ಹೆಸರನ್ನು ಕಲ್ಪನೆ ಮಾಡಿಕೊಂಡು ವಿಡಿಯೋಗಳೆಲ್ಲಾ ಹರಿದಾಡಿಬಿಟ್ಟಿದ್ದವು. ಆ ಹುಡುಗಿ ಇವಳೇ ಇರಬೇಕು ಎಂದು ಯಾರದ್ಯಾರದ್ದೋ ಫೋಟೋ ಹಾಕಿಬಿಟ್ಟಿದ್ದರು. ಇದರಿಂದ ನಟ ಕೈಲಾಶ್​ ಫುಲ್ ಸುಸ್ತಾಗಿ ಹೋದ್ರಂತೆ. ಕೊನೆಗೆ ಅವರು, ನನಗೆ ಲವ್​ ಆಗಿರೋದು ಅಪಾಯವಿದೆ ಎಚ್ಚರಿಕೆ ಮೇಲೆ ಎಂದಿದ್ದರು.

ಇದನ್ನೂ ಓದಿ: ಈ ಪುಟಾಣಿಯೇ ನಿಮ್ಮನೆಗೆ ಪ್ರತಿದಿನ ಬರ್ತಿರೋ 'ಅಣ್ಣಯ್ಯ' ಪಾರು! ಆ್ಯಂಕರಿಂಗ್​ ನೋಡಿ ಫ್ಯಾನ್ಸ್​ ಫಿದಾ...

67
ಕೊಡಗಿನ ವಿಕಾಶ್​

ಕೊಡಗಿನವರಾಗಿರುವ ವಿಕಾಶ್‌, ವಕೀಲರಾಗಿ ಕೆಲಸ ಮಾಡುತ್ತಿದ್ದರು. ನಟನೆ ಮೇಲಿನ ಆಸಕ್ತಿಯಿಂದ ಬಣ್ಣದ ಲೋಕ ಆರಿಸಿಕೊಂಡಿದ್ದಾರೆ. ಇದಾಗಲೇ ಕೆಲವು ಸೀರಿಯಲ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೇರಿ ಎಂಬ ಸಿನಿಮಾದಲ್ಲಿಯೂ ನಟಿಸಿದ್ದರು. 2023ರಲ್ಲಿ ದ್ವಂದ್ವ ದ್ವಯಂ, ಆನೆ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿರುವ ಇವರು, ಕನಸಿನ ಮಳೆಯಾದವರು ಎಂಬ ಶಾರ್ಟ್ ಫಿಲ್ಮನಲ್ಲೂ ನಟಿಸಿದ್ದಾರೆ.

77
ರಾಧಾ ಭಗವತಿ ಜೊತೆ ನಟನೆ

ಅಪಾಯವಿದೆ ಎಚ್ಚರಿಕೆಯಲ್ಲಿ ವಿಕಾಶ್‌ ಜೊತೆಯಾಗಿ ಅಮೃತಧಾರೆಯ ಮಲ್ಲಿ ಅಂದ್ರೆ ನಟಿ ರಾಧಾ ಭಾಗವತಿ ಅವರು ಕಾಣಿಸಿಕೊಂಡಿದ್ದಾರೆ. ಅಭಿಜಿತ್ ತೀರ್ಥಹಳ್ಳಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಮಂಜುನಾಥ್ ವಿ ಜಿ ಹಾಗೂ ಪೂರ್ಣಿಮಾ ಗೌಡ ಅವರು ಹಣ ಹೂಡಿದ್ದಾರೆ. ಸುನಾದ್ ಗೌತಮ್ ಅವರ ಸಂಗೀತ ಈ ಚಿತ್ರಕ್ಕಿದೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದೆ.

Read more Photos on
click me!

Recommended Stories