ಅಮ್ಮನ ಸ್ಮರಣಾರ್ಥ ಮಠಕ್ಕೆ ಕಾರು ಕಾಣಿಕೆ ನೀಡಿದ ನಟ ವಿನೋದ್ ರಾಜ್!

Published : Sep 22, 2025, 04:04 PM IST

ನಟ ವಿನೋದ್ ರಾಜ್ ಅವರು ತಮ್ಮ ತಾಯಿ, ಖ್ಯಾತ ನಟಿ ಡಾ. ಎಂ. ಲೀಲಾವತಿ ಅವರ ಸ್ಮರಣಾರ್ಥವಾಗಿ ಬಾಗಲಕೋಟೆಯ ಬನಹಟ್ಟಿಯ ಮಹಾಂತ ಮಂದಾರ ಮಠಕ್ಕೆ ಕಾರೊಂದನ್ನು ದಾನ ಮಾಡಿದ್ದಾರೆ. ಇದನ್ನು ಮಕ್ಕಳಿಗೆ ದಾಸೋಹಕ್ಕೆ ಬಳಸುವುದಕ್ಕೆ ಮನವಿ ಮಾಡಿದ್ದಾರೆ.

PREV
15

ಬೆಂಗಳೂರು (ಸೆ.22): ಖ್ಯಾತ ನಟಿ ಡಾ. ಎಂ. ಲೀಲಾವತಿ ಪುತ್ರ ಹಾಗೂ ನಟ ವಿನೋದ್ ರಾಜ್ ಅವರು, ತಮ್ಮ ತಾಯಿಯ ಸ್ಮರಣಾರ್ಥ ಬಾಗಲಕೋಟೆಯ ಬನಹಟ್ಟಿಯ ಮಹಾಂತ ಮಂದಾರ ಮಠಕ್ಕೆ ಕಾರೊಂದನ್ನು ಕಾಣಿಕೆಯಾಗಿ ನೀಡಿದ್ದಾರೆ. 

25

ವಾಹನ ಹಸ್ತಾಂತರ ಮಾಡಿದ ವಿನೋದ್ ರಾಜ್: 

ನಟ ವಿನೋದ್ ರಾಜ್ ಅವರು ನೆಲಮಂಗಲ ತಾಲ್ಲೂಕಿನ ಸೋಲದೇವನಹಳ್ಳಿಯಲ್ಲಿರುವ ತಮ್ಮ ತೋಟದಲ್ಲಿ ಈ ವಾಹನವನ್ನು ಮಹಾಂತ ಮಂದಾರ ಮಠದ ಪೂಜ್ಯ ಶ್ರೀ ಮಹಾಂತ ದೇವರು ಸ್ವಾಮೀಜಿ ಅವರಿಗೆ ಹಸ್ತಾಂತರಿಸಿದರು.

35

ದಾಸೋಹಕ್ಕೆ ಪದಾರ್ಥಗಳ ಸಾಗಣೆಗೆ ಅನುಕೂಲ: 

ಈ ಕಾರು ಮಠದಲ್ಲಿ ನಡೆಯುವ ಮಕ್ಕಳ ದಾಸೋಹಕ್ಕೆ ಅಗತ್ಯವಾದ ಆಹಾರ ಪದಾರ್ಥಗಳ ಸಂಗ್ರಹ ಮತ್ತು ಸಾಗಾಣಿಕೆಗೆ ಸಹಕಾರಿಯಾಗಲಿದೆ. ಮಠಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ತಾಯಿಯ ಹೆಸರಿನಲ್ಲಿ ಈ ಸೇವೆ ಸಲ್ಲಿಸಿರುವುದಾಗಿ ವಿನೋದ್ ರಾಜ್ ತಿಳಿಸಿದ್ದಾರೆ.

45

ಈ ಸಂದರ್ಭದಲ್ಲಿ, ನೂತನ ವಾಹನಕ್ಕೆ ಸಾಂಪ್ರದಾಯಿಕವಾಗಿ ದೃಷ್ಟಿ ತೆಗೆದು ನಿಂಬೆಹಣ್ಣು ಹೊಡೆದು, ವಿನೋದ್ ರಾಜ್ ಅವರೇ ಕಾರು ಚಾಲನೆ ಮಾಡಿದರು. ಈ ಮೂಲಕ ಅವರು ತಮ್ಮ ಧಾರ್ಮಿಕ ಮತ್ತು ಸಾಮಾಜಿಕ ಕಳಕಳಿಯನ್ನು ಪ್ರದರ್ಶಿಸಿದ್ದಾರೆ. 

ಮಠದ ಮಕ್ಕಳ ಅನ್ನದಾಸೋಹ ಸೇವೆಯಲ್ಲಿ ಈ ವಾಹನವು ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.

55

ನಟ ವಿನೋದ್ ರಾಜ್ ಅವರ ಈ ಸಮಾಜಮುಖಿ ಕಾರ್ಯಕ್ಕೆ ಹಲವು ಗಣ್ಯರು ಹಾಗೂ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಉಡುಗೊರೆ ಕೇವಲ ವಾಹನವಲ್ಲ, ಅದು ಡಾ. ಎಂ. ಲೀಲಾವತಿ ಅವರ ಸೇವಾ ಮನೋಭಾವದ ಮುಂದುವರಿಕೆ ಎಂದು ಭಾವಿಸಲಾಗಿದೆ.

Read more Photos on
click me!

Recommended Stories