ಮಕ್ಕಳ ಜೊತೆ ಸಮ್ಮರ್ ವೆಕೇಶನ್ ಎಂಜಾಯ್ ಮಾಡ್ತಿದ್ದಾರೆ ರಾಧಿಕಾ ಪಂಡಿತ್… ಯಶ್ ಮಿಸ್ಸಿಂಗ್!
ಚಂದನವನದ ಸಿಂಡ್ರೆಲ್ಲಾ ರಾಧಿಕಾ ಪಂಡಿತ್, ತಮ್ಮ ತಾಯಿ ಹಾಗೂ ಮಕ್ಕಳೊಂದಿಗೆ ಬೀಚ್ ನಲ್ಲಿ ಸಮ್ಮರ್ ವೆಕೇಶನ್ ಎಂಜಾಯ್ ಮಾಡ್ತಿದ್ದಾರೆ. ಯಶ್ ಮಾತ್ರ ಮಿಸ್ ಆಗಿದ್ದಾರೆ.
ಚಂದನವನದ ಸಿಂಡ್ರೆಲ್ಲಾ ರಾಧಿಕಾ ಪಂಡಿತ್, ತಮ್ಮ ತಾಯಿ ಹಾಗೂ ಮಕ್ಕಳೊಂದಿಗೆ ಬೀಚ್ ನಲ್ಲಿ ಸಮ್ಮರ್ ವೆಕೇಶನ್ ಎಂಜಾಯ್ ಮಾಡ್ತಿದ್ದಾರೆ. ಯಶ್ ಮಾತ್ರ ಮಿಸ್ ಆಗಿದ್ದಾರೆ.
ಚಂದನವನದ ಸಿಂಡ್ರೆಲ್ಲಾ ಅಂತಾನೆ ಕರೆಯಿಸಿಕೊಳ್ಳುವ ಚೆಲುವೆ ರಾಧಿಕಾ ಪಂಡಿತ್ (Radhika Pandit), ಸದ್ಯ ತಮ್ಮ ಫ್ಯಾಮಿಲಿ ಜೊತೆ ಬೀಚ್ ನಲ್ಲಿ ಎಂಜಾಯ್ ಮಾಡುತ್ತಿದ್ದು, ಮುದ್ದಾದ ವಿಡಿಯೋ ಒಂದನ್ನು ಸೋಶಿಯಲ್ ಮೀಡೀಯಾದಲ್ಲಿ ಶೇರ್ ಮಾಡಿದ್ದಾರೆ.
ಹೇಳಿ ಕೇಳಿ ರಾಧಿಕಾ ಪಂಡಿತ್ ಬೀಚ್ ಪ್ರಿಯೆ. ಹಾಗಾಗಿ ಅವರ ಹೆಚ್ಚಿನ ವೆಕೇಶನ್ ಗಳು ಸಮುದ್ರ ತೀರದ ತಾಣಗಳೇ ಆ (beach vacation) ಗಿರುತ್ತವೆ. ಈ ಬಾರಿಯೂ ಬೇಸಿಗೆಯನ್ನು ಎಂಜಾಯ್ ಮಾಡಲು ಕಡಲ ತೀರಕ್ಕೆ ತೆರಳಿದ್ದಾರೆ ರಾಧಿಕಾ ಪಂಡಿತ್.
ಈಗಾಗಲೆ ಸಮ್ಮರ್ ಶುರುವಾಗಿದ್ದು, ಹಾಗಾಗಿ ಹಾಲಿಡೇಸ್ ಎಂಜಾಯ್ ಮಾಡಲು ರಾಧಿಕಾ ಪಂಡಿತ್ ತಮ್ಮ, ತಾಯಿ ಹಾಗೂ ಇಬ್ಬರು ಮಕ್ಕಳು, ಆಯ್ರ ಹಾಗೂ ಯಥರ್ವ ಜೊತೆ ಬೀಚ್ ವೆಕೇಶನ್ ಎಂಜಾಯ್ ಮಾಡ್ತಿದ್ದಾರೆ.
ರಾಧಿಕಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮುದ್ದಾದ ವಿಡಿಯೋ ಶೇರ್ ಮಾಡಿದ್ದು, ಮಕ್ಕಳು ನೀರಿನಲ್ಲಿ ಎಂಜಾಯ್ ಮಾಡುತ್ತಿರುವ, ಜೊತೆಯಾಗಿ ಬೋಟ್ ರೈಡ್ ಮಾಡುತ್ತಿರುವ, ಮಕ್ಕಳೊಂದಿಗೆ ತಾವು ಮಗುವಾಗಿ ಆಡುತ್ತಿರುವ ವಿಡೀಯೋ ಇದರಲ್ಲಿದೆ.
ಮಗಳು ಆಯ್ರ ನೀರಿನಲ್ಲಿ ಈಜುತ್ತಿರುವ ವಿಡೀಯೋ, ಅಮ್ಮ ಮಕ್ಕಳ ಜೊತೆ ಬೀಚ್ ನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೊ, ಮಗನ ಕೈಗೆ ಟ್ಯಾಟೂ ಪೈಂಟ್ ಮಾಡಿಸುತ್ತಿರುವ ವಿಡಿಯೋ, ಮಕ್ಕಳ ಮುದ್ದಾದ ರಿಯಾಕ್ಷನ್ ವೈರಲ್ ಆಗುತ್ತಿವೆ.
ರಾಧಿಕಾ ಪಂಡಿತ್ ಶೇರ್ ಮಾಡಿರುವ ವಿಡಿಯೋಗೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿದೆ, ಮೂರು ಜನರೇಶನ್ ಜೊತೆಯಾಗಿ ನೋಡಿ ಖುಷಿಯಾಯಿತು ಎಂದು ಹರ್ಷಿಕಾ ಪೂಣಚ್ಚ ಕಾಮೆಂಟ್ ಮಾಡಿದ್ದಾರೆ.
ನಟಿ ಶೇರ್ ಮಾಡಿರುವ ವಿಡೀಯೋವನ್ನು ತುಂಬಾ ಜನ ಮೆಚ್ಚಿಕೊಂಡಿದ್ದು, ಹಾರ್ಟ್ ಇಮೋಜಿಗಳೇ (heart emojis)ಕಾಮೆಂಟ್ ಸೆಕ್ಷನ್ ನಲ್ಲಿ ತುಂಬಿಕೊಂಡಿದೆ. ಈ ಫ್ಯಾಮಿಲಿಯ ಮುದ್ದಾದ ವಿಡಿಯೋ ನೋಡಿ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ.
ಫೋಟೊಗಳಲ್ಲಿ ರಾಕಿಂಗ್ ಸ್ಟಾರ್ ಯಶ್ (Rocking Star Yash) ಮಿಸ್ ಆಗಿದ್ದು, ಯಶ್ ಬಾಸ್ ಮಿಸ್ಸಿಂಗ್, ವಿ ಮಿಸ್ ಬಾಸ್, ಈ ಮುದ್ದಾದ ಫ್ಯಾಮಿಲಿಗೆ ಯಾವುದೇ ದೃಷ್ಟಿ ಬೀಳದಿರಲಿ. ಯಥರ್ವ್ ನ್ನು ನೋಡುತ್ತಿದ್ದರೆ ಮಿನಿ ರಾಜಾ ಹುಲಿ ಲುಕ್ ಕಾಣಿಸುತ್ತಿದೆ ಅಂತಾನೂ ಕಾಮೆಂಟ್ ಮಾಡಿದ್ದಾರೆ.
ಇನ್ನೂ ರಾಧಿಕಾ ಪಂಡಿತ್ ತಮ್ಮ ಹಲವು ಫೋಟೊಗಳನ್ನು ಶೇರ್ ಮಾಡಿದ್ದು, 41 ರ ಹರೆಯದಲ್ಲೂ ನಟಿಯ ಈ ಸುಂದರ ಲುಕ್, ಫಿಟ್ನೆಸ್ ನೋಡಿ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಫಾರೆವರ್ ಬ್ಯೂಟಿ ಕ್ವೀನ್ ಎಂದು ಹಾಡಿ ಹೊಗಳಿದ್ದಾರೆ.
ಮತ್ತೊಬ್ಬರು ಕಾಮೆಂಟ್ ಮಾಡಿ ಅವರ ಇಡೀ ವಿಶ್ವಕ್ಕೆ, ಮಕ್ಕಳಿಗೆ, ಗಂಡನಿಗೆ, ಹೆತ್ತವರಿಗೆ ರಾಧಿಕಾ ಪಂಡಿತ್ ಬೆನ್ನೆಲುಬಾಗಿದ್ದಾರೆ... ಯಶಸ್ವಿ ನಟಿ, ಅದ್ಭುತ ತಾಯಿ, ಪ್ರೀತಿಯ ಹೆಂಡತಿ ಮತ್ತು ಅದ್ಭುತ ಮಗಳು... ಅವರನ್ನು ಎಂದಿಗೂ ಭೇಟಿಯಾಗದಿದ್ದರೂ, ಅವರ ಸಂದರ್ಶನಗಳಿಂದ ಅವರು ಒಬ್ಬ ಆತ್ಮೀಯ ವ್ಯಕ್ತಿ ಅನ್ನೋದು ಸಹ ತಿಳಿದು ಬಂದಿದೆ... ಟಚ್‌ವುಡ್ ಮತ್ತು ದೇವರು ಆಶೀರ್ವದಿಸಲಿ. ಎಂದಿದ್ದಾರೆ.