ಕನ್ನಡದಲ್ಲಿ ಮುಂದೆ ಬರಲಿರೋ 9 ಬಿಗ್ ಸಿನಿಮಾಗಳು: ದರ್ಶನ್, ಧ್ರುವ ಸರ್ಜಾ, ಉಪ್ಪಿ ಕ್ರೇಜ್ ಬಲು ಜೋರು!

Published : Apr 04, 2025, 05:44 PM ISTUpdated : Apr 04, 2025, 05:47 PM IST

ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ 70ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗಿವೆ. ಒಂದಕ್ಕೂ ದೊಡ್ಡ ಗೆಲುವು ಸಿಕ್ಕಿಲ್ಲ. ಮುಂದೆ ಬರುವ ದೊಡ್ಡ ಸಿನಿಮಾಗಳು ಯಾವುವು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

PREV
19
ಕನ್ನಡದಲ್ಲಿ ಮುಂದೆ ಬರಲಿರೋ 9 ಬಿಗ್ ಸಿನಿಮಾಗಳು: ದರ್ಶನ್, ಧ್ರುವ ಸರ್ಜಾ, ಉಪ್ಪಿ ಕ್ರೇಜ್ ಬಲು ಜೋರು!

1. ಕಾಂತಾರ 1: ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ಈ ಸಿನಿಮಾ ಅದ್ಧೂರಿಯಾಗಿ ಮೂಡಿಬರುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ತಂತ್ರಜ್ಞರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅದ್ದೂರಿ ತಾರಾಗಣ ಇದೆ. ಅ.2ರಂದು ರಿಲೀಸ್ ಆಗುತ್ತಿದೆ.

29

2. ಕೆಡಿ: ಟೈಟಲ್‌ ಟೀಸರ್‌ನಿಂದಲೇ ಕುತೂಹಲ ಮೂಡಿಸಿದೆ. ಧ್ರುವ ಸರ್ಜಾ, ಜೋಗಿ ಪ್ರೇಮ್‌ ಸಿನಿಮಾ ಎಂದ ಮೇಲೆ ಪ್ರೇಕ್ಷಕರನ್ನು ಥಿಯೇಟರ್‌ಗಳಿಗೆ ಕರೆಸೋದು ಪಕ್ಕಾ. ಜತೆಗೆ ರೆಟ್ರೋ ದಿನಗಳ ಗ್ಯಾಂಗ್‌ಸ್ಟರ್‌ ಕತೆ. 

39

3. 45: ಅರ್ಜುನ್‌ ಜನ್ಯ ನಿರ್ದೇಶನದ, ರಮೇಶ್‌ ರೆಡ್ಡಿ ಅದ್ದೂರಿ ನಿರ್ಮಾಣದ ಚಿತ್ರ. ಶಿವಣ್ಣ, ಉಪೇಂದ್ರ, ರಾಜ್‌ ಬಿ ಶೆಟ್ಟಿ ಈ ಸಿನಿಮಾದ ಹೆಗ್ಗಳಿಕೆ.

49

4. ಡೆವಿಲ್‌: ಮಿಲನ ಪ್ರಕಾಶ್‌ ನಿರ್ದೇಶನದ ಚಿತ್ರ. ಜತೆಗೆ ದರ್ಶನ್‌ ಎಂಬ ದೈತ್ಯ ಪ್ರತಿಭೆ. ದೊಡ್ಡ ಸಂಖ್ಯೆಯಲ್ಲಿರುವ ಅವರ ಅಭಿಮಾನಿಗಳು ಈ ಚಿತ್ರವನ್ನು ಕೈ ಬಿಡಲ್ಲ ಎನ್ನುವ ಭರವಸೆ.

59

5. ಲ್ಯಾಂಡ್‌ ಲಾರ್ಡ್‌: ದುನಿಯಾ ವಿಜಯ್‌ ಸಿನಿಮಾ. ಖ್ಯಾತ ನಿರ್ದೇಶಕ ಜಡೇಶ್‌ ಕುಮಾರ್‌ ಹಂಪಿ ನೈಜ ಘಟನೆ ಆಧರಿಸಿದ ಕತೆ ಹೇಳುತ್ತಿದ್ದಾರೆ.

69

6. ಯುವರ್ಸ್ ಸಿನ್ಸಿಯರ್ಲಿ ರಾಮ್: ರಮೇಶ್‌ ಅರವಿಂದ್‌ ಹಾಗೂ ಗಣೇಶ್‌ ನಟನೆಯ, ನಿರ್ಮಾಪಕ ವಿಖ್ಯಾತ್‌ ಅವರ ಮೊದಲ ನಿರ್ದೇಶನದ ಚಿತ್ರ.

79

7. ಎಕ್ಕ: ಪಕ್ಕಾ ಮಾಸ್‌ ಹಾಗೂ ಭೂಗತ ಲೋಕದ ಕತೆ. ರೋಹಿತ್‌ ಪದಕಿ ಹಾಗೂ ಯುವ ರಾಜ್‌ಕುಮಾರ್‌ ಇಬ್ಬರಿಗೂ ಒಂದು ಗೆಲುವು ಬೇಕಿದೆ. ಈ ಸಿನಿಮಾ ಆ ಗೆಲುವು ದೊರಕಿಸಿಕೊಡುವಂತಿದೆ.

89

8. ಕರಾವಳಿ: ನಿರ್ದೇಶಕ ಗುರುದತ್ತ ಗಾಣಿಗ ಒಳ್ಳೆಯ ಕತೆ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಕಾರಣಕ್ಕೆ. ಜತೆಗೆ ಚಿತ್ರದಲ್ಲಿನ ಪ್ರಜ್ವಲ್‌ ದೇವರಾಜ್‌ ಅವರ ಗೆಟಪ್‌, ಚಿತ್ರದ ಮೇಕಿಂಗ್‌ ಬೇರೆ ರೀತಿ ಇದೆ.

99

9. ಸಿಟಿ ಲೈಟ್ಸ್: ದುನಿಯಾ ವಿಜಯ್‌ ನಿರ್ದೇಶನದ ಚಿತ್ರ. ವಿನಯ್‌ ರಾಜ್‌ಕುಮಾರ್, ದುನಿಯಾ ವಿಜಯ್‌ ಪುತ್ರಿ ಮೋನಿಷಾ ನಟನೆಯ ಚಿತ್ರ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories