ಕಾಲ ಬದಲಾದ್ರೂ ಈ ಸೌಂಡ್​ ಮಾತ್ರ ಬದಲಾಗಲ್ಲ ನೋಡಿ! Radhika Pandit ಕುತೂಹಲದ ಪೋಸ್ಟ್​

Published : Feb 08, 2026, 01:34 PM IST

ನಟಿ ರಾಧಿಕಾ ಪಂಡಿತ್ ತಮ್ಮ ಮಗ ಯಥರ್ವ್ ಜೊತೆಗಿನ ಬಾಲ್ಯದ ಸಿಹಿ ನೆನಪೊಂದನ್ನು ಹಂಚಿಕೊಂಡಿದ್ದಾರೆ.   ಮಗ ಯಥರ್ವ್ ಮೊದಲ ಬಾರಿಗೆ ಖುಷಿಪಟ್ಟ ಕ್ಷಣವನ್ನು ಸೆರೆಹಿಡಿದು, ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಈ ಸಿಹಿ ತಿಂಡಿಯ ಕ್ರೇಜ್ ಕಾಲ ಬದಲಾದರೂ ಕಡಿಮೆಯಾಗಿಲ್ಲ ಎಂದು ಬರೆದುಕೊಂಡಿದ್ದಾರೆ.

PREV
16
ಸ್ಯಾಂಡಲ್​ವುಡ್​ ಸಿಂಡ್ರೆಲ್ಲಾ

ಸ್ಯಾಂಡಲ್​ವುಡ್​ ಸಿಂಡ್ರೆಲ್ಲಾ ಎಂದೇ ಖ್ಯಾತಿ ಪಡೆದಿರುವ ನಟಿ ರಾಧಿಕಾ ಪಂಡಿತ್​, ಸದ್ಯ ಮಗಳು, ಕುಟುಂಬ ಎಂದು ಬಿಜಿಯಾಗಿದ್ದಾರೆ. ನಟಿ ಕಾಣಸಿಗ್ತಿರೋದು ಸೋಷಿಯಲ್​ ಮೀಡಿಯಾದಲ್ಲಿ ಮಾತ್ರ. ರಾಕಿಂಗ್ ಸ್ಟಾರ್ ಯಶ್​ (Yash) ಜೊತೆ 2016ರಲ್ಲಿ ಮದುವೆಯಾದ ರಾಧಿಕಾ ಸದ್ಯ ಐರಾ ಹಾಗೂ ಯಥರ್ವ್ ಎಂಬ ಮಕ್ಕಳ ಲಾಲನೆಯಲ್ಲಿ ಬಿಜಿಯಾಗಿದ್ದಾರೆ.

26
ಸೋಷಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​

ಹೆಚ್ಚಾಗಿ ಅವರು ಮಕ್ಕಳ ಜೊತೆಗಿನ ಫೋಟೋಗಳು ಹಂಚಿಕೊಳ್ಳುತ್ತಾರೆ. ಪತಿ ಯಶ್​ ಮತ್ತು ಮಕ್ಕಳ ಜೊತೆ ಆಗಾಗ್ಗೆ ಟೂರ್​ಗೆ ಹೋಗುತ್ತಾ ಅದರ ಫೋಟೋಗಳನ್ನೂ ಶೇರ್​ ಮಾಡಿಕೊಳ್ಳುತ್ತಾರೆ. ರಾಧಿಕಾ ಪಂಡಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. 30 ಲಕ್ಷಕ್ಕೂ ಅಧಿಕ ಮಂದಿ ಫಾಲೋವರ್ಸ್​ ಇದ್ದಾರೆ.

36
ಮಗನ ಜೊತೆ ಪೋಸ್ಟ್​

ಇದೀಗ, ನಟಿ ಮಗ ಯಥರ್ವ್​ ಜೊತೆ ಕುತೂಹಲದ ಪೋಸ್ಟ್​ ಒಂದನ್ನು ಶೇರ್​ ಮಾಡಿದ್ದಾರೆ. ಅದರಲ್ಲಿ ಅವರು, ಚಿಕ್ಕವರಾಗಿದ್ದಾಗ, ದೂರದಿಂದ ಕೇಳಿಸುತ್ತಿದ್ದ ಆ ಪರಿಚಿತ ಧ್ವನಿ… ಅದನ್ನು ಕೇಳಿದ ಕ್ಷಣವೇ ಮನಸ್ಸು ಖುಷಿಯಿಂದ ತುಂಬುತ್ತಿತ್ತು. ಯಾಕೆಂದರೆ, ಏನು ಬರ್ತಿದೆ ಅಂತ ನಮಗೆ ಗೊತ್ತೇ ಇರುತ್ತಿತ್ತು. ಇಂದು ಅದೇ ಕ್ಷಣವನ್ನು ಯಥರ್ವ್ ಮೊದಲ ಬಾರಿ ಅನುಭವಿಸುತ್ತಿರುವುದನ್ನು ನೋಡೋದು ತುಂಬಾ ವಿಶೇಷ. ಅವನ ಕಣ್ಣಲ್ಲಿದ್ದ ಕುತೂಹಲ, ಮುಖದಲ್ಲಿದ್ದ ನಗು ಅಮೂಲ್ಯ. ಯಾವ ಸಿಹಿ ತಿಂಡಿ ಅಂತ ಗೆಸ್ ಮಾಡಿ ನೋಡೋಣ ಎಂದು ಅವರು ಬರೆದಿದ್ದಾರೆ.

46
ಇದೇ ಅದು

ಸಹಜವಾಗಿ ಅದು ಬೊಂಬಾಯಿ ಮಿಠಾಯಿ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಅಷ್ಟಕ್ಕೂ ಕಾಲ ಯಾವುದಾದರೇನು, ಊರು ಯಾವುದಾದರೇನು, ಸಾಮಾನ್ಯ ಜನರಾದರೇನು, ಸೆಲೆಬ್ರಿಟಿಯಾದರೇನು ಒಟ್ಟಿನಲ್ಲಿ ಕೆಲವೊಂದು ಬದಲಾಗುವುದೇ ಇಲ್ಲ ನೋಡಿ. ಅಂಥದ್ದರಲ್ಲಿ ಒಂದು ಬೊಂಬಾಯಿ ಮಿಠಾಯಿವಾಲಾ ಅದನ್ನು ಮಾರುವ ಸಂದರ್ಭದಲ್ಲಿ ಬರುವ ಶಬ್ದ. ಆಗಲೂ ಅದೇ ಶಬ್ದವಿತ್ತು. ಈಗಲೂ ಇದೇ ಶಬ್ದವಿದೆ.

56
ಮಕ್ಕಳು ಯಾರೇ ಇರಲಿ

ಮಕ್ಕಳು ಎಂದರೆ, ಮಕ್ಕಳು ಮಾತ್ರ. ಅವರು ಶ್ರೀಮಂತರು, ಬಡವರು ಎಂದೆಲ್ಲಾ ಇಲ್ಲವೇ ಇಲ್ಲ. ಸ್ಟಾರ್​ ಹೋಟೆಲ್​ಗಳ ತಿನಿಸು ತಿಂದರೂ, ಬೀದಿಬದಿಯ ಇಂಥ ತಿನಿಸು ಅವರನ್ನು ಆಕರ್ಷಿಸದೇ ಬಿಡಲಾರದು. ಅದನ್ನೇ ರಾಧಿಕಾ ಪಂಡಿತ್​ ಶೇರ್​ ಮಾಡಿಕೊಂಡಿದ್ದಾರೆ.

66
ಬದಲಾದ ಬಣ್ಣ

ಬೊಂಬಾಯಿ ಮಿಠಾಯಿಯಲ್ಲಿ ರಾಸಾಯನಿಕ ಬಣ್ಣದ ಬಳಕೆ ಆಗುತ್ತಿರುವುದರಿಂದ ಬಣ್ಣ ಬ್ಯಾನ್​ ಮಾಡಲಾಗಿದ್ದು, ಇದೀಗ ಬಿಳಿ ಬಣ್ಣದಲ್ಲಿ ಮಾರಾಟವಾಗುತ್ತಿದೆ. ಅದು ಹಲವು ಮಕ್ಕಳನ್ನು ಅಷ್ಟು ಆಕರ್ಷಿಸುತ್ತಿಲ್ಲವಾದರೂ ಕ್ರೇಜ್​ ಅಂತೂ ಎಲ್ಲಾ ಕಾಲಕ್ಕೂ ಇದ್ದೇ ಇದೆ ನೋಡಿ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories