ಹಾಸನ ನಿವೇಶನ ವಿವಾದ: ನಿರ್ಮಾಪಕಿ ಪುಷ್ಮಾ ಅರುಣ್‌ಕುಮಾರ್‌ಗೆ ನ್ಯಾಯಾಲಯದಲ್ಲಿ ಹಿನ್ನಡೆ

Published : Jan 15, 2026, 11:09 AM IST

ಹಾಸನದ ನಿವೇಶನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಪುಷ್ಪಾ ಅರುಣ್‌ಕುಮಾರ್‌ ಅವರಿಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ. ನಿವೇಶನದ ಮಾಲೀಕತ್ವದ ಬಗ್ಗೆ ದೇವರಾಜು ಎಂಬುವವರ ಪರವಾಗಿ ನ್ಯಾಯಾಲಯ ಆದೇಶ ನೀಡಿದ್ದು, ಈ ಆದೇಶಕ್ಕೆ ತಡೆ ಕೋರಿ ಪುಷ್ಪಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿಲ್ಲ. 

PREV
15
ಪುಷ್ಮಾ ಅರುಣ್‌ಕುಮಾರ್‌ಗೆ ಹಿನ್ನಡೆ

ಹಾಸನದಲ್ಲಿನ ನಿವೇಶನ ವ್ಯಾಜ್ಯ ಪ್ರಕರಣಕ್ಕೆ ಸಂಬಂಧ ನ್ಯಾಯಾಲಯದ ಮೊರೆ ಹೋಗಿದ್ದ ಸ್ಯಾಂಡಲ್‌ವುಡ್ ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್‌ಗೆ ಹಿನ್ನಡೆಯಾಗಿದೆ. ಜೆಎಂಎಫ್‌ಸಿ‌ ಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ಕೋರಿ ಹಾಸನದ ನಾಲ್ಕನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದ ಮೊರೆ ಹೋಗಿದ್ದರು.

25
ನ್ಯಾಯಾಲಯದ ಆದೇಶ

ಹಾಸನದ ವಿದ್ಯಾನಗರದ ವಿವೇಕಾನಂದ ರಸ್ತೆಯ ಸರ್ವೆ ನಂಬರ್ 90 ರ ನಿವೇಶನ ತಮ್ಮದೆಂದು ದೇವರಾಜು ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. ನಿವೇಶನದ ಮೂಲ ವಾರಸುದಾರರಾದ ಲಕ್ಷ್ಮಮ್ಮ ಎಂಬವರಿಂದ ದೇವರಾಜು ಅವರು ಜಿಪಿಎ ಪಡೆದುಕೊಂಡಿದ್ದರು. ನ್ಯಾಯಾಲಯದಲ್ಲಿ ದಾಖಲೆಗಳನ್ನು ಸಲ್ಲಸಲು ವಿಫಲವಾದ ಹಿನ್ನೆಲೆ ದೇವರಾಜು ಪರವಾಗಿ ನ್ಯಾಯಾಲಯ ಆದೇಶ ನೀಡಿತ್ತು.

35
ನ್ಯಾಯಾಲಯದ ಮೊರೆ ಹೋಗಿದ್ರು ಪುಷ್ಪಾ!

ಈ ಆದೇಶದ ಬಳಿಕ ಜನವರಿ 4ರಂದು ಅಕ್ರಮವಾಗಿ ಹಾಕಲಾಗಿದ್ದ ಕಾಂಪೌಂಡ್‌ನ್ನು ದೇವರಾಜು ತೆರವುಗೊಳಿಸಿದ್ದರು. ಆರು ವರ್ಷಗಳ ಹಿಂದೆ ಪುಷ್ಪಾ ಅರುಣ್‌ಕುಮಾರ್ ನಮ್ಮ ಮನೆಯ ಪಕ್ಕದ ನಿವೇಶನ ಖರೀದಿಸಿದ್ದರು. ನಂತರ ನಮ್ಮ ಒಡೆತನದ ನಿವೇಶನ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ದೇವರಾಜು ನ್ಯಾಯಾಲಯದ ಮೊರೆ ಹೋಗಿದ್ದರು. ಇಲ್ಲಿ ದೇವರಾಜು ಪರವಾಗಿ ನ್ಯಾಯಾಲಯದ ಆದೇಶ ಬಂದಿತ್ತು. ಈ ಆದೇಶಕ್ಕೆ ಶಾಶ್ವತ ತಡೆಕೋರಿ ಪುಷ್ಪಾ ಅರುಣ್‌ಕುಮಾರ್ ನ್ಯಾಯಾಲಯದ ಮೊರೆ ಹೋಗಿದ್ದರು.

45
ಪ್ರತಿವಾದಿಗೆ ನೋಟಿಸ್

ಈ ಸಂಬಂಧ ಪುಷ್ಪಾ ಅರುಣ್‌ಕುಮಾರ್ ಮತ್ತು ನಟರಾಜ್ ಎಂಬವರು ಎರಡು ಪ್ರತ್ಯೇಕ ದೂರು ದಾಖಲಿಸಿದ್ದರು. ಎರಡೂ ಪ್ರಕರಣದಲ್ಲಿ ಅರ್ಜಿದಾರರ ಮನವಿ ಪುರಸ್ಕರಿಸದ ನ್ಯಾಯಾಲಯ, ಪ್ರತಿವಾದಿ ದೇವರಾಜು ಅವರಿಗೆ ಜನವರಿ 31ರಂದು ಹಾಜರಾಗುವಂತೆ ಆದೇಶಿಸಿದೆ.

ಇದನ್ನೂ ಓದಿ: ಕಾರಿನೊಳಗಿನ ಸೀನ್‌ನಿಂದ ಹೆಚ್ಚಿದ ರಾಜಕೀಯ ಒತ್ತಡ, ಟಾಕ್ಸಿಕ್ ಟೀಸರ್ ನಟಿ ಬದುಕಿನಲ್ಲಿ ಕೋಲಾಹಲ

55
ಪುಷ್ಪಾ ಅರುಣ್‌ಕುಮಾರ್‌ಗೆ ಸವಾಲು

ನಾನು ಕೂಡ ನಟ ಯಶ್ ಅವರ ಅಭಿಮಾನಿ. ಆದರೆ ಯಶ್‌ ತಾಯಿ ಪುಷ್ಪ ಅವರ ಬಳಿ ನಿವೇಶನಕ್ಕೆ ಸಂಬಂಧಿಸಿದಂತೆ ಕಾನೂನು ಬದ್ಧ ದಾಖಲೆಗಳಿದ್ದರೆ ಅವುಗಳನ್ನು ಕೂಡಲೇ ಬಹಿರಂಗಪಡಿಸಲಿ. ಅದುಬಿಟ್ಟು ಇಲ್ಲಸಲ್ಲದ ಆರೋಪ ಮಾಡಬಾರದು. ಬೇಕಾದರೆ ಈ ಬಗ್ಗೆ ಧರ್ಮಸ್ಥಳದ ಮಂಜುನಾಥ ಸ್ವಾಮಿ ಆಣೆ ಮಾಡಲು ಸಿದ್ದರಿದ್ದೇವೆ ಎಂದು ನಿವೇಶನದ ಜಿಪಿಎ ಹೊಂದಿರುವ ದೇವರಾಜು ಸವಾಲು ಹಾಕಿದ್ದಾರೆ.

ಇದನ್ನೂ ಓದಿ: Hassan: ಕಾಂಪೌಂಡ್ ತೆರವು ಪ್ರಕರಣ: ಪುಷ್ಪಾ ಅರುಣ್‌ಕುಮಾರ್‌ಗೆ ಸವಾಲು ಹಾಕಿದ ದೇವರಾಜು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories