'ಪ್ರೇಮದ ಊರಲಿ' ಸಿನಿಮಾ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. 'ಈಗಿನ ಕಾಲದಲ್ಲಿ ಕನ್ನಡ ಚಿತ್ರಗಳಿಗೆ ಯಾರು ನೋಡುತ್ತಾರೆ, ಕನ್ನಡ ಸಿನಿಮಾರಂಗಕ್ಕೆ ಉಳಿಗಾಲವಿಲ್ಲ' ಎಂಬಂತಹ ಮಾತುಗಳ ನಡುವೆ ಈ ಸಿನಿಮಾ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದೆ. ಈ ಸಿನಿಮಾದ ಅಸಲಿ ಶಕ್ತಿ ಏನು? ನೋಡಿ..
ಈ ವರ್ಷದಲ್ಲಿ (2026) ಸ್ಯಾಂಡಲ್‌ವುಡ್ ಬ್ಲಾಕ್ ಬಾಸ್ಟರ್ ಸಿನಿಮಾ ‘ಪ್ರೇಮದ ಊರಲಿ’. ಕೇವಲ 60 ಶೋಗಳ ಮೂಲಕ ತನ್ನ ಜರ್ನಿ ಆರಂಭಿಸಿತ್ತು. ಆದರೆ, ಕಾಲ ಕಳೆದಂತೆ ಕನ್ನಡ ಸಿನಿಪ್ರೇಕ್ಷಕರು ಸಿನಿಮಾವನ್ನು ಮೆಚ್ಚಿ ಹಾರೈಸಿದ ಪರಿಣಾಮ ಕನ್ನಡ ಚಿತ್ರರಂಗಕ್ಕೆ ಹೊಸ ಆಶಾಕಿರಣವಾಗಿ ಬದಲಾಯ್ತು. ಶುರುವಿನಲ್ಲಿ ಇದ್ದ ಕಡಿಮೆ ಶೋ ಹಾಗೂ ಚಿತ್ರಮಂದಿರಗಳ ಸಂಖ್ಯೆ ಕೊನೆಗೆ 100 ಚಿತ್ರಮಂದಿರಗಳನ್ನು ಆವರಿಸಿಕೊಂಡು, 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ ಇನ್ನೂ ಪ್ರದರ್ಶನ ಕಾಣುತ್ತಿರುವ ಹೆಮ್ಮಯ ಸಿನಿಮಾ ಅಗಿ ನಿಂತಿದೆ. ತಮ್ಮ ತಂಡದ ಈ 'ಸಿನಿಮಾ ಜರ್ನಿ' ಕುರಿತು ಸಂತು ಪಾತ್ರಧಾರಿ ಶ್ರೀರಾಮ್ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
26
ಶ್ರೀರಾಮ್ ಹೇಳಿರುವುದೇನು?
ನಮ್ಮ 'ಪ್ರೇಮದ ಊರಲಿ' ಸಿನಿಮಾ 50 ದಿನಗಳನ್ನು ಪೂರೈಸಿದೆ. ಈ ಸಂಭ್ರಮವನ್ನು ಹೇಗೆ ಆಚರಿಸಿಕೊಳ್ಳಬೇಕು ಎಂದು ಗೊತ್ತಾಗಲಿಲ್ಲ. ಇದೀಗ ವಿಡಿಯೋ ಮೂಲಕ ಪ್ರತಿಯೊಬ್ಬರಿಗೂ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇನೆ. ಮೊದಲ ದಿನದಿಂದಲೂ 50 ದಿನಗಳವರೆಗೆ ಸಿನಿಮಾವನ್ನು ನೋಡಿ, ಇಷ್ಟಪಟ್ಟು, ಪ್ರೀತಿಸಿ, ಹಾರೈಸಿ ಆಶೀರ್ವದಿಸಿದ ಎಲ್ಲ ಸಿನಿಪ್ರೇಕ್ಷಕರಿಗೂ ಹಾಗೂ ತಂತ್ರಜ್ಞರಿಗೂ ವಿಶೇಷ ಕೃತಜ್ಞತೆಗಳು'
36
'ನಾನು ಯಾವತ್ತೂ ರೈತ ಆದವನಲ್ಲ, ರೈತರ ಕೆಲಸ ಮಾಡಿದವನಲ್ಲ. ಆದರೆ, ಈ ಸಿನಿಮಾ ಮೂಲಕ ಮಣ್ಣನ್ನು ಸ್ಪರ್ಶ ಮಾಡಿದ್ದು ಯಾವತ್ತಿಗೂ ಮರೆಯುವುದಕ್ಕೆ ಸಾಧ್ಯವಿಲ್ಲ. ನಿರ್ದೇಶಕರು, ನಿರ್ಮಾಪಕರು, ಸಿನಿಮಾ ಎಡಿಟರ್ಸ್, ಕ್ಯಾಮರಾಮನ್ ರಾಜಕಾಂತ್ ಹಾಗೂ ಚಿತ್ರದ ಇತರ ಎಲ್ಲ ತಂತ್ರಜ್ಞರ ಪರಿಶ್ರಮ ಮತ್ತು ಅವರ ಬದ್ಧತೆಯನ್ನು ನೆನಪಿಸಿಕೊಳ್ಳಬೇಕು. ಅವರೆಲ್ಲರ ಕೊಡುಗೆ, ಪರಿಶ್ರಮದಿಂದ ಈ ಸಿನಿಮಾ ಜನರಿಗೆ ಇಷ್ಟವಾಗುವಂತೆ ಮೂಡಿಬಂದಿದೆ.
ರಮಿಕಾ ಶಿವು ಅವರಿಗೆ ಇದು ಮೊದಲ ಸಿನಿಮಾ. ತುಂಬಾ ಚೆನ್ನಾಗಿ ನಟನೆ ಮಾಡಿದ್ದಾರೆ. ಇನ್ನು ತಪಸ್ವಿನಿ ಅವರದು ಕಿರುಚಾಡುವ ಪಾತ್ರ, ಹಾಗೂ ಹಲವು ಕಡೆ ಡೈಲಾಗ್ ಇಲ್ಲದೇ ಕಣ್ಣಲ್ಲಿಯೇ ಅಭಿನಯಿಸಿರುವ ಪಾತ್ರ. ಅದನ್ನು ಅವರು ಚೆನ್ನಾಗಿ ಮಾಡಿದ್ದಾರೆ. ನಿರ್ದೇಶಕರು ನನ್ನಿಂದ, ಅವರೆಲ್ಲರಿಂದ ಅಭಿನಯವನ್ನು ಚೆನ್ನಾಗಿ ಹೊರತೆಗೆಸಿದ್ದಾರೆ. ಇನ್ನು ನನ್ನ ಅಪನ್ನ ನಾಗಣ್ಣನ ಪಾತ್ರದಲ್ಲಿ ರಂಗಾಯಣ ರಘು ಸರ್ ಅವರೊಂದಿಗೆ ಕೆಲಸ ಮಾಡಿದ್ದು ನನ್ನ ಕೆರಿಯರ್‌ನಲ್ಲಿ ಇಲ್ಲಿಯವರೆಗಿನ ಅದ್ಭುತ ಅನುಭವ.
ಈ ಸಿನಿಮಾವನ್ನು ನೋಡಿ, ಪದೇ ಪದೇ ವೀಕ್ಷಿಸಿ ಪ್ರೋತ್ಸಾಹಿಸಿದ ಎಲ್ಲಾ ಜನತೆಗೆ ಕೋಟಿ ಕೋಟಿ ನಮನ. ನಿಮ್ಮನ್ನೆಲ್ಲಾ ಭೇಟಿ ಮಾಡುವ ಆಸೆಯಿದೆ, ಆದರೆ ಆಗುತ್ತಿಲ್ಲ. ವಿಶೇಷವಾಗಿ ಉತ್ತರ ಕರ್ನಾಟಕದ ಜನತೆಗೆ ದಯವಿಟ್ಟು ಕ್ಷಮೆ ಇರಲಿ ಎಂದುಕೇಳಿಕೊಳ್ಳುತ್ತೇನೆ. ನಿಮ್ಮ ಕಡೆ ಬರುವ ಪ್ಲ್ಯಾನ್ ಮಾಡುತ್ತಿದ್ದೇವೆ. ಆದರೆ, ಆಗುತ್ತಿಲ್ಲ. ಖಂಡಿತ ಆದಷ್ಟು ಬೇಗ ಬಂದೇ ಬರುತ್ತೀವಿ. ಎಲ್ಲಾ ಕನ್ನಡಿಗರಿಗೆ, ಸಿನಿಪ್ರೇಕ್ಷಕರಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದೇನೆ' ಎಂದು 'ಪ್ರೇಮದ ಊರಲಿ' ಸಿನಿಮಾದ 'ಸಂತು' ಪಾತ್ರಧಾರಿ ಶ್ರೀರಾಮ್ ಹೇಳಿದ್ದಾರೆ.
ಅಂದಹಾಗೆ, 'ಪ್ರೇಮದ ಊರಲಿ' ಸಿನಿಮಾ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. 'ಈಗಿನ ಕಾಲದಲ್ಲಿ ಕನ್ನಡ ಚಿತ್ರಗಳಿಗೆ ಯಾರು ನೋಡುತ್ತಾರೆ, ಕನ್ನಡ ಸಿನಿಮಾರಂಗಕ್ಕೆ ಉಳಿಗಾಲವಿಲ್ಲ' ಎಂಬಂತಹ ಮಾತುಗಳ ನಡುವೆ ಈ ಸಿನಿಮಾ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದೆ. ಈ ಸಿನಿಮಾದ ಅಸಲಿ ಶಕ್ತಿ ಕಥೆ ಹಾಗು ಚಿತ್ರಕಥೆ ಜೊತೆಗೆ ಸಂಭಾಷಣೆ, ಜೊತೆಗೆ ಎಲ್ಲಾ ಕಲಾವಿದರ ಅಮೋಘ ಅಭಿನಯ. ಯಾವುದೇ ಅಬ್ಬರದ ಪ್ರಚಾರವಿಲ್ಲ, ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಇಲ್ಲದೇ ₹100 ಕೋಟಿ ಕ್ಲಬ್ ಸೇರಿದ ಬ್ಲಾಕ್‌ಬಸ್ಟರ್ ಸಿನಿಮಾ ಈಗ ಅರ್ಧಶತಕ ಪೂರೈಸಿ ಮುಂದುವರೆದಿದೆ. ಈ ಕುರಿತು 'ಸಂತು' ಪಾತ್ರಧಾರಿ ನಟ ಶ್ರೀರಾಮ್ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಸಿನಿಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸಿ ಭಾವುಕ ಮಾತುಗಗಳ ವಿಡಿಯೋ ಹಂಚಿಕೊಂಡು ಮೆಚ್ಚುಗೆ ಗಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.